ಭಾರತದಲ್ಲಿ ಮೊದಲ ತ್ರೈಮಾಸಿಕದಲ್ಲೇ 10 ಲಕ್ಷ ಗಡಿ ದಾಟಿದ ಪ್ರಯಾಣಿಕ ವಾಹನಗಳ ಮಾರಾಟ

2024–25ನೇ ಆರ್ಥಿಕ ವರ್ಷದ ಏಪ್ರಿಲ್‌– ಜೂನ್‌ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಪ್ರಥಮ ಬಾರಿಗೆ 10 ಲಕ್ಷದ ಗಡಿ ದಾಟಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 9.96 ಲಕ್ಷ ವಾಹನಗಳು ಮಾರಾಟವಾಗಿದ್ದವು. ಈ ಬಾರಿ 10.26 ಲಕ್ಷ ವಾಹನಗಳು ಮಾರಾಟವಾಗಿವೆ. ಈ ಮಾರಾಟಕ್ಕೆ ಹೋಲಿಸಿದರೆ ಶೇ 3ರಷ್ಟು ಏರಿಕೆಯಾಗಿದೆ. ಯುಟಿಲಿಟಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಶೇ 18ರಷ್ಟು ಹೆಚ್ಚಳವಾಗಿದ್ದು, ಒಟ್ಟು 6.45 ಲಕ್ಷ ವಾಹನಗಳು ಮಾರಾಟವಾಗಿವೆ. ವ್ಯಾನ್‌ಗಳ ಮಾರಾಟವು 35,648 ರಿಂದ 38,919ಕ್ಕೆ ಏರಿಕೆಯಾಗಿದೆ. ಆದರೆ, ಕಾರುಗಳ ಮಾರಾಟವು 4.13 ಲಕ್ಷದಿಂದ 3.41 ಲಕ್ಷಕ್ಕೆ (ಶೇ 17ರಷ್ಟು) ಇಳಿಕೆಯಾಗಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, 49.85 ಲಕ್ಷ ವಾಹನಗಳು ಮಾರಾಟವಾಗಿವೆ. 1.65 ಲಕ್ಷ ತ್ರಿಚಕ್ರ ವಾಹನಗಳು ಮತ್ತು 2.24 ಲಕ್ಷ ವಾಣಿಜ್ಯ ವಾಹನಗಳು ಮಾರಾಟವಾಗಿದ್ದು, ಮಾರಾಟದಲ್ಲಿ ಕ್ರಮವಾಗಿ ಶೇ 14 ಮತ್ತು ಶೇ 3.5ರಷ್ಟು ಏರಿಕೆ ದಾಖಲಿಸಿದೆ ಎಂದು ತಿಳಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ