ವಿಶ್ವದ ಮೊದಲ ಜಲಜನಕ ಚಾಲಿತ ವಾಣಿಜ್ಯ ಹಡಗು ಸಂಚಾರ: ಸವಾರಿ ಉಚಿತ

AI ಚಿತ್ರ


ಡೀಸೆಲ್ ಚಾಲಿತ ಹಡಗುಗಳನ್ನು ಹಂತಹಂತವಾಗಿ ನಿಲ್ಲಿಸುವ ಮತ್ತು ಭೂಮಿಯ ಮೇಲ್ಮೈ ಉಷ್ಣ ಏರಿಕೆಗೆ ಪೂರಕವಾದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ ವಿಶ್ವದ ಮೊದಲ ಜಲಜನಕ ಚಾಲಿತ ವಾಣಿಜ್ಯ ಪ್ರಯಾಣಿಕ ಹಡಗು, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

MV ಸೀ ಚೇಂಜ್ ಎಂದು ಕರೆಯಲ್ಪಡುವ 70-ಅಡಿ (21-ಮೀಟರ್) ಕ್ಯಾಟಮರನ್ ಜುಲೈ 19 ರಿಂದ ಪೈರ್ 41 ಮತ್ತು ಡೌನ್‌ಟೌನ್ ಸ್ಯಾನ್ ಫ್ರಾನ್ಸಿಸ್ಕೋ ಫೆರ್ರಿ ಟರ್ಮಿನಲ್ ನಡುವಿನ ಜಲಾಭಿಮುಖದ ಉದ್ದಕ್ಕೂ 75 ಪ್ರಯಾಣಿಕರನ್ನು ಹೊತ್ತು ಸಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಪ್ರಾಯೋಗಿಕ ಸಂಚಾರವಾಗಿದ್ದು, ಈ ಅವಧಿಯಲ್ಲಿ ಪ್ರಯಾಣ ಉಚಿತವಾಗಿರಲಿದೆ. 

‘ಇದು ಕೊನೆಯಲ್ಲ. ಹೀಗಾಗಿ ಪರಿಣಾಮವೂ ದೊಡ್ಡದು. ಇದು ಕೊಲ್ಲಿಯಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗಲಿದೆ. ಇದು ಯಶಸ್ವಿಯಾದಲ್ಲಿ ಅಮೆರಿಕದಲ್ಲಿ ಜಲಜನಕ ಚಾಲಿತ ಹಡಗುಗಳ ಸಂಖ್ಯೆ ಹೆಚ್ಚು ಸಂಚರಿಸುವ ದಿನಗಳು ದೂರವಿಲ್ಲ’ ಎಂದು ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ವಾಟರ್ ಎಮರ್ಜೆನ್ಸಿ ಟ್ರಾನ್ಸ್‌ಪೋರ್ಟೇಶನ್ ಅಥಾರಿಟಿಯ ಅಧ್ಯಕ್ಷ ಜಿಮ್ ವುಂಡರ್‌ಮ್ಯಾನ್ ಹೇಳಿದ್ದಾರೆ.

ಸೀ ಚೇಂಜ್ ಸುಮಾರು 300 ನಾಟಿಕಲ್ ಮೈಲುಗಳಷ್ಟು ಪ್ರಯಾಣಿಸಬಲ್ಲದು. ಒಮ್ಮೆ ಇಂಧನ ಭರಿಸಿದರೆ 16 ಗಂಟೆಗಳ ಕಾಲ ಇದು ಸಂಚರಿಸಲಿದೆ. ಇಂಧನ ಕೋಶಗಳು ಆಮ್ಲಜನಕ ಮತ್ತು ಹೈಡ್ರೋಜನ್ ಅನ್ನು ಎಲೆಕ್ಟ್ರೋಕೆಮಿಕಲ್ ಕ್ರಿಯೆಯಲ್ಲಿ ಸಂಯೋಜಿಸುವ ಮೂಲಕ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತವೆ, ಅದು ನೀರನ್ನು ಉಪಉತ್ಪನ್ನವಾಗಿ ಹೊರಸೂಸುತ್ತದೆ.

ವಿಶ್ವದ ಒಟ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಸುಮಾರು ಶೇ 3ರಷ್ಟು ಕೊಡುಗೆ ಹಡಗಿನಿಂದಲೇ ಬರುತ್ತದೆ. ಹೀಗಾಗಿ ಇಂಥ ಪರಿಸರ ಸ್ನೇಹಿ ತಂತ್ರಜ್ಞಾನವು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಿಂದ ಉಂಟಾಗುವ ಪರೀಣಾ ಕಾರುಗಳು, ಟ್ರಕ್‌, ರೈಲು ಅಥವಾ ವಾಯುಯಾನಕ್ಕಿಂತ ಕಡಿಮೆಯೇ ಆದರೂ, ಅದನ್ನು ತಗ್ಗಿಸುವುದು ನಮ್ಮೆಲ್ಲರ ಹೊಣೆ’ ಎಂದಿದ್ದಾರೆ.

‘ಹಸಿರುಮನೆ ಪರಿಣಾಮವನ್ನು ತಗ್ಗಿಸಲು ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಷ್ಟವಾದಲ್ಲಿ ದೋಣಿ ನಿರ್ಮಾಣವೇ ಅರ್ಥಹೀನ. ಪ್ರಪಂಚದಾದ್ಯಂತ ಸಂಚರಿಸುವ ದೋಣಿ, ಹಡಗು ಇತ್ಯಾದಿ ತೇಲುವ ವಾಹನಗಳ ಸಂಖ್ಯೆಗಳನ್ನು ಗಮನಿಸಿದರೆ ಇದರ ನಿಜವಾದ ಕಾಳಜಿ ಅರ್ಥವಾಗುತ್ತದೆ’ ಎಂದು ಫ್ಯುಯೆಲ್ ಸೆಲ್ ಮತ್ತು ಹೈಡ್ರೋಜನ್ ಎನರ್ಜಿ ಅಸೋಸಿಯೇಷನ್‌ನ ಅಧ್ಯಕ್ಷ ಮತ್ತು ಸಿಇಒ ಫ್ರಾಂಕ್ ವೊಲಾಕ್ ಹೇಳಿದ್ದಾರೆ.

ಹಾಗಿದ್ದರೆ ಹೈಡ್ರೋಜನ್‌ ಇಂಧನ ಪರಿಸರ ಪೂರಕವೇ?

ಸದ್ಯಕ್ಕೆ, ಪ್ರತಿ ವರ್ಷ ಜಾಗತಿಕವಾಗಿ ಉತ್ಪಾದಿಸುವ ಹೈಡ್ರೋಜನ್, ಮುಖ್ಯವಾಗಿ ಸಂಸ್ಕರಣಾಗಾರಗಳು ಮತ್ತು ರಸಗೊಬ್ಬರ ತಯಾರಿಕೆಗಾಗಿ, ನೈಸರ್ಗಿಕ ಅನಿಲವನ್ನು ಬಳಸಿ ತಯಾರಿಸಲಾಗುತ್ತದೆ. ಆ ಪ್ರಕ್ರಿಯೆಯು ಭೂಮಿಯನ್ನು ಉಳಿಸುವ ಬದಲು ಬೆಚ್ಚಗಾಗಿಸುತ್ತದೆ. ವಾಸ್ತವವಾಗಿ, ಕಾರ್ನೆಲ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯಗಳ ಸಂಶೋಧಕರ ಹೊಸ ಅಧ್ಯಯನವು ಹೆಚ್ಚಿನ ಹೈಡ್ರೋಜನ್ ಉತ್ಪಾದನೆಯಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ ಎಂದು ಕಂಡುಹಿಡಿದಿದೆ, ಅಂದರೆ ಹೈಡ್ರೋಜನ್-ಇಂಧನ ಸಾರಿಗೆಯನ್ನು ಇನ್ನೂ ಶುದ್ಧ ಶಕ್ತಿ ಎಂದು ಪರಿಗಣಿಸಲಾಗದು ಎಂದಿದ್ದಾರೆ.

ಹೀಗಿದ್ದರೂ, ಹೈಡ್ರೊಜನ್ ಚಾಲಿತ ಸಾರಿಗೆಯನ್ನು ಪ್ರತಿಪಾದಿಸುವವರು, ದೀರ್ಘಾವಧಿಯಲ್ಲಿ 

ಆದರೂ ಹೈಡ್ರೋಜನ್-ಚಾಲಿತ ಸಾರಿಗೆಯ ಪ್ರತಿಪಾದಕರು ದೀರ್ಘಾವಧಿಯಲ್ಲಿ, ಹೈಡ್ರೋಜನ್ ಉತ್ಪಾದನೆಯು ಪರಿಸರಕ್ಕೆ ಹೆಚ್ಚು ಪೂರಕ ಎಂದು ಹೇಳುತ್ತಿದ್ದಾರೆ. ಪವನ ಹಾಗು ಸೌರಶಕ್ತಿಯಿಂದ ಹೆಚ್ಚುತ್ತಿರುವ ವಿದ್ಯುತ್ ಬಳಕೆಯನ್ನು ಊಹಿಸುತ್ತಾರೆ. ಇದು ನೀರಿನಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಪ್ರತ್ಯೇಕಿಸುತ್ತದೆ. ಅಂತಹ ನವೀಕರಿಸಬಹುದಾದ ಶಕ್ತಿಯ ಸ್ವರೂಪಗಳು ವಿಶಾಲವಾದ ಬಳಕೆಯನ್ನು ಪಡೆದುಕೊಳ್ಳುವುದರಿಂದ, ಹೈಡ್ರೋಜನ್ ಉತ್ಪಾದನೆಯು ಶುದ್ಧ ಮತ್ತು ಕಡಿಮೆ ವೆಚ್ಚದ ಪ್ರಕ್ರಿಯೆಯಾಗಬೇಕು.

ಈ ಜಲಜನಕ ಇಂಧನ ಆಧಾರಿತ ಹಡಗನ್ನು ಕ್ಯಾಲಿಫೋರ್ನಿಯಾದ ಅಲ್ಮೇಡಾದಲ್ಲಿನ ಬೇ ಶಿಪ್ ಮತ್ತು ವಿಹಾರ ನೌಕೆ ಮತ್ತು ವಾಷಿಂಗ್ಟನ್‌ನ ಬೆಲ್ಲಿಂಗ್‌ಹ್ಯಾಮ್‌ನಲ್ಲಿರುವ ಆಲ್-ಅಮೆರಿಕನ್ ಮರೈನ್‌ನಲ್ಲಿ ನಿರ್ಮಿಸಲಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ