ಕೆಎಸ್‌ಆರ್‌ಟಿಸಿಗೆ 40 ಹವಾನಿಯಂತ್ರಿತ (ಎಸಿ) ಸ್ಲೀಪರ್ ಬಸ್‌ಗಳು ಬರಲಿದ್ದು, ಅದರ ‘ಮಾದರಿ’ಯನ್ನು ಈಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು.
ಏಳು ತಿಂಗಳ ಹಿಂದೆ ಎಸಿ ರಹಿತ ‘ಪಲ್ಲಕ್ಕಿ’ 40 ಸ್ಲೀಪರ್ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿತ್ತು. ‘ಪಲ್ಲಕ್ಕಿ’ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಅದೇ ಮಾದರಿಯಲ್ಲಿ ಹವಾನಿಯಂತ್ರಿತ ಬಸ್‌ಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿತ್ತು. ಅಶೋಕ ಲೇಲೆಂಡ್ ಚಾಸಿಸ್‌ಗೆ ‘ಪ್ರಕಾಶ್ ಬಾಡಿ ಬಿಲ್ಡರ್ಸ್’ನವರು ಕವಚ ನಿರ್ಮಾಣ ಮಾಡಿ ಒಂದು ಬಸ್ ಅನ್ನು ಪರಿಶೀಲನೆಗೆ ಒದಗಿಸಿದರು.
ಈ ಬಸ್ 13.5 ಮೀಟರ್ ಉದ್ದವಿದ್ದು, 36 ಬರ್ತ್ ಸಾಮರ್ಥ್ಯವನ್ನು ಹೊಂದಿದೆ. 40 ಬಸ್‌ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಪ್ರಮಾಣೀಕೃತಗೊಂಡ ಬಳಿಕ ಪ್ರಾಯೋಗಿಕ ಸಂಚಾರ ನಡೆಸಬೇಕು. ಎಲ್ಲ ಪರೀಕ್ಷೆಗಳು ಮುಗಿದು ಈ ವರ್ಷದ ಅಂತ್ಯದ ಒಳಗೆ ಬಸ್‌ಗಳು ಸಂಚಾರಕ್ಕೆ ಸಿದ್ಧಗೊಳ್ಳಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.