ಹ್ಯುಂಡೈ ಎಕ್ಸ್‌ಟರ್‌ಗೆ ಒಂದು ವರ್ಷ: ವಿಶೇಷ ಸಂದರ್ಭಕ್ಕಾಗಿ ಸ್ಪೆಷಲ್ ಎಡಿಷನ್

ಹ್ಯುಂಡೈ ಎಕ್ಸ್‌ಟರ್‌ ನೈಟ್‌ ಸ್ಪೆಷಲ್‌ ಎಡಿಷನ್

ಭಾರತದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಕಾರು ತಯರಿಕಾ ಕಂಪನಿ ಹ್ಯುಂಡೈ ಕಳೆದ ವರ್ಷ ಎಕ್ಸ್‌ಟರ್‌ ಪರಿಚಯಿಸಿತ್ತು. ಇದೀಗ ಈ ಕಾರು ಯಶಸ್ವಿಯಾಗಿ ಒಂದು ವರ್ಷ ಪೂರ್ಣಗೊಳಿಸದ ಸಂದರ್ಭದಲ್ಲಿ ಸ್ಪೆಷಲ್ ಎಡಿಷನ್‌ ‘ನೈಟ್‌’ ಎಂಬ ವಿಶೇಷ ಮಾದರಿಯನ್ನು ಪರಿಚಯಿಸಿದೆ.

ಕಂಪನಿಯು ಈ ಕುರಿತು ಮಾಹಿತಿ ನೀಡಿದ್ದು, ಈ ಹೊಸ ಮಾದರಿಯು ಜೆನ್‌ ಝಡ್‌ ಹಾಗೂ ಯುವ ಸಮುದಾಯದ ಮನಕ್ಕೊಪ್ಪುವ ವಿನ್ಯಾಸ ಇದಾಗಿದೆ. ಕಾರ್ಯಕ್ಷಮತೆ ಹಾಗೂ ಬೋಲ್ಡ್ ವಿನ್ಯಾಸದ ಮೂಲಕ ಹೊಸ ಮಾದರಿ ಹೆಚ್ಚು ಆಪ್ತವಾಗಿರಲಿದೆ.

ಬೆಲೆ ಹಾಗೂ ಬಣ್ಣಗಳ ಆಯ್ಕೆ

ಇದರ ಬೆಲೆ ₹8.38 ಲಕ್ಷದಿಂದ (ಎಕ್ಸ್ ಶೋರೂಂ) ರಿಂದ ಆರಂಭವಾಗಿ ಆಟೊಮ್ಯಾಟಿಕ್ ಮಾದರಿ ₹10.42 ಲಕ್ಷ (ಎಕ್ಸ್ಶೋರೂಂ) ರಷ್ಟಿದೆ. ಇದು ಏಳು ಬಣ್ಣಗಳಲ್ಲಿ ಲಭ್ಯ. ಇದರಲ್ಲಿ ಮೂರು ಹೊಸ ಬಣ್ಣಗಳನ್ನು ಈ ಬಾರಿ ಮೂರು ಹೊಸ ಬಣ್ಣಗಳನ್ನು ಪರಿಚಯಿಸಿದೆ. ಇದರಲ್ಲಿ ಅಬೀಸ್‌ ಬ್ಲಾಕ್‌, ಶ್ಯಾಡೊ ಗ್ರೇ ಹಾಗೂ ಅಬೀಸ್ ಬ್ಲಾಕ್‌ ರೂಫ್‌ನ ಶ್ಯಾಡೊ ಗ್ರೇ ಈ ಬಾರಿಯ ಹೊಸ ಬಣ್ಣಗಳು.

ಹಾಗಿದ್ದರೆ ಸ್ಪೆಷಲ್ ಎಡಿಷನ್‌ನಲ್ಲಿ ಹೊಸತೇನಿದೆ?

ಹೊಸ ಮಾದರಿಯಲ್ಲಿ ಡಾರ್ಕ್ ಥೀಮ್‌ ಆಧಾರಿತ ಹೊಸ ವಿನ್ಯಾಸ ಹೊಂದಿದೆ. ಬಂಪರ್‌ ಮೇಲೆ ಕೆಂಪು ರಂಗು, ಹಿಂದಿನ ಟೇಲ್‌ ಲೈಟ್‌ನಲ್ಲೂ ಕೆಂಪು. ಪುಟ್ಟ ಮಾದರಿಯ ಈ ಎಸ್‌ಯುವಿಯಲ್ಲಿ ಆರ್‌15 ಅಲಾಯ್ ವೀಲ್ಸ್‌ ಕಾರಿನ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಇಷ್ಟು ಮಾತ್ರವಲ್ಲ, ಎಕ್ಸ್‌ಟರ್‌ನ ಹ್ಯುಂಡೈ ಲೊಗೊ ಕೂಡ ಕಪ್ಪು ಬಣ್ಣಕ್ಕೆ ಪರಿವರ್ತಿಸಲಾಗಿದೆ. ಒಂದೇ ರೀತಿಯ ಎಲ್‌ಇಡಿ ಹೆಡ್‌ಲ್ಯಾಂಪ್‌, ಆಕರ್ಷಕ ಡಿಆರ್‌ಎಲ್ ಹಾಗೂ ಸ್ಕಿಡ್‌ ಪ್ಲೇಟ್ ಬಳಿ ಪಿಯಾನೊ ಬ್ಲಾಕ್‌ ಅಳವಡಿಸಲಾಗಿದೆ.

ಸುಂದರ ಒಳಾಂಗಣ

ಹೊರಗೆ ಮಾತ್ರವಲ್ಲ, ಒಳಭಾಗದಲ್ಲೂ ಕಡು ಬಣ್ಣದ ಇಂಟೀರಿಯರ್‌, ಅದಕ್ಕೆ ಕೆಂಪು ಎಳೆಯನ್ನು ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲೂ ಈ ಥೀಮ್‌ ಮುಂದುವರಿಯಲಿದೆ. ಆಸನ ಹಾಗೂ ಎಸಿ ವೆಂಟ್ಸ್‌  ಎಲ್ಲವೂ ಡಾರ್ಕ್ ಥೀಮ್‌ನಲ್ಲಿದೆ. ಫ್ಲೋರ್‌ ಮ್ಯಾಟ್‌ ಕೂಡಾ ಅದೇ ಮಾದರಿಯಲ್ಲಿದೆ.

ಎಂಜಿನ್

ಎಕ್ಸ್‌ಟರ್‌ ನೈಟ್‌ ಎಡಿಷನ್‌ ಕಾರಿನಲ್ಲಿ 1.2ಲೀ ಕಪ್ಪಾ ಪೆಟ್ರೋಲ್‌ ಎಂಜಿನ್ ಹೊಂದಿದೆ. ಐದು ಸ್ಪೀಡ್ ಮ್ಯಾನ್ಯುಯಲ್ ಹಾಗೂ ಆಟೊಮ್ಯಾಟಿಕ್‌ ಮಾದರಿಯ ಗೇರ್ ಬಾಕ್ಸ್ ಲಭ್ಯ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ