ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಎಕ್ಸ್–ಟ್ರಯಲ್ ಹೆಸರಿನಲ್ಲಿ 4ನೇ ತಲೆಮಾರಿನ ಪ್ರೀಮಿಯಮ್ ಅರ್ಬನ್ ಎಸ್‌ಯುವಿ ಪರಿಚಯಿಸಿದ್ದು, ಇದು ಜಗತ್ತಿನ ಮೊತ್ತ ಮೊದಲ ವೇರಿಯಬಲ್ ಕಂಪ್ರೆಷನ್ ತಂತ್ರಜ್ಞಾನ ಆಧಾರಿತ ಎಂಜಿನ್ ಆಗಿದೆ.
ಈಗಾಗಲೇ ಜಾಗತಿ ಮಟ್ಟದಲ್ಲಿ 78 ಲಕ್ಷ ಕಾರುಗಳನ್ನು ಮಾರಾಟ ಮಾಡಿರುವ ನಿಸ್ಸಾನ, ಇದೀಗ ಭಾರತದಲ್ಲಿ ಎಕ್ಸ್–ಟ್ರಯಲ್ ಪರಿಚಯಿಸಿದೆ. ALiS 12 ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಈ ಕಾರಿನದು. ಇದರಿಂದ ಹೆಚ್ಚಿನ ಟಾರ್ಕ್ ಉತ್ಪತ್ತಿ, ಐಡಲ್ ಸ್ಟಾಪ್‌ಗೆ ಹೆಚ್ಚಿನ ಸಮಯ, ತ್ವರಿತ ರಿಸ್ಟಾರ್ಟ್ ಹಾಗೂ ಹೆಚ್ಚಿನ ಇಂಧನ ಕ್ಷಮತೆಯ ಉಪಯೋಗ ಇದರಲ್ಲಿದೆ.
ನೈಜ ಎಸ್‌ಯುವ ಡಿಎನ್‌ಎ ಇದರದ್ದು. 31.2 ಸೆಂ.ಮೀ.ನ ಅಧಿಕ ರೆಸಲೂಷನ್ ಹೊಂದಿರುವ ಅತ್ಯಾಧುನಿಕ ಟ್ರೈವರ್ ಡಿಸ್‌ಪ್ಲೇ ಅನ್ನು ಎಕ್ಸ್–ಟ್ರಯಲ್ ಹೊಂದಿದೆ. ಜತೆಗೆ ಆರ್20 ಡೈಮಂಡ್ ಕಟ್ ಅಲಾಯ್ ವೀಲ್ ಕೂಡಾ ಇದರದ್ದು. ಹೀಗಾಗಿ ಎಕ್ಸ್–ಟ್ರಯಲ್‌ನಲ್ಲಿ ಎಲ್ಲವೂ ದೊಡ್ಡದಾಗಿಯೇ ಇದ್ದು, ಎಸ್‌ಯುವಿ ಅನುಭೂತಿ ನೀಡಲಿದೆ.
ಸುರಕ್ಷತೆಯ ದೃಷ್ಟಿಯಲ್ಲೂ ಎಕ್ಸ್–ಟ್ರಯಲ್ ಮುಂದಿದೆ. ಏಳು ಏರ್‌ಬ್ಯಾಗ್‌ಗಳು, ಅರೌಂಡ್ ವ್ಯೂ ಮಾನಿಟರ್ (AVM) ಹಾಗೂ ಮೂವಿಂಗ್ ಆಬ್ಜೆಕ್ಟ್ ಡಿಟೆಕ್ಷನ್ (MOD), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫೆರೆನ್ಶಿಯಲ್ (BSLD) ಹೊಂದಿದೆ.
ಎಕ್ಸ್–ಟ್ರಯಲ್ ಎಸ್‌ಯುವಿ ಒಳಗೆ 1.5ಲೀಟರ್ ಪೆಟ್ರೋಲ್ ವೇರಿಯಬಲ್ ಕಂಪ್ರೆಷನ್ ಟರ್ಬೊ ನಿಸ್ಸಾನ್ ALiS ಮೈಲ್ಡ್ ಹೈಬ್ರಿಡ್ 2 ವೀಲ್ ಡ್ರೈವ್ ಎಂಜಿನ್‌ನಲ್ಲಿ 3ನೇ ತಲೆಮಾರಿನ ಎಕ್ಸ್‌ಟ್ರಾನಿಕ್ ಸಿವಿಟಿ ಪವರ್‌ಟ್ರೈನ್ ಹೊಂದಿದೆ. ಇದು 163 ಪಿಎಸ್ ಹಾಗೂ 300 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು.
ಇದರಲ್ಲಿ ಪೇಟೆಂಟ್ ಹೊಂದಿರುವ ವಿಸಿ ಟರ್ಬೊ ಎಂಜಿನ್ ಇದೆ. ಎಎಲ್‌ಐಎಸ್ (ಅಡ್ವಾನ್ಸ್ಡ್ ಲೀಥಿಯಂ ಅಯಾನ್ ಬ್ಯಾಟರಿ ವ್ಯವಸ್ಥೆ) ಇದ್ದು, ಇದು ಸಣ್ಣ ಪ್ರಮಾಣದ ಹೈಬ್ರಿಡ್ ವ್ಯವಸ್ಥೆಯನ್ನು ನೀಡಲಿದೆ. ಇದರಿಂದ ಇಂಧನ ಕ್ಷಮತೆ ಹೆಚ್ಚುವುದರ ಜತೆಗೆ, ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನೂ ತಗ್ಗಿಸಲಿದೆ.
ಫ್ಲೋಟಿಂಗ್ ರೂಫ್ ಹಾಗೂ ವಿ–ಮೋಷನ್ ಗ್ರಿಲ್ ಕಾರಿನ ಅಂದವನ್ನು ಹೆಚ್ಚಿಸಿದೆ. ಬಾಡಿಯೊಳಗೆ ಹೊಂದಿಸಿದಂತಿರುವ ಹೆಡ್‌ಲೈಟ್ಸ್, ಡಿಆರ್‌ಎಲ್, ಇಂಡಿಕೇಟರ್ ಎಕ್ಸ್ ಟ್ರಯಲ್ ನೋಟವನ್ನು ಇನ್ನಷ್ಟು ಆಪ್ತವೆನಿಸುವಂತೆ ಮಾಡಿದೆ.
ಒಟ್ಟು ಏಳು ಆಸನಗಳ ಈ ಕಾರಿನ ಒಳಭಾಗಿ ವಿಲಾಸಿತನದಿಂದ ಕೂಡಿದೆ. ಪ್ಯಾನೊರಾಮಿಕ್ ಸನ್‌ರೂಫ್, ಉತ್ತಮ ಸೀಟ್ ಹೊಂದಿದೆ. ಬೂಟ್‌ನಲ್ಲಿ 585 ಲೀಟರ್ ಸ್ಥಳಾವಕಾಶವಿದೆ. ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಆ್ಯಪಲ್ ಕಾರ್‌ಪ್ಲೇ, ಆ್ಯಂಡ್ರಾಯ್ಡ್ ಆಟೊ ಜತೆ ಸುಲಭವಾಗಿ ಕನೆಕ್ಟ್ ಆಗಲಿದೆ.
ಇ–ಶಿಫ್ಟರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೊ ಹೋಲ್ಡ್, ಡ್ರೈವ್ ಮೋಡ್, ಪೆಡ್ಡಲ್ ಶಿಫ್ಟರ್, ಡುಯಲ್ ಝೋನ್ ಎಸಿ, ಕ್ರೂಸ್ ಕಂಟ್ರೋಲ್, ಆಟೊ ಫೋಲ್ಡ್ ಒಆರ್‌ವಿಎಂ ಇತರ ಸೌಲಭ್ಯಗಳು.
₹1ಲಕ್ಷ ನೀಡಿ ಎಕ್ಸ್–ಟ್ರಯಲ್ ಬುಕ್ ಮಾಡಿದರೆ, 2024ರ ಆಗಸ್ಟ್ ನಿಂದ ವಾಹನದ ಡೆಲಿವರಿ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.