ಬೆಂಗಳೂರಿನ ವರ್ತೂರಿನಲ್ಲಿ ಕಾರ್ಯಾರಂಭ ಮಾಡಿದ ಬ್ಲೂಬೆಲ್‌ ಸ್ಕ್ವೇರ್ YAMAHA ಮಳಿಗೆ

ಬೆಂಗಳೂರಿನ ವರ್ತೂರಿನಲ್ಲಿ ಕಾರ್ಯಾರಂಭ ಮಾಡಿರುವ ಯಮಾನಾ ಬ್ಲೂಬೆಲ್‌ ಸ್ಕ್ವೇರ್ ಮಳಿಗೆ

ಬೆಂಗಳೂರು: ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೊ ವರ್ಲ್ಡ್‌ ಹೆಸರಿನಲ್ಲಿ ಯಮಾಹಾ ಮೋಟಾರ್ ಕಂಪನಿಯ ನೂತನ ‘ಬ್ಲೂ ಸ್ಕ್ವೇರ್‌’ ಮಾರಾಟ ಮಳಿಗೆ ಕಾರ್ಯಾರಂಭ ಮಾಡಿದೆ.

ಈ ಮಳಿಗೆ 7,100 ಚದರಡಿಯಷ್ಟು ವಿಶಾಲವಾಗಿದೆ. ಯಮಾಹಾ ಬ್ಲೂ ಸ್ಕ್ವೇರ್ ಮಳಿಗೆಯಲ್ಲಿ ಯಮಾಹಾ ದ್ವಿಚಕ್ರ ವಾಹನಗಳ ಪ್ರದರ್ಶನದ ಜತೆಗೆ, ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶಿವ ಅವಕಾಶವನ್ನೂ ನೀಡುತ್ತಿದೆ.

ಇಲ್ಲಿ ಎಲ್ಲವೂ ನೀಲಿ… ನೀಲಿ.. ಮಳಿಗೆ, ಮಳಿಗೆಯಲ್ಲಿರುವ ಪರಿಚಾರಕರು, ಮಾರಾಟ ಪ್ರತಿನಿಧಿಗಳು ಧರಿಸುವ ಉಡುಪಿ ಎಲ್ಲವೂ ನೀಲಿ. ಹೊಸ ಔಟ್‌ಲೆಟ್ ಸೇರಿದಂತೆ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ ಯಮಹಾ 23 ಎಕ್ಸ್ ಕ್ಲೂಸಿವ್ ಬ್ಲೂ ಸ್ಕ್ವೇರ್ ಶೋ ರೂಂಗಳನ್ನು ಹೊಂದಿದೆ.

ಯಮಹಾದ ಸೂಪರ್‌ಸ್ಪೋರ್ಟ್ R3 (321ಸಿಸಿ), ಟಾರ್ಕ್-ರಿಚ್ MT -03 (321 ಸಿಸಿ) ಮತ್ತು ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್(155 ಸಿಸಿ) ಮತ್ತು ಏರಾಕ್ಸ್ ವರ್ಷನ್ ಎಸ್ (155 ಸಿಸಿ)ಗಳನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್‌ಲೆಟ್‌ಗಳು ವೈಝಡ್‌ಎಫ್‌-R15 ಎಂ (155 ಸಿಸಿ), YZF-ಆರ್‌15 ವಿ4 (155ಸಿಸಿ), YZF-ಆರ್‌15ಎಸ್ ವಿ3 (155 ಸಿಸಿ), MT-15 ವಿ2 (155 ಸಿಸಿ), ಬ್ಲೂ ಕೋರ್ ತಂತ್ರಜ್ಞಾನ ಆಧರಿತ ಮಾಡೆಲ್ ಗಳಾದ FZS-FI ವರ್ಷನ್ 4.0 (149 ಸಿಸಿ), FZS-ಎಫ್‌ಐ ವರ್ಷನ್ 3.0 (149 ಸಿಸಿ), FZ-ಎಫ್‌ಐ ವರ್ಷನ್ 3.0 (149 ಸಿಸಿ), FZ-X (149 ಸಿಸಿ), ಮತ್ತು ಸ್ಕೂಟರ್ ಗಳಾದ ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ZR 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ZR ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರಿಡ್ (125 ಸಿಸಿ) ಮುಂತಾದ ನವೀಕರಿಸಿದ ಲೈನ್-ಅಪ್ ಗಳನ್ನು ಪ್ರದರ್ಶಿಸಲಾಗುತ್ತದೆ. ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಯಮಹಾದ ಅಸಲಿ ಆ್ಯಕ್ಸೆಸರೀಸ್‌ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾ ಅಸಲಿ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಇಲ್ಲಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ