ಬೆಂಗಳೂರು: ಭಾರತದ ಮುಂಚೂಣಿ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ಎರಡು ಮಾದರಿಯ ಕಾರುಗಳಲ್ಲಿ ಫ್ಯೂಯಲ್ ಪಂಪ್ ಮೋಟಾರ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಪರಿಹರಿಸಲು 16 ಸಾವಿರ ಕಾರುಗಳನ್ನು ಮರಳಿ ಕರೆಯಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ.
ಮಾರುತಿ ಬಲೆನೊ ಮಾದರಿಯ 11,851 ಕಾರುಗಳು ಹಾಗೂ ವ್ಯಾಗನ್–ಆರ್ನ 4,190 ಕಾರುಗಳಲ್ಲಿ ಫ್ಯೂಯಲ್ ಪಂಪ್ ಮೋಟಾರಿನಲ್ಲಿ ದೋಷ ಕಂಡುಬಂದಿತ್ತು. ಈ ಕಾರುಗಳು 2019ರ ಜುಲೈನಿಂದ ನವೆಂಬರ್ ಅವಧಿಯಲ್ಲಿ ತಯಾರಾಗಿರುವುದಾಗಿವೆ.
‘ನಿರ್ದಿಷ್ಟ ಅವಧಿಯಲ್ಲಿ ತಯಾರಾದ ಬಲೆನೊ ಮತ್ತು ವ್ಯಾಗನ್ ಆರ್ ಕಾರುಗಳಲ್ಲಿನ ಫ್ಯೂಯಲ್ ಪಂಪ್ ಮೋಟಾರುಗಳಲ್ಲಿ ದೋಷ ಇರುವ ಸಾಧ್ಯತೆ ಇದೆ. ಈ ಸಮಸ್ಯೆ ಇದ್ದಲ್ಲಿ ಎಂಜಿನ್ ಬಂದ್ ಆಗುವ ಅಥವಾ ಸ್ಟಾರ್ಟ್ ಆಗುವಲ್ಲಿ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ’ ಎಂದು ಮಾರುತಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.