Kalki 2898 AD: ಬುಜ್ಜಿ ಓಡಿಸಿ ಮಸ್ತ್‌ ಎಂದ ಆನಂದ್ ಮಹೀಂದ್ರ

ಮುಂಬೈ: ಬಾಲಿವುಡ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಚಿತ್ರ ‘ಕಲ್ಕಿ 2898 ಎಡಿ’. ಅಮಿತಾಬ್ ಬಚ್ಚನ್‌, ಕಮಲ್ ಹಾಸ್‌ನ, ಪ್ರಭಾಸ್, ದೀಪಿಕಾ ಪಡುಕೋಣೆ ಹಾಗೂ ದಿಶಾ ಪಠಾಣಿ ಮುಖ್ಯಭೂಮಿಕೆಯ ಈ ಚಿತ್ರ ಸದ್ಯ ಸುದ್ದಿಯಲ್ಲಿರುವುದು, ಇದಕ್ಕೆ ಬಳಸಿದ ವಿಶಿಷ್ಟ ವಿನ್ಯಾಸದ ಕಾರಿನಿಂದಾಗಿ.

ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಈ ವಿಶಿಷ್ಟ ಕಾರಿನಲ್ಲೊಂದು ರೈಡ್‌ ಮಾಡಿದ್ದಾರೆ. ‘ಬುಜ್ಜಿ’ ಹೆಸರಿನ ಈ ಕಾರು, ಮ್ಯಾಡ್‌ಮ್ಯಾಕ್ಸ್‌ನಲ್ಲಿ ಬಳಸಿರುವ ವಿಭಿನ್ನ ರೀತಿಯ ವಾಹನದಂತೆಯೇ ಹೋಲುತ್ತದೆ.

ಹಾಗೆಂದ ಮಾತ್ರಕ್ಕೆ  ಈ ಬುಜ್ಜಿ ಚಿತ್ರದಲ್ಲಿ ಬಳಕೆಯಾಗುತ್ತಿರುವ ಒಂದು ವಾಹನವಷ್ಟೇ ಅಲ್ಲ. ಅದು ಚಿತ್ರದುದ್ದಕ್ಕೂ ಸಾಗುವ ಒಂದು ಪಾತ್ರ. ಇದರ ನಿರ್ಮಾಣ ಸಾಧ್ಯವಾಗಿದ್ದು, ನಿರ್ದೇಶಕ ನಾಗ್‌ ಅಶ್ವಿನ್ ಹಾಗೂ ಆನಂದ್ ಮಹೀಂದ್ರಾ ಅವರಿಂದಾಗಿ. ಕೊಯಂಬತ್ತೂರಿನಲ್ಲಿರುವ ಜಯಂ ಆಟೊಮೋಟಿವ್ಸ್‌ನಲ್ಲಿ ಈ ಇಬ್ಬರೂ ಜತೆಗೂಡಿ ವಿನ್ಯಾಸಗೊಳಿಸಿ, ಒಂದು ರೂಪ ನೀಡಿದ್ದಾರೆ.

ಹಲವು ತಿಂಗಳ ಪರಿಶ್ರಮದಿಂದಾಗಿ ರೂಪತೆಳೆದಿರುವ ಬುಜ್ಜಿಯನ್ನು ನೋಡಲು ಇತ್ತೀಚೆಗೆ ಆನಂದ್ ಮಹೀಂದ್ರಾ ತೆರಳಿದ್ದರು. ಈ ಸಂದರ್ಭದಲ್ಲಿ ಸೆರೆಹಿಡಿಯಲಾದ ಚಿತ್ರ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಆನಂದ್ ಮಹೀಂದ್ರಾ ಅವರಿಗೆ ಆಧುನಿಕ ವಾಹನಗಳ ವಿನ್ಯಾಸ ಮತ್ತು ಸೌಕರ್ಯಗಳ ಕುರಿತ ಮೋಹ ಹಾಗೂ ಆಸಕ್ತಿಯನ್ನು ಕಾಣಬಹುದಾಗಿದೆ. ಬುಜ್ಜಿ ಕುರಿತ ಅವರ ಕುತೂಹಲಭರಿತ ನೋಟ, ಮಾತುಗಳನ್ನು ಈ ವಿಡಿಯೊದಲ್ಲಿ ಕಾಣಬಹುದು.

ಈ ಬುಜ್ಜಿಯ ಬಿಡುಗಡೆಯ ವಿಶೇಷ ಸಮಾರಂಭ ಹೈದರಾಬಾದ್‌ನಲ್ಲಿ ನಡೆಯಿತು. ಸಿನಿಮಾದ ಟ್ರೇಲರ್‌ನಲ್ಲೂ ಬುಜ್ಜಿಗೆ ಒಂದಷ್ಟು ಸ್ಥಾನವಿದೆ. ಹೀಗಾಗಿ ಕಲ್ಕಿ 2898ಎಡಿ ಸಿನಿಮಾ ಕುರಿತು ನಿರೀಕ್ಷೆಗಳ ಗರಿಗೆದರಿದೆ. ಸಿನಿಮಾ ತಯಾಕರು ಹೇಗೆ ಗಡಿದಾಟಿ ಆಯೋಲಿಚಿಸಿದ್ದಾರೆ ಎಂಬುದಕ್ಕೆ ಬುಜ್ಜಿ ಒಂದು ಸ್ಪಷ್ಟ ಉದಾಹರಣೆ.

ಅಶ್ವಿನ್ ಈ ಸಿಸಿಮಾ ನಿರ್ದೇಶಿಸಿದ್ದು, ವಿಜಯನಂತಿ ಮೂವೀಸ್ ನಿರ್ಮಾಪಣೆಯ ಹೊಣೆ ಹೊತ್ತಿದೆ. ಇದೊಂದು ಸೈಫೈ ಸಿನಿಮಾ ಆಗಿದ್ದು, 2024ರ ಜೂನ್ 27ರಂದು ಬಿಡುಗಡೆ ಸಾಧ್ಯತೆ ಇದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ