ಲೋಹದ ಮೋನೊಕಾಕ್ ದೇಹ, 150ಸಿಸಿ ಎಂಜಿನ್ ಸ್ಕೂಟರ್… ಆದರೂ ಇದರ ಎಕ್ಸ್ ಶೋ ರೂಂ ಬೆಲೆ ₹14.28 ಲಕ್ಷ. ಹಾಗಿದ್ದರೆ ಪಿಯಾಜಿಯೊ ಬಿಡುಗಡೆ ಮಾಡಿರುವ ಲಿಮಿಟೆಡ್ ಎಡಿಷನ್ ವೆಸ್ಪಾ 946 ಡ್ರಾಗನ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ರಿಬ್‌ಡ್ ವೂಲ್, ಲೆದರ್ ಸ್ಲೀವ್ಸ್, ಪಚ್ಚೆ ಹಸಿರಿನ ಚಿತ್ತಾರ ಹಾಗೂ ಎಡಭಾಗದ ಪಾಕೆಟ್ ಹಾಗೂ ಹಿಂಬದಿಯ ಪ್ಯಾನೆಲ್ ಕಸೂತಿ ಕಲೆ ಅರಳಿಸಲಾಗಿದೆ.
ಸ್ಕೂಟರ್‌ನ ರಿಮ್, ಹ್ಯಾಂಡಲ್‌ಬಾರ್, ಸೈಡ್ ಪ್ಯಾನೆಲ್, ಮುಂಭಾಗದ ಮಡ್‌ಗಾರ್ಡ್, ಮಿರರ್ ಸಪೋರ್ಟ್, ಸ್ಯಡಲ್ ಸಪೋರ್ಟ್ ಎಲ್ಲವೂ ಅಲುಮಿನಿಯಂ ಲೋಹದಿಂದ ಮಾಡಲಾಗಿದೆ.
ಮುಂಭಾಗದಲ್ಲಿ ಲೀಡಿಂಗ್ ಲಿಂಕ್‌ನ ಶಾಕ್ಸ್ ಹೊಂದಿದೆ. 12 ಇಂಚಿನ ಚಕ್ರಗಳಿವೆ. 150 ಸಿಸಿ ಎಂಜಿನ್ ಅನ್ನು ಇದು ಹೊಂದಿದೆ. 3v ಎಂಜಿನ್ ಇದಾಗಿದ್ದು, ಎಲೆಕ್ಟ್ರಾನಿಕ್ ಇಂಜಕ್ಷನ್ ಸೌಲಭ್ಯ ಹೊಂದಿದೆ.
ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್ ಲ್ಯಾಂಪ್ ಹಾಗೂ ಟರ್ನ್ ಇಂಡಿಕೇಟರ್ಸ್‌ಗಳು ಇದರದ್ದು. ಎಲ್‌ಸಿಡಿ ಡ್ಯಾಶ್‌ಬೋರ್ಡ್ ಹೊಂದಿದೆ. ಇಟಲಿಯಲ್ಲಿ ಸಿದ್ಧವಾಗಿರುವ ಈ ಸ್ಕೂಟರ್ ಸದ್ಯ ಭಾರತದಲ್ಲಿ ಭಾರೀ ಸುದ್ದಿಯಲ್ಲಿದೆ.