ರೇಸಿಂಗ್ ಮೋಟಾರ್ಬೈಕ್ಗಳನ್ನು ಸಿದ್ಧಪಡಿಸುವ ಕವಾಸಾಕಿ ಬೈಕ್ ಇದೀಗ ರೆಟ್ರೊ ಮಾದರಿಯ ಮೋಟಾರ್ ಬೈಕ್ ಅನ್ನು ಸಿದ್ಧಪಡಿಸಿದೆ. ಕವಾಸಾಕಿ ಡಬ್ಲೂ175 ಎಂಬ ಈ ಬೈಕ್ ಸದ್ಯ ಇಂಡೊನೇಷ್ಯಾದಲ್ಲಿ ಪದಾರ್ಪಣೆ ಮಾಡಲು ಸಜ್ಜುಗೊಂಡಿದೆ.
ಸಿಂಗಲ್ ಸಿಲಿಂಡರ್ ಹೊಂದಿರುವ ಈ ರೆಟ್ರೊ ಬೈಕ್ ಭಾರತದಲ್ಲಿರುವ ರಾಯಲ್ಎನ್ಫೀಲ್ಡ್, ಜಾವಾ, ಯೆಜಿಡಿ, ಹೊಂಡಾ ಬೈಕ್ಗಳ ಸಾಲಿಗೆ ಸೇರಲಿದೆ.
177ಸಿಸಿ ಏರ್ ಕೂಲ್ಡ್ ಸಿಂಗಲ್ ಓವರ್ಹೆಡ್ ಎಂಜಿನ್ ಇದು ಹೊಂದಿದೆ. 2 ವಾಲ್ವ್ ಸಿಂಗಲ್ ಸಿಲಿಂಡರ್ ಇದಾಗಿದ್ದು, ಒಟ್ಟು 13 ಅಶ್ವಶಕ್ತಿಯನ್ನು 7,500 ಆರ್ಪಿಎಂನಲ್ಲಿ ಉತ್ಪಾದಿಸಲಿದೆ. ಇದರೊಂದಿಗೆ 9.73 ಪೌಂಡ್ ಫೀಟ್ನಷ್ಟು ಟಾರ್ಕ್ ಅನ್ನು 6,000 ಆರ್ಪಿಎಂನಷ್ಟು ಉತ್ಪಾದಿಸಲಿದೆ. ಐದು ಸ್ಪೀಡ್ ಗೇರ್ಬಾಕ್ಸ್ ಹಾಗೂ ಚೈನ್ ಫೈನಲ್ ಡ್ರೈವ್ ಇದು ಹೊಂದಿದೆ. ಸಿಂಗಲ್ ಮಿಕುನಿ ವಿಎಂ24 ಕಾರ್ಬೊರೇಟರ್ ಹೊಂದಿದೆ.
30ಮಿ.ಮೀ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಅನ್ನು ಈ ಬೈಕ್ ಹೊಂದಿದೆ. ಹಿಂಬದಿಯಲ್ಲಿ ಹೊಂದಿಸಬಹುದಾದ ಸ್ಪ್ರಿಂಗ್ ಪ್ರಿಲೋಡ್ ಹೊಂದಿರುವ ಎರಡು ಶಾಕ್ ಅಬ್ಸಾರ್ಬರ್ ಹೊಂದಿದೆ. 17 ಇಂಚಿನ ಸ್ಪೋಕ್ಸ್ ಇರುವ ಗಾಲಿಗಳು ಮತ್ತು ಅದಕ್ಕೆ 220ಮಿ.ಮೀ. ಸಿಂಗಲ್ ಡಿಸ್ಕ್ ಬ್ರೇಕ್ ಮುಂಭಾಗದಲ್ಲಿ ಹಾಗೂ ಹಿಂಬದಿಗೆ ಡ್ರಮ್ ಬ್ರೇಕ್ ವ್ಯವಸ್ಥೆ ಇದೆ.
ಹೀಗಾಗಿ ದಿನನಿತ್ಯದ ಓಡಾಟಕ್ಕೆ ಒಂದು ಸರಳ ಬೈಕ್ ಇದು ಎಂದೆನ್ನಬಹುದು. ಶರವೇಗದಲ್ಲಿ ಸಾಗುವ ಬೈಕ್ ಇದಲ್ಲದಿದ್ದರೂ, ಕಿಕ್ಕಿರಿದ ಟ್ರಾಫಿಕ್ನಲ್ಲಿ ಸುಲಭವಾಗಿ ಓಡಾಡಬಹುದಾದಷ್ಟು ಅನುಕೂಲಕರ ಬೈಕ್ ಇದು ಎಂದೆನ್ನಲಾಗಿದೆ. ಹೀಗಾಗಿ ಭಾರತ ಹಾಗೂ ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕವಾಸಾಕಿ ಈ ಬೈಕ್ ಅಭಿವೃದ್ಧಿಪಡಿಸಿದೆ.
2025ರಲ್ಲಿ ಕವಾಸಾಕಿ ಕಂಪನಿಯು ಈ ಮಾದರಿಯಲ್ಲಿ ಎಸ್ಇ, ಎಸ್ಇ ಬ್ಲಾಕ್ ಸ್ಟೈಲ್ ಹಾಗೂ ಕೆಫೆ ಬಣ್ಣದ ವೇರಿಯಂಟ್ನೊಂದಿಗೆ ಬೈಕ್ ಅನ್ನು ಪರಿಚಯಿಸಲಿದೆ. ಸುಮಾರ ₹1.75 ಲಕ್ಷ ಬೆಲೆಗೆ ಈ ಬೈಕ್ ಲಭ್ಯ ಎಂದು ಅಂದಾಜಿಸಲಾಗಿದೆ.