CAFÉ ನಿಯಂತ್ರಣ: ನಿಮ್ಮ ಕಾರು ಎಷ್ಟು ಇಂಧನ ಹೊರಸೂಸುತ್ತದೆ…? ಇಲ್ಲಿದೆ ಲೆಕ್ಕಾಚಾರ

AI ಚಿತ್ರ

ಕಾರ್ಪೊರೇಟ್‌ ಆ್ಯವರೇಜ್‌ ಫ್ಯೂಯಲ್ ಎಕಾನಮಿ (CAFÉ) ಎಂಬ ಇಂಧನ ಕ್ಷಮತೆಯ ರೇಟಿಂಗ್ ಅರಿತಲ್ಲಿ ಮುಂದಿನ ಕಾರು ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸಲು ಅನುಕೂಲ.

ಹಾಗಿದ್ದರೆ CAFÉ ಎಂದರೇನು? ಅದರ ಅಗತ್ಯವಾದರೂ ಏನಿದೆ?

ಇದು ಕಾರ್ಪೊರೇಟ್ ಆವ್ಯರೇಜ್ ಫ್ಯುಯಲ್ ಎಕಾನಮಿ ಅಥವಾ ಎಫಿಷಿಯನ್ಸಿ (ಕ್ಷಮತೆ) ಎಂದೆನ್ನಬಹುದು. ಅಂದರೆ ಒಂದು ವಾಹನದ ಸರಾಸರಿ ಇಂಧನ ಕ್ಷಮತೆ ಎಷ್ಟಿರುತ್ತದೆ ಎಂಬುದನ್ನು ನಿರ್ಧರಿಸಿ ಅದರ ಆಧಾರದಲ್ಲಿ ರೇಟಿಂಗ್ ನೀಡುವ ವ್ಯವಸ್ಥೆ. ಇದು ಮಾಲೀಕರಿಗೆ ಮಾತ್ರವಲ್ಲದೆ, ವಾಹನ ಹೊರಸೂಸುವ ಇಂಗಾಲದ ಡೈಆಕ್ಸೈಡ್‌ ಆಧರಿಸಿ ಎಷ್ಟರ ಮಟ್ಟಿಗೆ ಪರಿಸರ ಸ್ನೇಹಿ ಎಂಬುದನ್ನೂ ಇದು ಆಧರಿಸಿರುತ್ತದೆ. ಈ ರೇಟಿಂಗ್ ಆಧರಿಸಿ ವಾಹನ ತಯಾರಕರು ಹೆಚ್ಚು ಇಂಧನ ಕ್ಷಮತೆಯ ಕಾರುಗಳನ್ನು ಉತ್ಪಾದಿಸುತ್ತಾರೆ. ಈ ರೇಟಿಂಗ್ ಇನ್ನಷ್ಟು ಹೊಸ ವಿಷಯಗಳಿಗೆ ಆಧಾರವಾಗಲಿದೆ.

ಇಂಧನ ಕ್ಷಮತೆ ಎಂದಾದರೆ ಇಂಗಾಲಯದ ಡೈಆಕ್ಸೈಡ್‌ ಮೇಲೆ ನಿರ್ಬಂಧವೇಕೆ ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ ಯಾವುದೇ ವಾಹನ ಇಂಗಾಲಯವನ್ನು ಹೆಚ್ಚು ಹೊರಸೂಸುತ್ತಿದೆ ಎಂದರೆ, ಅದು ಹೆಚ್ಚು ಇಂಧನವನ್ನು ದಹಿಸುತ್ತಿದೆ ಎಂದೇ ಅರ್ಥ.

ಹೀಗಾಗಿಯೇ ಭಾರತದಲ್ಲಿ ಸದ್ಯ ಇರುವ ಬಿಎಸ್‌6ನ ನಿಯಮವೂ ಇದೇ ರೇಟಿಂಗ್ ಆಧರಿಸಿರುತ್ತದೆ. ಅಂದರೆ ಪರಿಸರಕ್ಕೆ ಮಾರಕವಾಗುವ ಹೈಡ್ರೊಕಾರ್ಬನ್‌, ಸಲ್ಫರ್ ಮತ್ತು ನೈಟ್ರೊಜೆನ್‌ನ ಆಕ್ಸೈಡ್‌ಗಳನ್ನು ನಿಯಂತ್ರಿಸುವುದೇ ಬಿಎಸ್‌6ನ ಮಾನದಂಡ.

CAFÉ ಅಥವಾ ಇಂಗಾಲಯದ ಡೈಆಕ್ಸೈಡ್‌ ಲೆಕ್ಕ ಹಾಕುವುದು ಹೇಗೆ ಎಂದು ಗಮನಿಸಿದರೆ, ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ, ಮೊದಲು ಕಂಪನಿ ತಯಾರಿಸುವ ವಾಹನದ ಒಟ್ಟು ತೂಕ ಲೆಕ್ಕ ಹಾಕಲಾಗುವುದು. ನಂತರ ಒಟ್ಟು ವಾಹನದ ತೂಕದಲ್ಲಿ ಪ್ರತಿ ಕಿಲೋಗೆ ಎಷ್ಟು ಪ್ರಮಾನದ ಇಂಗಾಲಯದ ಡೈಆಕ್ಸೈಡ್‌ ಬಿಡುಗಡೆ ಮಾಡಲಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ.

CAFE 1 ಹಾಗೂ CAFE 2, ಸರಾಸರಿ ಮತ್ತು ಗುರಿ

ಅಂದರೆ ವಾಹನ ಕ್ಷೇತ್ರದಲ್ಲಿ ವಾಹನದ ಸರಾಸರಿ ತೂಕ 1,037 ಕೆ.ಜಿ. ಇದ್ದಲ್ಲಿ 2022ರವರೆಗೂ ಇದು ಪ್ರತಿ ಕೆ.ಜಿ.ಗೆ 130 ಗ್ರಾಂನಷ್ಟು ಇಂಗಾಲಯದ ಡೈಆಕ್ಸೈಡ್‌ನ ಮಿತಿ ಇತ್ತು. 2022–23ರ ನಂತರದಲ್ಲಿ ವಾಹನದ ತೂಕ 1,145 ಕೆ.ಜಿ. ಇದ್ದಲ್ಲಿ ಪ್ರತಿ ಕೆ.ಜಿ.ಗೆ 113ಗ್ರಾಂ ಇಂಗಾಲಯದ ಡೈ ಆಕ್ಸೈಡ್ ಮಿತಿ ಹೇರಲಾಗಿದೆ. 2022ಕ್ಕೆ ಹೋಲಿಸಿದಲ್ಲಿ ಹೊರಸೂಸುವ ಇಂಗಾಲಯದ ಪ್ರಮಾಣವನ್ನು ಇದು ಶೇ 13ರಷ್ಟು ತಗ್ಗಿಸಲಾಗಿದೆ.

CAFÉ ನೀತಿಗಳು ಕೆಲವೊಂದು ಕ್ರೆಡಿಟ್‌ಗಳನ್ನೂ ನೀಡುತ್ತದೆ. ಅದು ಹೇಗೆ ಎಂದರೆ, ಶೂನ್ಯ ಇಂಧನ ವಾಹನಗಳ ತಯಾರಿಸಿದರೆ ಅಥವಾ ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸಿದರೆ, ಇಂಧನ ದಹಿಸುವ ವಾಹನಗಳ ತಯಾರಿಕೆಗೆ ಒಂದಷ್ಟು ರಿಯಾಯಿತಿ ಸಿಗಲಿದೆ. ಅಂದರೆ, ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳಿಗೆ 3, ಪ್ಲಗ್‌ ಇನ್‌ ಹೈಬ್ರಿಡ್‌ ವಾಹನಗಳಿಗೆ 2.5 ಹಾಗೂ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗೆ 2ರಂತೆ ಗುರಿ ನಿಗದಿಪಡಿಸಲಾಗಿದೆ.

EV, ಹೈಬ್ರಿಡ್ ತಯಾರಿಸಿದರೆ ಹೆಚ್ಚು ಕ್ರೆಡಿಟ್

ಹೀಗಾಗಿ ಹೊಗೆಯುಗುಳದ ವಾಹನ ತಯಾರಿಸಿದರೆ ಕಾರು ತಯಾರಕರಿಗೆ ಹೆಚ್ಚಿನ ಕ್ರೆಡಿಟ್ ದೊರೆಯಲಿದೆ. ಹೊಗೆಯುಗುಳದ ವಾಹನಗಳನ್ನು ತಯಾರಿಸುವುದರ ಜತೆಗೆ ಹೊಗೆಯುಗುಳುವ ವಾಹನವನ್ನೂ ತಯಾರಿಸುತ್ತಿದ್ದರೆ, ಕ್ರೆಡಿಟ್ ಸರಿಸಮವಾಗಲಿದೆ. ಹೀಗಾಗಿಯೇ ಬಹುತೇಕ ಕಂಪನಿಗಳು ಪರಿಸರ ಸ್ನೇಹಿ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಥವಾ ಹೊಗೆಯುಗುಳುವ ವಾಹನ ತಯಾರಿಸುತ್ತಿದ್ದರೂ ಹೆಚ್ಚಿನ ಕ್ರೆಡಿಟ್ ಪಡೆಯುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ, ಹೈಬ್ರಿಡ್ ವಾಹನಗಳನ್ನು ಉತ್ಪಾದಿಸುತ್ತವೆ.

ಈ ಸೂತ್ರವನ್ನು ಆಧರಿಸಿ ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರ, ಟೊಯೊಟಾ, ಫೋಕ್ಸ್‌ವ್ಯಾಗನ್, ಮೋರಿಸ್ ಗ್ಯಾರೇಜಸ್, ಡ್ಯಾಮ್ಲೆರ್‌ ಹಾಗು ಬಿಎಂಡಬ್ಲೂ ಕಾರು ತಯಾರಿಕಾ ಕಂಪನಿಗಳು ಹೆಚ್ಚಿನ ಕ್ರೆಡಿಟ್ ಪಡೆದಿವೆ. ಇಂಧನ ಉಳಿತಾಯದ ತಂತ್ರಜ್ಞಾನ ಅಳವಡಿಸುವ ಇತರ ಕಂಪನಿಗಳೂ ಈ ಕ್ರೆಡಿಟ್‌ಗಳನ್ನು ಪಡೆದುಕೊಂಡಿವೆ.

ಬ್ರೇಕ್ ಹಾಕಿದಾಗ ವಿದ್ಯುತ್ ಉತ್ಪಾದಿಸಿ ಅದನ್ನು ವಾಹನದ ಬ್ಯಾಟರಿಗೆ ಮರುಪೂರಣ ಮಾಡುವ ರಿಜನರೇಟಿವ್ ಬ್ರೇಕಿಂಗ್‌ 0.98ರಷ್ಟು ಉಳಿತಾಯವನ್ನು ಹೊಂದಿರುತ್ತದೆ. ಅದರಂತೆಯೇ ಸಿಗ್ನಲ್‌ನಲ್ಲಿ ನಿಂತಾಗ, ಎಂಜಿನ್ ಬಂದ್ ಆಗುವುದು, ನಂತರ ಬ್ರೇಕ್ ಮೇಲಿಂದ ಕಾಲು ತೆಗೆದರೆ ಸ್ವಯಂ ಚಾಲಿತವಾಗಿ ಆರಂಭವಾಗುವುದು, ಟೈರ್‌ಗಳಿಗೆ ಸರಿಯಾದ ಗಾಳಿಯ ಒತ್ತಡ ತುಂಬಿಸುವುದು, ಆರು ಸ್ಪೀಡ್‌ಗಳ ಗೇರ್‌ ಬಾಕ್ಸ್‌ ಹೊಂದುವುದು ಇವೆಲ್ಲವೂ ಇದ್ದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಮರು ಲೆಕ್ಕಾಚಾರದಂತೆ 0.98ರಿಂದ ಗುಣಿಸಿ ಮೌಲ್ಯ ನಿರ್ಧರಿಸಲಾಗುತ್ತದೆ.

ಪೆಟ್ರೋಲ್‌ಗೆ ಹೋಲಿಸಿದಲ್ಲಿ ಡೀಸೆಲ್ ವಾಹನಗಳ ಹೆಚ್ಚು ಇಂಧನ ಕ್ಷಮತೆ ಹೊಂದಿರುತ್ತವೆ. ಇಲ್ಲಿ ಲಾಭವೇನೋ ಇದೆ. ಆದರೆ ವಾಹನ ತೂಕ ಗಣನೀಯವಾಗಿ ಹೆಚ್ಚಳವಾಗುತ್ತದೆ.

ಸದ್ಯ ಭಾರತದಲ್ಲಿ ಇಂಗಾಲ ಹೊರಸೂಸುವಿಕೆಗೆ ದಂಡ ವಿಧಿಸಲಾಗುತ್ತಿಲ್ಲ. ಆದರೆ ಆ ದಿನಗಳೂ ದೂರವಿಲ್ಲ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ