ಭಾರತದಲ್ಲಿ ಪಾಲುದಾರರ ಹುಡುಕುತ್ತಿರುವ ಫೋಕ್ಸ್‌ವ್ಯಾಗನ್‌ಗೆ ಮಹೀಂ‌ದ್ರಾ ಜತೆಯಾಗಲಿದೆಯೇ..?

ಫೋಕ್ಸ್‌ವ್ಯಾಗನ್‌ ಟೈಗುನ್

ಕಾರುಗಳ ತಯಾರಿಸುವ ಐರೋಪ್ಯ ರಾಷ್ಟ್ರಗಳ ಕಂಪನಿಗಳು ಅತಿಯಾದ ಎಂಜಿನಿಯರಿಂಗ್‌ ಒಳಗೊಂಡ ವಾಹನಗಳನ್ನು ತಯಾರಿಸುತ್ತಿದ್ದು, ಇದು ಭಾರತಕ್ಕೆ ಅನಗತ್ಯ ಎಂಬ ಭಾವವನ್ನು ಈ ಕಂಪನಿಗಳು ಹೊಂದಿವೆ. ಇದೇ ಮನಸ್ಥಿತಿಯಲ್ಲಿರುವ ಫೋಕ್ಸ್‌ವ್ಯಾಗನ್‌ ಈಗ ಭಾರತದಲ್ಲಿ ಪಾಲುದಾರರನ್ನು ಹುಡುಕುತ್ತಿದೆ.

2 ಶತಕೋಟಿ ಅಮೆರಿಕನ್ ಡಾಲರ್‌ ಹೂಡಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ನಿರೀಕ್ಷೆಯಷ್ಟು ಉತ್ತಮವಾಗಿಲ್ಲ. ಭಾರತ ಎನ್ನುವುದು ಬೆಲೆ ಸಮರದ ಮಾರುಕಟ್ಟೆ. ಭಾರತದಲ್ಲಿರುವ ಕಾರು ತಯಾರಕರು ಹೊಸ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿವೆ. ಇಲ್ಲಿ ಅತಿಯಾದ ಎಂಜಿನಿಯರ್‌ ವಾಹನಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಕೋಡಾ ಆಟೊ ಜಾಗತಿಕ ಸಿಇಒ ಕ್ಲಾಸ್ ಝೆಲ್ಮೆರ್‌, ‘ಕಳೆದ 20 ವರ್ಷಗಳಿಂದ ನಾವು ಭಾರತದಲ್ಲಿದ್ದೇವೆ. ಆದರೆ ನಮ್ಮನ್ನು ನಾನು ಸರಿಯಾಗಿ ಗುರುತಿಸಿಕೊಳ್ಳಲು ಮತ್ತು ದೊಡ್ಡ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಬೇರೆ ಮಾರ್ಗವನ್ನು ಹುಡುಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ನಮಗೆ ಸರಿಯಾದ ಪಾಲುದಾರರು ಸಿಕ್ಕಲ್ಲಿ, ಪರಸ್ಪರ ಲಾಭವನ್ನು ಕಂಡುಕೊಳ್ಳಬಹುದು’ ಎಂದು ಇಟಿ ಆಟೊಗೆ ಹೇಳಿರುವುದಾಗಿ ವರದಿಯಾಗಿದೆ.

ಫೋಕ್ಸ್‌ವ್ಯಾಗನ್‌ನ ಈ ಆಯ್ಕೆಯಲ್ಲಿ ಮಹೀಂದ್ರಾ ಮುಂಚೂಣಿಯಲ್ಲಿದೆ ಎಂದು ಮೂಲಗಳು ಹೇಳಿವೆ. ಯುರೋಪ್‌ನ ಕಾರುಗಳು ಅತಿಯಾದ ಎಂಜಿನಿಯರ್‌ ಆಗಿರುತ್ತವೆ. ಭಾರತದ ಮಾರುಕಟ್ಟೆಗೆ ಇವುಗಳ ಅಗತ್ಯವಿಲ್ಲ. ಅತಿಯಾದ ಎಂಜಿನಿಯರಿಂಗ್‌ ಬೆಲೆ ಹೆಚ್ಚಳವೂ ಹೌದು. ಜತೆಗೆ ಹೈಬ್ರಿಡ್ ವಾಹನಗಳಿಗೆ ಸರ್ಕಾರವೂ ತೆರಿಗೆ ಕಡಿತ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ