2W Finance: Ather ಎನರ್ಜಿ ಕಂಪನಿಯು IDFC ಬ್ಯಾಂಕ್‌ನೊಂದಿಗೆ ಒಡಂಬಡಿಕೆ

Ather 450X

ನವದೆಹಲಿ: ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಏಥರ್ ಎನರ್ಜಿಯು ಐಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, EV ಹಣಕಾಸು ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ.

ಇದರಿಂದ ಕಂಪನಿಯ 450ಎಕ್ಸ್ ಅಥವಾ 450 ಪ್ಲಸ್ ಸ್ಕೂಟರ್ ಖರೀದಿಸುವವರು ಆನ್‌ರೋಡ್ ಬೆಲೆಯ ಶೇ 5ರಷ್ಟನ್ನು ಪಾವತಿಸಿದರೆ ಸಾಕು. ಸ್ಕೂಟರ್‌ ತಮ್ಮದಾಗಿಸಿಕೊಳ್ಳಬಹುದು.

ಕೇವಲ 45 ನಿಮಿಷಗಳಲ್ಲಿ ಯಾವುದೇ ಪ್ರೊಸೆಸ್ಸಿಂಗ್ ಶುಲ್ಕವಿಲ್ಲದೆ ವಾಹನ ಸಾಲ ಸೌಲಭ್ಯ ಪಡೆದು, ಸ್ಕೂಟರ್ ತೆಗೆದುಕೊಂಡು ಹೋಗಬಹುದಾಗಿದೆ. ಜತೆಗೆ ಏಥರ್‌ನ ಹೊಸ ಸ್ಕೂಟರ್ ಖರೀದಿಗೆ ತಮ್ಮ ಹಳೆಯ ವಾಹನವನ್ನು ಎಕ್ಸ್‌ಚೇಂಜ್‌ ಮಾಡುವುದಾದರೆ ಯಾವುದೇ ಹಣವನ್ನು ಡೌನ್‌ಪೇಮೆಂಟ್ ಮಾಡುವ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ.

ಏಥರ್ ಎನರ್ಜಿಯ ಹಿರಿಯ ಅಧಿಕಾರಿಗಳ ಪ್ರಕಾರ, ’48 ತಿಂಗಳ ಸಾಲ ತೀರಿಸುವ ಅವಧಿಯ ಈ ಯೋಜನೆ ಏಥರ್ ಎಲೆಕ್ಟ್ರಿಕ್ ವಾಹನ ಮಾಲೀಕರಾಗುವವರಿಗೆ ಸಿಗಲಿದೆ. ಹೀಗಾಗಿ, 125 ಸಿ.ಸಿ. ಸ್ಕೂಟರ್ ಖರೀದಿಸುವ ಗ್ರಾಹಕರ ಮಾಸಿಕ ಖರ್ಚಿನಷ್ಟೇ ಏಥರ್ ಸ್ಕೂಟರ್ ಮಾಲೀಕರ ಖರ್ಚೂ ಇರಲಿದೆ. ಇದರಿಂದ ಏಥರ್‌ ಸ್ಕೂಟರ್‌ ಹೆಚ್ಚು ಜನರು ಹೊಂದುವಂತಾಗಲಿ ಎಂಬುದು ನಮ್ಮ ಉದ್ದೇಶ’ ಎಂದಿದ್ದಾರೆ.

2022ರ ಅಕ್ಟೋಬರ್‌ನಲ್ಲಿ 8,213 ಸ್ಕೂಟರ್‌ಗಳನ್ನು ಏಥರ್ ಮಾರಾಟ ಮಾಡಿತ್ತು. ಜತೆಗೆ ದೇಶದ 55 ನಗರಗಳಲ್ಲಿ 600 ಫಾಸ್ಟ್‌ ಚಾರ್ಜಿಂಗ್ ಸ್ಟೇಷನ್‌ಗಳನ್ನೂ ಸ್ಥಾಪಿಸಿತ್ತು. 2023ರಲ್ಲಿ 1400 ಚಾರ್ಜಿಂಗ್ ಕೇಂದ್ರಗಳನ್ನೂ ಹಾಗೂ 100 ನಗರಗಳಲ್ಲಿ 150 ಮಳಿಗೆಗಳನ್ನು ಆರಂಭಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ