ಅಮೆರಿಕದ ಹಾರ್ಲೆ ಡೇವಿಡ್ಸನ್ ಹಾಗೂ ಭಾರತದ ಹೀರೊ ಮೊಟೊಕಾರ್ಪ್ ಕಂಪನಿಗಳು ಜತೆಗೂಡಿ ದೇಶದಲ್ಲಿ ಅಮೆರಿಕದ ಮೋಟಾರ್‌ಬೈಕ್‌ಗಳ ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.
ಎರಡೂ ಕಂಪನಿಗಳು ಒಡಂಬಡಿಕೆಗೆ ಸಹಿ ಹಾಕುವ ಅಂತಿಮ ಹಂತದಲ್ಲಿದ್ದು, ಇದಾದಲ್ಲಿ ಅಮೆರಿಕದ ಸೂಪರ್ ಬೈಕ್‌ಗಳು ಭಾರತದಲ್ಲೂ ಲಭ್ಯವಾಗಲಿದೆ ಎಂದು ವರದಿಯಗಳು ಹೇಳುತ್ತವೆ.
ಈ ಒಪ್ಪಂದ ಏರ್ಪಟ್ಟಲ್ಲಿ ಭಾರತದಲ್ಲೇ ಹಾರ್ಲೆ ಡೇವಿಡ್ಸನ್ ಬೈಕ್‌ಗಳು ತಯಾರಾಗಲಿವೆ. ಇದರಿಂದ ಗ್ರಾಹಕರ ಮೇಲಿನ ಕಸ್ಟಮ್ಸ್ ಸುಂಕದ ಹೊರೆ ತಗ್ಗಲಿದೆ. ಈಗಾಗಲೇ ಶೇ 150ರಿಂದ ಶೇ 200ರಷ್ಟು ತೆರಿಗೆಯನ್ನು ಆಮದು ಮಾಡಿಕೊಂಡ ಬೈಕ್‌ಗಳಿಗೆ ಗ್ರಾಹಕರು ಕಟ್ಟುತ್ತಿದ್ದಾರೆ.
ಆದರೆ ಈ ಒಪ್ಪಂದದನ್ವಯ ಭಾರತದಲ್ಲಿ ಹಾರ್ಲೆ ಬೈಕ್‌ಗಳು ತಯಾರಾಗಿ ಲಭ್ಯವಾಗುವುದರ ಜತೆಗೆ, ಇಲ್ಲಿಂದಲೇ ಇತರ ರಾಷ್ಟ್ರಗಳಿಗೂ ರಫ್ತಾಗುವ ಮೂಲಕ ದೇಶದ ಆರ್ಥಿಕತೆಯೂ ಬೆಳೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಹೀರೊ ಮೋಟೊಕಾರ್ಪ್ ಕಂಪನಿಯು ಸದ್ಯ ಹಾರ್ಲೆ ಡೇವಿಡ್ಸನ್ ಕಂಪನಿಯ ಎಕ್ಸ್ 440 ಬೈಕ್ ಅನ್ನು ರಾಜಸ್ಥಾನದ ನಿಮ್ರಾನಾ ಘಟಕದಲ್ಲಿ ಉತ್ಪಾದಿಸುತ್ತಿದೆ. ಹಾರ್ಲೆ ಕಂಪನಿಯ ಬೈಕ್‌ಗಳ ಬಿಡಿ ಭಾಗಗಳು ಮತ್ತು ಸರಕುಗಳೊಂದಿಗೆ ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡುವ ಮತ್ತು ಸರ್ವಿಸ್ ಮಾಡುವ ಹಕ್ಕುಗಳನ್ನು ಹೀರೊ ಹೊಂದಿದೆ.
ಈ ಕುರಿತಂತೆ ಹಾರ್ಲೆ ಡೇವಿಡ್ಸನ್ ಅಥವಾ ಹೀರೊ ಮೋಟೊಕಾರ್ಪ್ ಕಂಪನಿಗಳಿಂದ ಯಾವುದೇ ಅಧಿಕೃತ ವರದಿ ಹೊರಬಿದ್ದಿಲ್ಲ. ಇನ್ನು ಕೆಲವೇ ವಾರಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾದ್ಯತೆ ಇದೆ ಎಂದೆನ್ನಲಾಗಿದೆ.