ಟಾಟಾ ಎಲಕ್ಸಿ ಹಾಗೂ ರೆಡ್ ಹ್ಯಾಟ್ ಜತೆಗೂಡಿ 5ಜಿ ಸಂಪರ್ಕ ಹೊಂದಿರುವ ವಾಹನಗಳಿಗೆ ಮೊಬಿಲಿಟಿ ಅಪ್ಲಿಕೇಷನ್ ನೀಡಲು ಮುಂದಾಗಿವೆ.
ಟಾಟಾ ಕಂಪನಿ ಈ ಕುರಿತು ಗುರುವಾರ ಮಾಹಿತಿ ನೀಡಿದ್ದು, ‘ಅಮೆರಿಕದ ಸಾಫ್ಟ್‌ವೇರ್ ಕಂಪನಿ ರೆಡ್‌ಹ್ಯಾಟ್ ಜತೆಗೂಡಿ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಜಾಗತಿಕ ಮಟ್ಟದ ನೆಟ್‌ವರ್ಕ್ ಆಪರೇಟರ್ ಜತೆಗೂಡಿ ವಾಹನ ಕ್ಷೇತ್ರ, ಆರೋಗ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ವಿನೂತನ ಮಾದರಿಯ ಅಪ್ಲಿಕೇಷನ್‌ಗಳನ್ನು ಹೊರತರಲು ಯೋಜನೆ ಹೊಂದಿದೆ’ ಎಂದಿದೆ.
‘ಟಾಟಾ ಎಲಕ್ಸಿಯ ಸಿವಿಪಿ ಪ್ಲಾಟ್‌ಫಾರ್ಮ್ ‘ಟೀಥರ್’ ಮೂಲಕ 5ಜಿ ಸಂಪರ್ಕ ಹೊಂದಿರುವ ಕಾರುಗಳ ಕುರಿತು ರೆಡ್ ಹ್ಯಾಟ್‌ನ ಇನ್ ವೆಹಿಕಲ್ ಆಪರೇಟಿಂಗ್ ಸಿಸ್ಟಂ ಆಧರಿಸಿದ ಕಾರ್ಯವನ್ನು ಜಂಟಿಯಾಗಿ ನಡೆಸಲಾಗುವುದು. ಆ ಮೂಲಕ ಸಿದ್ಧವಾಗುವ ಮೂವಿಂಗ್ ಅಪ್ಲಿಕೇಷನ್‌ಗಾಗಿ ಟೆಲ್ಕೊಗೆ 5ಜಿ ಮಲ್ಟಿ ಕ್ಲೌಡ್ ಪರಿಸರ ಹಾಗೂ ಮೊಬೈಲ್ ವರ್ಚುವಲ್ ನೆಟ್‌ವರ್ಕ್ ಆಪರೇಟರ್ಸ್‌ಗಳನ್ನು ಬೆಸೆಯಲಾಗುವುದು ಎಂದು ಕಂಪನಿ ಹೇಳಿದೆ.
‘ಓಪನ್‌ಶಿಫ್ಟ್ ಹಿಡಿತವನ್ನು ಹೊಂದುವ ಗುರಿಯನ್ನು ಈ ಪಾಲುದಾರಿಗೆ ಹೊಂದಿದೆ. ಮಲ್ಟಿ ಕ್ಲೌಡ್ ಪರಿಸರದಲ್ಲಿ ರೆಡ್ ಹ್ಯಾಟ್‌ನ ಕಂಟೈನರ್ ಪ್ಲಾಟ್‌ಫಾರ್ಮ್ ಒಂದು ಸಮನಾಂತರವಾದ ಹಾಗೂ ಸಾಮಾನ್ಯವಾದ ‘ಕಂಟೈನರ್ ಆಸ್ ಎ ಸರ್ವೀಸ್’ (CaaS) ಹಂತವಾಗಿದೆ. ಟಾಟಾ ಎಲಕ್ಸಿಯು ಬಹು ಹಂತಗಳ ಆಟೊಮೇಷನ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಕ್ಲೌಡ್ ಆ್ಯಟೊಮೇಷನ್‌ಗೆ ತಡೆರಹಿತ ಸೇವೆ ನೀಡಬಲ್ಲದು. ಇದರೊಂದಿಗೆ 5ಜಿ ಅಪ್ಲಿಕೇಷನ್‌ನ ಪ್ಲೇಸ್‌ಮೆಂಟ್ ಹಾಗೂ ಆಧುನೀಕರಣಕ್ಕೆ ಈ ಪಾಲುದಾರಿಕೆ ನೆರವಾಗಲಿದೆ’ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ ಎಂದು ವರದಿಯಾಗಿದೆ.