ಔಡಿ ಕಾರುಗಳು ಇನ್ನುಮುಂದೆ ತುಸು ದುಬಾರಿ

ಔಡಿ ಆರ್‌ಎಸ್‌3

ಬೆಂಗಳೂರು: ಪ್ರಸಿದ್ಧ ಔಡಿ ಕಂಪನಿ  ಕಾರುಗಳ ಪ್ರಿಯರಿಗೆ ಇಲ್ಲೊಂದು ಕಹಿ ಸುದ್ದಿಯಿದೆ. ಔಡಿ ಜೂನ್‌ 1ರಿಂದ  ತನ್ನ ಕಾರುಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಹೌದು, ಉತ್ಪಾದನೆ ಮತ್ತು ಸಾಗಣೆ ವೆಚ್ಚ ಹೆಚ್ಚಳವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ.

2023–24ರಲ್ಲಿ ಭಾರತದಲ್ಲಿ ಕಂಪನಿಯ 7,207 ವಾಹನಗಳು ಮಾರಾಟವಾಗಿವೆ. ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಶೇ 33ರಷ್ಟು ಏರಿಕೆಯಾಗಿದೆ. ಕಂಪನಿಯು ದೇಶದಲ್ಲಿ ಎ4, ಕ್ಯು3, ಕ್ಯು5, ಆರ್‌ಎಸ್‌ ಕ್ಯು8 ಕಾರುಗಳನ್ನು ಮಾರಾಟ ಮಾಡುತ್ತದೆ.

ಆಡಿ ಕಂಪನಿ ಜರ್ಮನಿ ಮೂಲದ್ದಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ