Norton Motorcycles: ಮುಂದಿನ ಮೂರು ವರ್ಷಗಳಲ್ಲಿ ಬ್ರಿಟನ್‌ ಬೈಕ್‌ಗಳು ಭಾರತದ ರಸ್ತೆಗೆ

Norton Bikes

ಬ್ರಿಟಿಷ್ ಬೈಕ್ ತಯಾರಿಕ ಕಂಪನಿ ನಾರ್ಟ್‌ ಮೋಟಾರ್‌ಸೈಕಲ್‌ ಭಾರತದಲ್ಲಿ ಟಿವಿಎಸ್‌ ಜತಗೂಡಿ ಬೈಕ್‌ಗಳನ್ನು ಉತ್ಪಾದಿಸುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಆರು ಹೊಸ ಉತ್ಪನ್ನಗಳನ್ನು ಭಾರತದಲ್ಲಿ ಪರಿಚಯಿಸಲಿರುವುದಾಗಿ ಹೇಳಿದೆ.

ನಾರ್ಟನ್‌ ಮೋಟಾರ್‌ಸೈಕಲ್‌ಗಳ ಅಭಿವೃದ್ಧಿಗಾಗಿ ಟಿವಿಎಸ್‌ 200 ದಶಲಕ್ಷ ಪೌಂಡ್‌ ಹೂಡಿಕೆ ಮಾಡುವುದಾಗಿ ಹೇಳಿದೆ. ಇದರಲ್ಲಿ ಸಂಶೋಧನೆ, ಅಭಿವೃದ್ಧಿ ಹಾಗೂ ಗುಣಮಟ್ಟ ಎಂಜಿನಿಯರಿಂಗ್ ಒಳಗೊಂಡಿದೆ.

ಹೀಗಾಗಿ ಉಭಯ ಕಂಪನಿಗಳಲ್ಲಿನ ನಾಯಕತ್ವಕ್ಕಾಗಿ ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್‌ಬಾಲ್ ಕ್ಲಬ್‌ನ ಮಾಜಿ ಸಿಇಒ ರಿಚರ್ಡ್‌ ಅರ್ನಾಲ್ಡ್‌ ಅವರನ್ನು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ.

ಮುಂದಿನ ವರ್ಷದಿಂದ ನಾರ್ಟನ್‌ ಬೈಕ್‌ಗಳು ಭಾರತದಲ್ಲಿ ಪರಿಚಯಗೊಳ್ಳಲಿವೆ. ಮುಂದಿನ ಮೂರು ವರ್ಷಗಳಿಗೆ ಒಟ್ಟು ಆರು ಉತ್ಪನ್ನಗಳನ್ನು ಪರಿಚಯಿಸುವ ಗುರಿಯನ್ನು ಉಭಯ ಕಂಪನಿಗಳು ಹೊಂದಿವೆ ಎಂದು ವರದಿ ತಿಳಿಸಿದೆ.

‘ನಾರ್ಟನ್ ಕಂಪನಿಯು ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ, ಜರ್ಮನಿ, ಫ್ರಾನ್ಸ್, ಇಟಲಿ ಹಾಗೂ ಭಾರತದ ಮಾರುಕಟ್ಟೆಯತ್ತ ತನ್ನ ಚಿತ್ತ ಹರಿಸಿದೆ ಎಂದು ಕಂಪನಿ ಹೇಳಿದೆ.

ನಾರ್ಟನ್‌ನೊಂದಿಗಿನ ಒಡಂಬಡಿಕೆ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಟಿವಿಎಸ್ ಮೋಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಹೇಳಿದ್ದಾರೆ.

ನಾರ್ಟನ್‌ ಕಂಪನಿಯು ಸುಮಾರು 2.3 ದಶಲಕ್ಷ ಪೌಂಡ್‌ಗಳನ್ನು ಬೈಕ್‌ಗಳ ಅಭಿವೃದ್ಧಿ ಹಾಗು ತಯಾರಿಕೆಗೆ ಹೂಡಿದೆ. ಕಮಾಂಡೊ ಮತ್ತು ವಿ4 ಮಾದರಿಯ ಬೈಕ್‌ಗಳನ್ನು ಕಂಪನಿ ಅಭಿವೃದ್ಧಿಪಡಿಸುವತ್ತ ಯೋಜನೆ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆ ನೀಡಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ