ಚೆಕ್ ರಿಪಬ್ಲಿಕ್ನ ಜನಪ್ರಿಯ ಕಾರು ಸ್ಕೋಡಾ. ಭಾರತದಲ್ಲಿ MQB A0 37 ಪ್ಲಾಟ್ಫಾರ್ಮ್ನ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದು, ಇದರನ್ವಯ ಪೆಟ್ರೋಲ್ ಮಾದರಿಯ ಹೈಬ್ರಿಡ್ ಪವರ್ವೇರಿಯಂಟ್ ಕಾರುಗಳು ದೇಶೀಯ ಮಾರುಕಟ್ಟೆಗೆ ಶೀಘ್ರದಲ್ಲಿ ಪ್ರವೇಶಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಾಧ್ಯತೆಗಳನ್ನು ಕಂಪನಿ ನೋಡುತ್ತಿದೆ ಎಂದು ಆಟೊ ಕಾರ್ ಇಂಡಿಯಾ ವರದಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಸ್ಕೋಡಾ ಆಟೊ ಜಾಗತಿಕ ಸಿಇಒ ಕ್ಲಾಸ್ ಝೆಲ್ಮೆರ್, ‘ಯುರೋಪ್ ಹಾಗೂ ಚೀನಾದಲ್ಲಿನ ಹೊಸ ಬೆಳವಣಿಗೆಯನ್ನು ಗಮನಿಸಿದರೆ BEV ಹಾಗೂ ICE ಬಳಕೆಗೆ ಈಕ್ಷಣದಲ್ಲಿ ಹೆಚ್ಚಿನ ಬೇಡಿಕೆ ಇದೆ. ನಮ್ಮ ಅಂತರರಾಷ್ಟ್ರೀಯ ಯೋಜನೆಯನ್ನು ಗಮನಿಸಿದರೆ, ಕೊಡಿಯಾಕ್ ಹಾಗೂ ಸೂಪರ್ಬ್ ಕಾರುಗಳು ಪ್ಲಗ್ ಇನ್ ಹೈಬ್ರಿಡ್ ಮಾದರಿಯಲ್ಲೇ ಇವೆ. ಇವಗಳ ಇ–ರೇಂಜ್ (ಇಂಧನ ಕ್ಷಮತೆ) 100 ಕಿ.ಮೀ. ಇದೆ’ ಎಂದಿದ್ದಾರೆ.
‘ಆದಾಗ್ಯೂ, ಪ್ಲಗ್ ಇನ್ ಹೈಬ್ರಿಡ್ ಮಾದರಿಯಲ್ಲಿ ಬೆಲೆ ಹೊಂದಿಸುವುದೇ ದೊಡ್ಡ ಸವಾಲು. ಅದರಲ್ಲೂ ಗುಣಮಟ್ಟಕ್ಕಿಂತ ಬೆಲೆಯೇ ಮುಖ್ಯ ಎಂಬ ಮಾರುಕಟ್ಟೆ ಇರುವ ದೇಶದಲ್ಲಿ ಅಲ್ಪ ಪ್ರಮಾಣದ ಹೈಬ್ರಿಡ್ ಕಾರುಗಳಿಗೆ ಹೋಗುವುದು ಹೆಚ್ಚು ಉತ್ತಮ. ಇದರೊಂದಿಗೆ ಸದೃಢ ಹಾಗೂ ಪ್ಲಗ್ ಇನ್ ಹೈಬ್ರಿಡ್ ಕಾರುಗಳು ತುಸು ಹೆಚ್ಚಿನ ದರದಲ್ಲಿ ಲಭ್ಯವಾಗಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಕೋಡಾದಲ್ಲಿ ಸಧ್ಯ ಈ ಮಾದರಿಯ ಕಾರುಗಳ ಅಭಿವೃದ್ಧಿ ಆರಂಭಗೊಂಡಿದೆ. ಆಕ್ಟಿವಾ ಕಾರಿನಲ್ಲಿ 1.5 ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಜೆಗೆ 48ವೋಲ್ಟ್ನ ಲಘು ಹೈಬ್ರಿಡ್ ವ್ಯವಸ್ಥೆ ಅಳವಡಿಸಲಾಗಿದೆ. ವಿಲಾಸಿ ಕಾರು ಮಾದರಿಯಲ್ಲಿ ಸೂಪರ್ಬ್ ಹಾಗೂ ಕೊಡಿಯಾಕ್ ಕಾರುಗಳಲ್ಲಿ ಪ್ಲಗ್ ಇನ್ ಹೈಬ್ರಿಡ್ ಕಾರುಗಳಲ್ಲಿ 25.7 ಕಿಲೋವ್ಯಾಟ್ ಬ್ಯಾಟರಿ ಅಳವಡಿಸಲಾಗಿದೆ.
ಸದ್ಯ ಭಾರತದ ಮಾರುಕಟ್ಟೆಯಲ್ಲಿ MQB AO 37 ಪ್ಲಾಟ್ಫಾರ್ಮ್ ಕಾರುಗಳ ಕುರಿತು ಸ್ಕೋಡಾ ಚಿಂತಿಸುತ್ತಿದೆ. ಇದು ಪೆಟ್ರೋಲ್–ಹೈಬ್ರಿಡ್ ಮಿಶ್ರಿತ ತಂತ್ರಜ್ಞಾನಕ್ಕೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಉಪಕರಣ ಅಳವಡಿಸಲಾಗುವುದು. ಇದರಲ್ಲಿ ADAS ಹಾಗೂ 360 ಡಿಗ್ರಿ ಕ್ಯಾಮೆರಾ ಹಾಗೂ ಇನ್ನಿತರ ಅತ್ಯಾಧುನಿಕ ಸೌಕರ್ಯ ಲಭ್ಯ.