ಹೈಕ್ರಾಸ್ ಟಾಪ್‌ ವೇರಿಯಂಟ್‌ನ ಬುಕ್ಕಿಂಗ್‌ಗೆ ಬ್ರೇಕ್ ಹಾಕಿದ ಇನ್ನೋವಾ! ಕಾರಣ ಇಷ್ಟೇ…

ಇನ್ನೋವಾ ಹೈಕ್ರಾಸ್‌

ಟೊಯೊಟಾ ಕಂಪನಿಯು ತನ್ನ ಅತಿ ಬೇಡಿಕೆಯ ಹೈಕ್ರಾಸ್‌ನ ಟಾಪ್ ವೇರಿಯಂಟ್ ಆಗಿರುವ ZX ಹಾಗೂ ZX (O) ಮಾದರಿಯ ಕಾರುಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಇದೇ ಮೊದಲ ಬಾರಿಗೆ ಕಂಪನಿಯು ಇಂಥದ್ದೊಂದು ನಿರ್ಧಾರ ಕೈಗೊಂಡಿದೆ. ಡೀಲರ್‌ ಮಳಿಗೆಯಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಹೊಸ ಬುಕ್ಕಿಂಗ್ ಕಳೆದ ತಿಂಗಳಿಂದಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದೆನ್ನಲಾಗಿದೆ.

ಟೊಯೊಟಾದ ಮೂಲಗಳ ಪ್ರಕಾರ ಹೈಕ್ರಾಸ್‌ನ ಟಾಪ್ ವೇರಿಯಂಟ್‌ಗಳಾದ ZX ಹಾಗೂ ZX(O) ಮಾದರಿಗೆ ಬೇಡಿಕೆ ಹೆಚ್ಚಳವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮಾದರಿಯ ಕಾರುಗಳಿಗೆ 14 ತಿಂಗಳ ಮುಂಗಡ ಬುಕ್ಕಿಂಗ್ ಅಗತ್ಯ. ಹೈಬ್ರಿಡ್ ಅಲ್ಲದ ಕಾರುಗಳಿಗೆ 6 ತಿಂಗಳ ಕಾಲ ಕಾಯುವುದು ಅನಿವಾರ್ಯ.

ಇನ್ನೋವಾ ಹೈಕ್ರಾಸ್ ಒಟ್ಟು ಎರಡು ಮಾದರಿಯ ಎಂಜಿನ್‌ ಆಯ್ಕೆಯಲ್ಲಿ ಲಭ್ಯ. 2.0 ಲೀಟರ್ ಪೆಟ್ರೋಲ್ ಹೈಬ್ರೀಡ್‌. ಇದು 184 ಬಿಎಚ್‌ಪಿ ಹಾಗೂ 206 ನ್ಯೂಟನ್ ಮೀಟರ್ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಇ–ಡ್ರೈವ್ ಟ್ರಾನ್ಸ್‌ಮಿಷನ್‌ ಇದೆ. ಮತ್ತೊಂದು 2.0 ಲೀಟರ್ ಪೆಟ್ರೋಲ್ ಎಂಜಿನ್‌ 172 ಬಿಎಚ್‌ಪಿ ಹಾಗೂ 197 ಎನ್‌ಎಂ ಶಕ್ತಿ ಉತ್ಪಾದಿಸಬಲ್ಲದು. ಹೈಬ್ರಿಡ್ ಅಲ್ಲದ ಹೈಕ್ರಾಸ್‌ನಲ್ಲಿ ಸಿವಿಟಿ ಸೌಲಭ್ಯವಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ