ತಾಂತ್ರಿಕ ದೋಷ: 7 ಲಕ್ಷ BMW ಕಾರುಗಳು ಹಿಂದಕ್ಕೆ

BMW ಸಾಂದರ್ಭಿಕ ಚಿತ್ರ

ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಅವಘಡ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಎಂಡಬ್ಲ್ಯು ಕಂಪನಿ ತಾನು ಮಾರಾಟ ಮಾಡಿದ 7 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯಲಿದೆ ಎಂದು ವರದಿಯಾಗಿದೆ.

ಎಕ್ಸ್ 1, ಎಕ್ಸ್ 3 ಮತ್ತು ಎಕ್ಸ್ 5 ಸೇರಿದಂತೆ ಇತರೆ ಮಾದರಿಯ ಕಾರುಗಳನ್ನು ಹಿಂಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ವಿಭಾಗವು (ಎನ್‌ಎಚ್‌ಟಿಎಸ್‌ಎ) ಸೂಚನೆ ನೀಡಿದೆ.

‘ಕಾರಿನಲ್ಲಿರುವ ನೀರಿನ ಪಂಪ್‌ ಅನ್ನು ಸರಿಯಾಗಿ ಮುಚ್ಚಲಾಗಿಲ್ಲ. ಇದರಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿದೆ’ ಎಂದು ಎನ್‌ಎಚ್‌ಟಿ ಎಸ್‌ಎ ವರದಿ ಸಲ್ಲಿಸಿತ್ತು.

7 ಲಕ್ಷದ 20 ಸಾವಿರಕ್ಕೂ ಅಧಿಕ ವಾಹನಗಳ ಮಾಲೀಕರಿಗೆ ಈ ಬಗ್ಗೆ ಅಕ್ಟೋಬರ್‌ನಲ್ಲಿ ಕಂಪನಿಯು ಮಾಹಿತಿ ನೀಡುವ ಸಾಧ್ಯತೆಗಳಿದ್ದು, ಬಿಎಂಡಬ್ಲ್ಯು ಶೋರೂಮ್‌ಗಳಲ್ಲಿ ಉಚಿತವಾಗಿ ರಿಪೇರಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ