ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ ಸಬ್ಸಿಡಿ: ಸೆ. 30ರವರೆಗೂ ಮುಂದುವರಿಕೆ

EV Scooter

ಎಲೆಕ್ಟ್ರಿಕ್ ಮೊಬಿಲಿಟಿ ಸ್ಕೀಂ 2024 (EMPS) ಅಡಿಯಲ್ಲಿ ನೀಡುವ ಸಬ್ಸಿಡಿಯನ್ನು ಸೆ. 30ರವರೆಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ದಿನಾಂಕ ಈ ಮೊದಲು ಜುಲೈ 31ರವರೆಗೂ ಇತ್ತು.

ಸರ್ಕಾರವು ಒಟ್ಟು 5,60,780 ಇವಿ ಹನಗಳಿಗೆ ನೆರವು ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಲ್ಲಿ 5,00,080 ದ್ವಿಚಕ್ರ ವಾಹನ ಒಳಗೊಂಡಿದೆ. ಈ ಮೊದಲು 3,33,387 ವಾಹನಗಳಿಗೆ ನೆರವು ನೀಡುವ ಗುರಿಯನ್ನು ಸರ್ಕಾರ ಹೊಂದಿತ್ತು. ಜತೆಗೆ 60,709 ಎಲೆಕ್ಟ್ರಿಕ್‌ ಮೂರು ಗಾಲಿಯ ಇ–ರಿಕ್ಷಾ ಹಾಗೂ ಇ–ಕಾರ್ಟ್‌ಗಳಿಗೆ ಸಬ್ಸಿಡಿ ಸಿಗಲಿದೆ.

ಇದಕ್ಕಾಗಿಯೇ ಸರ್ಕಾರ ಈ ಮೊದಲು ನಿಗದಿಪಡಿಸಿದ್ದ ಸಬ್ಸಿಡಿ ಮೊತ್ತ ₹500 ಕೋಟಿಯಿಂದ ₹778 ಕೋಟಿಯನ್ನು ಮೀಸಲಿಟ್ಟಿದೆ.

ಇಎಂಪಿಎಸ್ ಯೋಜನೆಯು ಭಾರತದಲ್ಲಿ ಹಸಿರು ಸಂಚಾರ ಹಾಗೂ ವಿದ್ಯುತ್ ಚಾಲಿತ ವಾಹನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಈ ಯೋಜನೆಗೆ ಸರ್ಕಾರ ಮೀಸಲಿಟ್ಟ ಮೊತ್ತ ಸೀಮಿತವಾಗಿರುವುದರಿಂದ ಹೆಚ್ಚು ಇವಿಗಳನ್ನು ತಲುಪುವುದನ್ನು ನಿರ್ಬಂಧಿಸುತ್ತದೆ ಎಂದು ಇಟಿ ತನ್ನ ವರದಿಯಲ್ಲಿ ಹೇಳಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ