ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ, ಚಾಲಕರಹಿತ ರೊಬೊ ಟ್ಯಾಕ್ಸಿಯನ್ನು ಆರಂಭಿಸಿದೆ.
ಹಾಲಿವುಡ್ ಸ್ಟುಡಿಯೊದಲ್ಲಿ ಟ್ಯಾಕ್ಸಿ ಅನಾವರಣದ ಬಳಿಕ ಮಾತನಾಡಿದ ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್, ‘2026ರಿಂದ ಕಂಪನಿಯು ರೋಬೊ ಟ್ಯಾಕ್ಸಿಗಳ ತಯಾರಿಕೆ ಆರಂಭಿಸಲಿದೆ. ಇದರ ಬೆಲೆ 30 ಸಾವಿರ ಡಾಲರ್‌ಗಿಂತ (₹25 ಲಕ್ಷ) ಕಡಿಮೆ ಇರಲಿದೆ’ ಎಂದು ತಿಳಿಸಿದ್ದಾರೆ.
ರೋಬೊ ಟ್ಯಾಕ್ಸಿಯ ಸ್ವಯಂಚಾಲಿತ ವ್ಯವಸ್ಥೆಗೆ ‘ಆಟೊಪೈಲಟ್’ ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಸಮೂಹ ಸಾರಿಗೆ ವ್ಯವಸ್ಥೆಯಾಗಿ ಜನಪ್ರಿಯಗೊಳಿಸು ವುದು ಮಸ್ಕ್ ಅವರ ಗುರಿಯಾಗಿದೆ.