ಹೋಳಿ ಹಬ್ಬದ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ರಿಯಾಯಿತಿ ಘೋಷಣೆ

EV Scooter

ಹೋಳಿ ಹಬ್ಬದ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಎಸ್1 ಸರಣಿಯ ಇ–ಸ್ಕೂಟರ್‌ನ ರಿಯಾಯಿತಿ ದರದ ಮಾರಾಟವನ್ನು ಪ್ರಕಟಿಸಿದೆ. ಸೀಮಿತ ಅವಧಿವರೆಗೆ ಈ ಸೌಲಭ್ಯ ದೊರೆಯಲಿದೆ.

ಎಸ್‌1 ಏರ್‌ ಸ್ಕೂಟರ್‌ಗೆ ₹ 26,750 ರಿಯಾಯಿತಿ ಘೋಷಿಸಿದ್ದು, ಇದು ₹ 89,999ಕ್ಕೆ ದೊರೆಯಲಿದೆ. ಎಸ್‌1ಎಕ್ಸ್‌ ಪ್ಲಸ್‌ (ಜೆನ್‌ 2) ಸ್ಕೂಟರ್‌ಗೆ ₹ 22 ಸಾವಿರ ರಿಯಾಯಿತಿ ಪ್ರಕಟಿಸಿದ್ದು, ₹ 82,999ಕ್ಕೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಎಸ್‌1 ಸರಣಿ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿರುವ ಎಸ್‌1 ಜೆನ್‌ 3 ಸರಣಿಯ ಸ್ಕೂಟರ್‌ಗಳ ಬೆಲೆಯಲ್ಲಿ ₹25,000 ರಿಯಾಯಿತಿ ಪ್ರಕಟಿಸಲಾಗಿದೆ. ಮಾರ್ಚ್‌ 17ರ ವರೆಗೆ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ