2025ರ ಫೆಬ್ರುವರಿಯಲ್ಲಿ ಭಾರತದಲ್ಲಿ ಲಭ್ಯವಿರುವ ಈ ಪ್ರಮುಖ ಐದು ಬೈಕ್ಗಳಿಗೆ ಹೆಚ್ಚಿನ ಹುಡುಕಾಟ ನಡೆಸಲಾಗಿದೆ ಎಂದು ಗೂಗಲ್ ತನ್ನ ಟ್ರೆಂಡ್ಸ್ನ ಮಾಹಿತಿ ಅನ್ವಯ ವರದಿ ಮಾಡಿದೆ.
ಭಾರತದಲ್ಲಿ ವಾಹನ ಉದ್ಯಮವು ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ. ಇದರಿಂದ ಉತ್ತೇಜನಗೊಂಡಿರುವ ಕಂಪನಿಗಳು ಬಹಳಷ್ಟು ಹೊಸ ಮಾದರಿಯ, ಆಧುನಿಕ ತಂತ್ರಜ್ಞಾನದ ವಾಹನಗಳನ್ನು ರಸ್ತೆಗಿಳಿಸುತ್ತಿವೆ. KTM ನಿಂದ ಏಪ್ರಿಲಿಯಾ ಮತ್ತು ಯಮಹಾದ ಮೊದಲ ಹೈಬ್ರಿಡ್ ಮೋಟಾರ್ಸೈಕಲ್, FZ-S FI ಇವುಗಳು ಹೆಚ್ಚು ಸುದ್ದಿಯಲ್ಲಿವೆ. ಕಳೆದ 30 ದಿನಗಳಲ್ಲಿ ಗೂಗಲ್ ಮೂಲಕ ಅತಿ ಹೆಚ್ಚು ಹುಡುಕಾಟ ನಡೆಸಿರುವ ಬೈಕ್ಗಳ ವಿವರ ಇಲ್ಲಿದೆ.

KTM 390 ಅಡ್ವೆಂಚರ್ vs ಅಡ್ವೆಂಚರ್ ಆರ್
ಕೆಟಿಎಂ ಪರಿಚಯಿಸಿರುವ ಅಡ್ವೆಂಚರ್ ಸರಣಿಗೆ ಕಳೆದ ಕೆಲ ತಿಂಗಳಿಂದ ಬೇಡಿಕೆ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಕೆಟಿಎಂ ಅಡ್ವೆಂಚರ್ ಭಾರತದ ಮಾರುಕಟ್ಟೆಯಲ್ಲೂ ಅದೇ ಬೇಡಿಕೆ ಹೊಂದಿದೆ. 390 ಎಂಡ್ಯೂರಾ ಆರ್ ಇನ್ನಷ್ಟೇ ಮಾರಾಟವಾಗಬೇಕಿದೆ. ಹಾರ್ಡ್ಕೋರ್ 390 ಅಡ್ವೆಂಚರ್ ಆರ್ ಅನ್ನು ಜನರು ನಿರೀಕ್ಷಿಸುತ್ತಿದ್ದಾರೆ.
ಭಾರತದಲ್ಲಿ 390 ಡ್ಯೂಕ್ ಅನ್ನು ಕೆಟಿಎಂ ಸದ್ದಿಲ್ಲದೆ ಬಿಡುಗಡೆ ಮಾಡಿತ್ತು. ನವೀಕೃತ ಬೈಕ್ ಹೊಸ ಬಣ್ಣ ಹಾಗೂ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಕಂಪನಿಯು ನಷ್ಟದಲ್ಲಿದೆ ಎಂಬ ಮಾತುಗಳೂ ಕೇಳಿಬಂದವು. ಬಿಎಂಡಬ್ಲೂ ಕಂಪನಿಯು ಕೆಟಿಎಂ ಅನ್ನು ಖರೀದಸಲಿದೆ ಎಂಬ ಮಾತುಗಳೂ ಕೇಳಿಬಂದವು. ಆದರೆ ಬಜಾಜ್ ನೆರವು ಪಡೆದ ಆಸ್ಟ್ರಿಯಾದ ಈ ಬೈಕ್ ಕಂಪನಿ ಸದ್ಯ ತನ್ನ ಹೊಸ ಮಾದರಿ ಮೂಲಕ ಸುದ್ದಿಯಲ್ಲಿದೆ.

ರಾಯಲ್ ಎನ್ಫೀಲ್ಡ್ ಗೆರಿಲ್ಲಾ 450
ರಾಯಲ್ ಎನ್ಫೀಲ್ಡ್ ಕಂಪನಿಯು ಭಾರತದಲ್ಲಿ ಸದಾ ಸುದ್ದಿಯಲ್ಲಿರುವ ಕಂಪನಿ. ಬಹುಬೇಡಿಕೆಯ ಕ್ಲಾಸಿಕ್ ಶೈಲಿಯ ಬೈಕ್ನ ಮುಂದಿವರಿದ ಭಾಗವಾಗಿ ಹಲವು ಸೌಲಭ್ಯಗಳನ್ನು ನೀಡಿದೆ. ಡ್ಯುಯಲ್ ಚಾನಲ್ ಎಬಿಎಸ್, ನ್ಯಾವಿಗೇಷನ್, ಮೊಬೈಲ್ ಕನೆಕ್ಟಿವಿಟಿ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇದು ಪಡೆದಿದೆ.
ಹಿಮಾಲಯ ಹಾಗೂ ಎನ್ಫೀಲ್ಡ್ ಗೇರಿಲ್ಲಾ 450 ಸದ್ಯ ಬೇಡಿಕೆ ಹೊಂದಿದೆ. ಗೂಗಲ್ನಲ್ಲಿ ಈ ಬೈಕಿಗಾಗಿ ನೆಟ್ಟಿಗರು ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ವರದಿ ಹೇಳಿದೆ.

ಯಮಹಾ ಎಫ್ಝಡ್–ಎಸ್–ಎಫ್ಐ ಹೈಬ್ರಿಡ್
ಜಪಾನ್ ಮೂಲದ ತಯಾರಿಕಾ ಕಂಪನಿ, ಭಾರತದ ಮೊದಲ ಹೈಬ್ರಿಡ್ ಮೋಟಾರ್ಸೈಕಲ್ FZ-S FI ಬಿಡುಗಡೆ ಮಾಡಿದೆ. ಅಗತ್ಯವಿರುವಾಗ ವೇಗ ಹೆಚ್ಚಿಸಲು ಅನುಕೂಲವಾಗುವಂತೆ ಪೆಟ್ರೋಲ್ ಮತ್ತು ಬ್ಯಾಟರಿ ಚಾಲಿತ ಬೈಕ್ ಅನ್ನು ಯಮಾಹಾ ಅಭಿವೃದ್ಧಿಪಡಿಸಿದೆ. ಐದು-ಸ್ಪೀಡ್ ಗೇರ್ಬಾಕ್ಸ್ ಇದರಲ್ಲಿ ಅಳವಡಿಸಲಾಗಿದೆ. 12.4 hp ಮತ್ತು 13.3 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಲಿದೆ. ಬಿಡುಗಡೆಯಾದ ದಿನದಂದಲೂ ಈ ಬೈಕ್ನತ್ತ ಆಸಕ್ತರು ನಿರೀಕ್ಷೆಯ ಕಣ್ಣಿಟ್ಟಿದ್ದಾರೆ.

2025 ಹೋಂಡಾ ಹಾರ್ನೆಟ್ 2.0
ಪರಿಸರ ಸಂಬಂಧಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೋಂಡಾ ಕಂಪನಿಯು ತನ್ನ ಸ್ಕೂಟರ್ಗಳಿಗೆ ನಿರಂತರವಾಗಿ ಬದಲಾವಣೆ ತರಲುತ್ತಲೇ ಇದೆ. ಕಂಪನಿಯು ಆಕ್ಟಿವಾ ಸೇರಿದಂತೆ ಅದರ ಹಲವು ಮಾದರಿಗಳ ಸ್ಟೈಲಿಂಗ್ ಮತ್ತು ಗ್ರಾಫಿಕ್ಸ್ ಅನ್ನು ನವೀಕರಿಸಿದೆ, ಇದು ಈಗ ಹೊಸ TFT ಉಪಕರಣ ಕ್ಲಸ್ಟರ್ ಅನ್ನು ಅಳವಡಿಸಿದೆ. ಹೀಗಾಗಿ NX200 ಬೈಕ್ಗೆ ಹೊಸ ಸ್ಪರ್ಶ ನೀಡಿರುವ ಕಂಪನಿಯು CB200X ಅನ್ನು ಪರಿಚಯಿಸಿದೆ. ಎತ್ತರದ ಬೈಕ್ ಇದಾಗಿದ್ದು, ನೇರವಾಗಿ ಕುಳಿತುಕೊಳ್ಳುವ ವಿನ್ಯಾಸದೊಂದಿಗೆ ಲಭ್ಯ.
ಹೋಂಡಾ ಇಆಕ್ಟಿವಾ ಬಿಡುಗಡೆಯು ಸುದ್ದಿಯಲ್ಲಿತ್ತು ಮತ್ತು ನಾವು ಅದನ್ನು ಸವಾರಿ ಮಾಡಿದ ನಂತರ ಶೀಘ್ರದಲ್ಲೇ ಅದರ ವಿವರಗಳನ್ನು ಹಂಚಿಕೊಳ್ಳುತ್ತೇವೆ.

ಜಾವಾ ಯಜ್ಡಿ ಬಿಎಸ್ಎ
ರೆಟ್ರೊ ಕ್ಲಾಸಿಕ್ ಲುಕ್ನ ಮೋಟಾರ್ ಸೈಕಲ್ ಆಗಿರುವ ಜಾವಾ, ಸದ್ಯ ರಾಯಲ್ ಎನ್ಫೀಲ್ಡ್ನೊಂದಿಗೆ ನೇರ ಸ್ಪರ್ಧೆಯಲ್ಲಿದೆ. ಜಾವಾ ಮತ್ತು ಯೆಜ್ಡಿ ಬ್ರಾಂಡ್ಗಳ ಅಡಿಯಲ್ಲಿ, ವಿವಿಧ ವಿಭಾಗಗಳನ್ನು ಪೂರೈಸುವ ಹಲವಾರು ಮೋಟಾರ್ಸೈಕಲ್ಗಳಿವೆ. ಇವುಗಳಲ್ಲಿ ಸ್ಟ್ರೀಟ್ ಬೈಕ್, ಕ್ರೂಸರ್, ಅಡ್ವೆಂಚರ್ ಟೂರರ್, ಸ್ಕ್ರಾಂಬ್ಲರ್ ಮತ್ತು ಬಾಬರ್ ಒಳಗೊಂಡಿವೆ.
ಕಂಪನಿಯು ಇತ್ತೀಚೆಗೆ ಎರಡು ಕಾರಣಗಳಿಗಾಗಿ ಸುದ್ದಿಯಲ್ಲಿತ್ತು – ಮೊದಲನೆಯದು Jawa 350 ಲೆಗಸಿ ಆವೃತ್ತಿಯ ಬಿಡುಗಡೆಯಾಗಿದೆ, ಇದು ಸೀಮಿತ ಆವೃತ್ತಿಯ ಮೋಟಾರ್ಸೈಕಲ್ ಆಗಿದ್ದು, ಟೂರಿಂಗ್ ವಿಂಡ್ಶೀಲ್ಡ್, ಹಿಂಬದಿ ಸವಾರರಿಗೆ ಪಿಲಿಯನ್ ಬ್ಯಾಕ್ರೆಸ್ಟ್ ಮತ್ತು ಕ್ರ್ಯಾಶ್ ಗಾರ್ಡ್ನಂತಹ ಪರಿಕರಗಳನ್ನು ನೀಡುತ್ತಿದೆ. ಈ ಬೈಕ್ಗಳು 4-ವರ್ಷ ಅಥವಾ 50,000 ಕಿಮೀ ವಾರಂಟಿ ಹೊಂದಿದೆ.