ಹಲವು ಹೊಸತುಗಳೊಂದಿಗೆ Toyota ಇನ್ನೋವಾ ಕ್ರಿಸ್ಟಾ ಜಿಎಕ್ಸ್‌+ ಬಿಡುಗಡೆ

ಟೊಯೊಟಾ ಇನ್ನೋವಾ ಕ್ರಿಸ್ಟ್ ಜಿಎಕ್ಸ್‌+

ಬೆಂಗಳೂರು: ಶ್ರೇಷ್ಠ ಗುಣಮಟ್ಟದ ಲೆದರ್ ಸೀಟ್‌ಗಳು, ರೇರ್ ಕ್ಯಾಮೆರಾ, ಸ್ವಯಂ ಚಾಲಿತ ಇಬ್ಬದಿಯ ಮಿರರ್‌ಗಳು, ಡೈಮಂಡ್‌ ಕಟ್‌ ಅಲಾಯ್ ವೀಲ್, ವುಡನ್‌ ಪ್ಯಾನಲ್‌ ಹೀಗೆ 14 ಹೊಸ ಫೀಚರ್‌ಗಳೊಂದಿಗೆ ಟೊಯೊಟಾ ಇನ್ನೊವಾ ಕ್ರಿಸ್ಟಾ ಜಿಎಕ್ಸ್‌+ ಮಾದರಿಯನ್ನು ಬಿಡುಗಡೆಗೊಳಿಸಿರುವುದಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹೇಳಿದೆ.

2.4ಲೀ ಡೀಸೆಲ್ ಎಂಜಿನ್‌ ಹೊಂದಿರುವ ಈ ಕಾರಿನಲ್ಲಿ ಇಕೊ ಹಾಗೂ ಪವರ್‌ ಡ್ರೈವ್ ಮೋಡ್ ಇರುವ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಇದೆ. 2005ರಲ್ಲಿ ಬಿಡುಗಡೆಯಾದ ಇನ್ನೋವಾ ಈವರೆಗೂ ಸುಮಾರು ಹತ್ತೂವರೆ ಲಕ್ಷ ಯೂನಿಟ್‌ಗಳ ಮಾರಾಟ ಕಂಡಿದೆ. ಹೀಗಾಗಿ ಎಂಪಿವಿ ಮಾರುಕಟ್ಟೆಯಲ್ಲಿ ಈಗಲೂ ಇನ್ನೋವಾ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಹೊಸ ಇನ್ನೋವಾ ಜಿಎಕ್ಸ್‌+ನಲ್ಲಿ 7 ಅಥವಾ 8 ಆಸನಗಳ ಸೌಲಭ್ಯವುಳ್ಳ ಮಾದರಿ ಲಭ್ಯ. ಸೂಪರ್ ವೈಟ್‌, ಆ್ಯಟಿಟ್ಯೂಡ್ ಬ್ಲಾಕ್‌ ಮಿಕಾ, ಅವಂತಾ ಗ್ರೇಡ್‌, ಬ್ರಾಂಜ್ ಮೆಟಾಲಿಕ್‌, ಪ್ಲಾಟಿನಮ್ ವೈಟ್‌ ಪರ್ಲ್‌ ಹಾಗೂ ಸಿಲ್ವರ್ ಮೆಟಾಲಿಕ್ ಬಣ್ಣಗಳಿವೆ.

ಇನ್ನೋವಾ ಜಿಎಕ್ಸ್‌+ ಕುರಿತು ಮಾಹಿತಿ ನೀಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಮಾರಾಟ ವಿಭಾಗದ ಉಪಾಧ್ಯಕ್ಷ ಶಬರಿ ಮನೋಹರ್, ‘2005ರಲ್ಲಿ ಇನ್ನೋವಾ ಪರಿಚಯಗೊಂಡ ನಂತರ ಅದರ ಪ್ರತಿಷ್ಠೆಯನ್ನು ಈಗಲೂ ಕಾಯ್ದುಕೊಂಡು ಬರಲಾಗುತ್ತಿದೆ. ಆ ಮೂಲಕ ಈ ಕ್ಷೇತ್ರದಲ್ಲೇ ಇನ್ನೋವಾ ಒಂದು ಮೈಲಿಗಲ್ಲು ದಾಖಲಿಸಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಗ್ರಾಹಕರ ಅಪೇಕ್ಷೆಗಳಿಗೆ ಅನುಗುಣವಾಗಿ ಹೊಸ ಮಾದರಿ, ಹೊಸ ಸೌಲಭ್ಯಗಳನ್ನು ಅಳವಡಿಸಲಾಗಿದೆ.  ಆ ಮೂಲಕ ಗ್ರಾಹಕರ ಅನುಭೂತಿ ಹೆಚ್ಚಿಸುವುದು ನಮ್ಮ ಉದ್ದೇಶ’ ಎಂದಿದ್ದಾರೆ.

ಸುರಕ್ಷತೆಗೂ ಇನ್ನೊವಾ ಜಿಎಕ್ಸ್‌+ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿದೆ. ರೇರ್ ಕ್ಯಾಮೆರಾ, ಎಸ್‌ಆರ್‌ಎಸ್ ಏರ್‌ಬ್ಯಾಗ್‌, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್‌ ಸ್ಟಾರ್ಟ್ ಅಸಿಸ್ಟ್‌ ಕಂಟ್ರೋಲ್, ಎಬಿಎಸ್‌ನಂಥ ಸೌಕರ್ಯಗಳು ಜಿಎಕ್ಸ್‌+ನಲ್ಲಿದೆ.

ಕಡಿಮೆ ಇಎಂಐನೊಂದಿಗೆ ಏಳು ವರ್ಷಗಳ ಸಾಲ ಯೋಜನೆ, 5 ವರ್ಷಗಳ ಕಾಲ ರೋಡ್‌ಸೈಡ್‌ ನೆರವು, ಸಾಮಾನ್ಯವಾಗಿ ವಾರಂಟಿಯು 3 ವರ್ಷ ಅಥವಾ 1 ಲಕ್ಷ ಕಿಲೋ ಮೀಟರ್ ಇದೆ. ಇನ್ನಷ್ಟು ಕಾಲ ಈ ಸೌಲಭ್ಯವನ್ನು ಗ್ರಾಹಕರು ಬಯಸುವುದಾದರೆ 5 ವರ್ಷ ಅಥವಾ 2.20 ಲಕ್ಷ ಕಿ.ಮೀ.ಯನ್ನು ಕಡಿಮೆ ದರಕ್ಕೆ ಪಡೆಯಬಹುದಾಗಿದೆ.

ಇಷ್ಟೆಲ್ಲಾ ಸೌಕರ್ಯಗಳಿರುವ ಇನ್ನೋವಾ ಕ್ರಿಸ್ಟಾ ಜಿಎಕ್ಸ್‌+ ಎಕ್ಸ್ ಶೋರೂಂ ಬೆಲೆಯು 7 ಆಸನಗಳ ಕಾರಿಗೆ ₹21.39 ಲಕ್ಷ ಹಾಗೂ 8 ಆಸನಗಳಿಗೆ ₹21.44 ಲಕ್ಷ ಇದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ