ಭಾರತದಲ್ಲೇ ತಯಾರಾದ ಮೊದಲ ಹ್ಯುಂಡೈನ ಬ್ಯಾಟರಿ ಚಾಲಿತ (EV) ಮೊದಲ ಕಾರು ಕ್ರೆಟಾ ಪರೀಕ್ಷಾರ್ಥ ಪ್ರಯೋಗ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿದೆ. ಮುಸುಕು ಹಾಕಿರುವ ಕಾರು ಸಂಚರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಾರತದಲ್ಲಿ ಇದು ಬಿಡುಗಡೆಯಾದಲ್ಲಿ ಟಾಟಾ ನೆಕ್ಸಾನ್ ಇವಿ ಹಾಗೂ ಮಾರುತಿ ಇವಿಎಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ಹೊರನೋಟದಿಂದ ಕ್ರೆಟಾ ಇವಿಯ ನೋಟ ಐಸಿಇ ಮಾದರಿಯನ್ನೇ ಹೋಲುವಂತಿದೆ. ಇಂದಿನ ಟ್ರೆಂಡ್ ಆಗಿರುವ ಬ್ಲಾಂಕ್ಡ್ ಔಟ್ ಗ್ರಿಲ್ ಹಾಗೂ ಏರೊ ಆಪ್ಟಿಮೈಸ್ಡ್ ವೀಲ್‌ಗಳು ಹೊಸ ಸೇರ್ಪಡೆ.
ವೃತ್ತಾಕಾರದ ಹಬ್ ಹೊಂದಿರುವ 2 ಸ್ಪೋಕ್ ಸ್ಟಿಯರಿಂಗ್ ವೀಲ್ ಮತ್ತು ಅದರಲ್ಲೇ ಡ್ರೈವ್ ಮೋಡ್ ಆಯ್ಕೆ ಗುಂಡಿಗಳು ಇರುವ ಸಾಧ್ಯತೆ ಇದೆ. ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿರುವ ಈ ಎಲೆಕ್ಟ್ರಿಕ್ ಎಸ್‌ಯುವಿಗೆ ADAS ಮತ್ತು 360 ಡಿಗ್ರಿ ಕ್ಯಾಮೆರಾ ಅಳವಡಿಸಿದ್ದು ಪತ್ತೆಯಾಗಿದೆ.
ಮೂಲಗಳ ಪ್ರಕಾರ ಕ್ರೆಟಾ ಇವಿ ತನ್ನ ಎಲೆಕ್ಟ್ರಿಕ್ ಮೋಟಾರನ್ನು ತನ್ನ ಕೊನಾ ಇವಿ ಮಾದರಿಯೊಂದಿಗೂ ಹಂಚಿಕೊಂಡಿದೆ. ಮುಂಭಾಗದಲ್ಲಿ ಈ ಮೋಟಾರನ್ನು ಅಳವಡಿಸಲಾಗಿದೆ. ಅದು 45 ಕೆವಿಎಚ್ ಬ್ಯಾಟರಿ ಪ್ಯಾಕ್ ಹೊಂದಿದೆ.
ಆ ಮೂಲಕ ಹ್ಯುಂಡೈ ತನ್ನ ಮೊದಲ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿದೆ. 2025ರ ಆರಂಭದಲ್ಲಿ ಈ ನೂತನ ಬ್ಯಾಟರಿ ಚಾಲಿತ ಎಸ್‌ಯುವಿ ಭಾರತದ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.