ಭಾರತ್ ಸ್ಟೇಜ್‌ BS 7: ಹೊಸ ಕಾರುಗಳಿಗೆ ನಿಯಮ ಕಡ್ಡಾಯ; Fortuner, Crysta ಸ್ಥಗಿತ ಸಾಧ್ಯತೆ!

ಯೂರೊ 7 ನಿಯಮಗಳಿಗೆ ಸರಿಸಮನಾಗಿ ಭಾರತ್ ಸ್ಟೇಜ್‌ ಬಿಎಸ್‌7 ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾರು ತಯಾರಿಕಾ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುವ ನಿಯಮಗಳುಳ್ಳ ಬಿಎಸ್‌7 ಎಂದಿನಿಂದ ಜಾರಿಯಾಗಲಿದೆ ಎಂಬ ಗೊಂದಲ ಇತ್ತು. ಆದರೆ 2025ಕ್ಕೆ ಬಿಎಸ್‌7 ಜಾರಿ ಕಡ್ಡಾಯ ಎಂಬ ಮಾತು ಸ್ವತಃ ಸಚಿವರಿಂದಲೇ ಕೇಳಿಬಂದಿದೆ. ಹೀಗಾಗಿ ಈ ಗೊಂದಲಕ್ಕೆ ತೆರೆ ಬಿದ್ದಿದೆ.

ಸದ್ಯದ ಮಾಹಿತಿ ಪ್ರಕಾರ 2025ರ ಜುಲೈ 1ರಿಂದ ಯೂರೊ 7 ಜಾರಿಗೆ ಬರಲಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಲಿನ್ಯ ಹೊರಸೂಸುವುದನ್ನು ಖಾತ್ರಿಪಡಿಸುವ ಈ ನಿಯಮ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಅನ್ವಯಿಸಲಿದೆ. ಇದರಿಂದಾಗಿ 2025ರ ನಂತರ ಇಂಧನ ದಹಿಸುವ ಯಾವುದೇ ಕಾರುಗಳು ಹೊರಸೂಸುವ ನೈಟ್ರೋಜೆನ್ ಆಕ್ಸೈಡ್‌ ಪ್ರಮಾಣ 60 ಮಿ.ಗ್ರಾಂ. ಮೀರುವಂತಿಲ್ಲ.

ಇದರಿಂದಾಗಿ ಟೊಯೊಟಾ ತನ್ನ ಗರಿಷ್ಠ ಸಾಮರ್ಥ್ಯದ 2.8 ಲೀ. ಡೀಸೆಲ್ ಎಂಜಿನ್‌ ಅನ್ನು ಕೈಬಿಡುವ ಸಾಧ್ಯತೆಗಳಿವೆ. ಸದ್ಯ ಫಾರ್ಚೂನರ್‌ ಹಾಗೂ ಇನ್ನೋವಾ ಕ್ರಿಸ್ಟಾ ಕಾರುಗಳು ಈ ಎಂಜಿನ್‌ ಹೊಂದಿವೆ. ಹೀಗಾಗಿ ಕಡಿಮೆ ಸಾಮರ್ಥ್ಯದ 2.0 ಲೀಟರ್‌ ಪೆಟ್ರೋಲ್ ಎಂಜಿನ್‌ಗಳನ್ನು ಬಿಎಸ್‌7 ನಿಯಮಗಳ ಅಡಿಯಲ್ಲಿ ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ