ಬೆಂಗಳೂರು: ಟಾಟಾ ಕಂಪನಿಯ ಪ್ರೀಮಿಯಂ ಹ್ಯಾಚ್ಬ್ಯಾಕ್ಗಳಲ್ಲಿ ಒಂದಾದ ಹಾಗೂ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾದ ಆಲ್ಟ್ರಾಝ್ ಕಾರಿನ ಹೊಸ ಅವತಾರವಾಗಿ ಆಲ್ಟ್ರಾಝ್ ರೇಸರ್ ಎಂಬ ಸ್ಪೋರ್ಟಿ ಸ್ವರೂಪದ ಕಾರನ್ನು ಪರಿಚಯಿಸಿದೆ.
ಕಾರ್ಯಕ್ಷಮತೆಯಲ್ಲಿ ಹಲವು ಹೊಸತುಗಳನ್ನು ಈ ಕಾರು ಹೊಂದಿದೆ. ಜತೆಗೆ ಸ್ಪೋರ್ಟಿ ಕಾರು ಬಯಸುವ ಕಾರು ಪ್ರಿಯರಿಗೆ ಇಲ್ಲಿ ಹಲವು ಸೌಕರ್ಯಗಳಿವೆ. 1.2ಲೀ ಟರ್ಬೊ ಪೆಟ್ರೋಲ್ ಎಂಜಿನ್ ಈ ಕಾರಿನ ಆತ್ಮ. ಕಾರಿನ ಹೊರಭಾಗ ಹಾಗೂ ಒಳಭಾಗದಲ್ಲಿ ರೇಸರ್ ಎಂಬ ಅನುಭವ ನೀಡುವ ಹಲವು ಫೀಚರ್ಗಳು ಇದರಲ್ಲಿವೆ. ಈ ಕಾರು 5500 ಆರ್ಪಿಎಂನಲ್ಲಿ 120 ಪಿಎಸ್ ಶಕ್ತಿ ಉತ್ಪಾದಿಸಬಲ್ಲದು. ಹಾಗೆಯೇ 1750ರಿಂದ 4000 ಆರ್ಪಿಯಂನಲ್ಲಿ 170 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಪ್ರತಿ ಚಾಲನೆಯಲ್ಲೂ ಗರಿಷ್ಠ ಆ್ಯಕ್ಸಲರೇಷನ್ ಈ ಕಾರಿನದ್ದು ಎಂದು ಕಂಪನಿ ಹೇಳಿಕೊಂಡಿದೆ.
ಇಷ್ಟು ಮಾತ್ರವಲ್ಲ… ಹೊಸ ಆಲ್ಟ್ರಾಝ್ ಕಾರು 360 ಡಿಗ್ರಿ ಕ್ಯಾಮೆರಾ, 26.03 ಸೆಂ.ಮೀ. ಇನ್ಫೋಟೈನ್ಮೆಂಟ್ ಟಚ್ಸ್ಕ್ರೀನ್, ವೆಂಟಿಲೇಟೆಡ್ ಸ್ಕ್ರೀನ್ ಹಾಗೂ 6 ಏರ್ಬ್ಯಾಗ್ಗಳನ್ನು ಈ ಕಾರು ಹೊಂದಿದೆ. 6 ಸ್ಪೀಡ್ ಮ್ಯಾನ್ಯುಯಲ್ ಗೇರ್ಬಾಕ್ಸ್ ಅನ್ನು ಈ ಕಾರು ಹೊಂದಿದೆ.
ಆರ್1, ಆರ್2 ಹಾಗೂ ಆರ್3 ವೇರಿಯಂಟ್ಗಳನ್ನು ಹೊಂದಿದೆ. ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ಹಾಗೂ ಅವೆನ್ಯೂ ವೈಟ್ ಮೂರು ಬಣ್ಣಗಳಲ್ಲಿ ಲಭ್ಯ. ಇದರೊಂದಿಗೆ ಎಕ್ಸ್ಝಡ್ ಲಕ್ಸ್ ಹಾಗೂ ಎಕ್ಸ್ಝಡ್+ಎಸ್ ಲಕ್ಸ್ ಎಂಬ ಹೊಸ ವೇರಿಯಂಟ್ ಪರಿಚಯಿಸಿದೆ. ಆಲ್ಟ್ರಾಝ್ ರೇಂಜ್ನ ಎಕ್ಸ್ಝಡ್+ಒಎಸ್ ಎಂಬ ವೇರಿಯಂಟ್ ಅನ್ನು ಒನ್ ಪರಿಚಯಿಸದೆ.
ಪೆಟ್ರೋಲ್ ಮ್ಯಾನುಯಲ್, ಪೆಟ್ರೋಲ್ ಡಿಸಿಎ, ಡೀಸೆಲ್ ಹಾಗೂ ಸಿಎನ್ಜಿ ಪವರ್ಟ್ರೈನ್ ಮಾದರಿಯನ್ನು ಇದು ಹೊಂದಿದೆ. ಸ್ಪೋರ್ಟಿ ಎಕ್ಸಾಸ್ಟ್ ಹೊಂದಿದೆ.
ಕಾರಿನ ಬೆಲೆ:
Racer Variants | Introductory Price ( Petrol MT), in INR, Ex-showroom, Delhi |
R1 | ₹ 9,49,000 |
R2 | ₹ 10,49,000 |
R3 | ₹ 10,99,000 |
Variants | Introductory Price ( Petrol NA MT), in INR, Ex-showroom, Delhi |
XZ LUX (New) | ₹ 8,99,900 |
XZ+S LUX (New) | ₹ 9,64,990 |
XZ+OS (Upgraded) | ₹ 9,98,900 |
ಆಲ್ಟ್ರಾಝ್ ರೇಸರ್ ಕಾರಿನ ವೇರಿಯಂಟ್ಗಳಲ್ಲಿರುವ ಸೌಲಭ್ಯಗಳು:
R1 | R2 | R3 |
Over R1 | Over R2 | |
R16 Alloy wheels | Electric Sunroof with Voice Assist | iRA connected Car tech |
6 Airbags | Wireless Charger | Front Ventilated Seats (segment first) |
Leatherette Seats | 17.78 cm TFT digital cluster | Air Purifier |
26.03 cm infotainment | Steering mounted cluster control | |
Wireless AA and ACP | 360 degree camera | |
PEPS | Xpress Cool | |
LED DRLS | ||
Rear Armrest | ||
Rear Wipers and Wash | ||
4 speakers + 4 tweeters | ||
FATC | ||
Projector headlamps | ||
Front fog lamps | ||
Rear defogger | ||
Front Sliding Armrest | ||
All four power windows | ||
Electrically adjustable & autofold ORVM | ||
Cruise Control | ||
Height Adjustable driver seat | ||
Rear AC vents | ||
Auto headlamps and Rain sensing wipers |
Features in the XZ LUX, XZ+S LUX, XZ+OS trims
XZ LUX | XZ+S LUX | XZ+ OS |
All features of XZ | All features of XZ+S | All features of XZ+S LUX |
26.03 cm infotainment | 6 Airbags | iRA Connected Car tech |
360 degree camera | 26.03 cm infotainment | Air Purifier |
AA and ACP over wifi | 360 degree camera | |
AA and ACP over wifi |
ಹೆಚ್ಚಿನ ಮಾಹಿತಿಗೆ: https://cars.tatamotors.com/