ಭಾರತದಕ್ಕೆ ಬಂತು ಆಸ್ಟ್ರಿಯಾದ Brixton Cromwell 1200: ನಟ ಮಾದವನ್‌ ಖರೀದಿ

ಬ್ರಿಕ್ಸ್‌ಟನ್‌ ಕ್ರೋಮ್‌ವೆಲ್‌ 1200

ಆಸ್ಟ್ರಿಯಾದ ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ಬ್ರಿಕ್ಸ್‌ಟನ್‌ ಕಂಪನಿಯು ಭಾರತಕ್ಕೆ ಕಾಲಿಟ್ಟಿದ್ದು, ಕ್ರೋಮ್‌ವೇಲ್‌ 1200 ಎಂಬ ಶಕ್ತಿಶಾಲಿ ಬೈಕ್ ಅನ್ನು ಪರಿಚಯಿಸಿದೆ. 

ಈ ಬೈಕ್‌ನ ಮೊದಲ ಗ್ರಾಹಕರಾಗುವ ಮೂಲಕ ನಟ ಆರ್. ಮಾದವನ್ ಅವರು ಇತಿಹಾಸ ನಿರ್ಮಿಸಿದ್ದಾರೆ.

ನಿಖರ ಎಂಜಿನಿಯರಿಂಗ್‌ ಹಾಗೂ ರೆಟ್ರೊ ಮಾದರಿಯ ವಿನ್ಯಾಸದಿಂದಾಗಿ ಬ್ರಿಕ್ಸ್‌ಟನ್‌ ಮೋಟಾರ್‌ಸೈಕಲ್‌ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಮೊಟೊಹೊಸ್‌ ಎಂಬ ಕಂಪನಿಯ ಜತೆಗೂಡಿ ಭಾರತಕ್ಕೆ ಕಾಲಿಟ್ಟಿರುವ ಈ ಕಂಪನಿಯ ಶೋರೂಂಗಳು ಬೆಂಗಳೂರು, ಕೊಲ್ಹಾಪುರ, ಗೋವಾ, ಅಹಮದಾಬಾದ್‌ ಮತ್ತು ಸಾಂಗ್ಲಿಯಲ್ಲಿಯಲ್ಲಿವೆ. ಮುಂದಿನ ದಿನಗಳಲ್ಲಿ ಜೈಪುರ, ಮೈಸೂರು, ಕೋಲ್ಕತ್ತ, ಪುಣೆ ಹಾಗೂ ಮುಂಬೈಗಳಲ್ಲೂ ತೆರೆಯಲಿವೆ.

‘ಕ್ರೋಮ್‌ವೆಲ್‌ 1200 ಬೈಕ್‌ನ ಚಾಲನೆಗಿಂತ ಅದರ ಅನುಭವ ಹೆಚ್ಚು ಹಿತ ನೀಡಲಿದೆ. ರೆಟ್ರೊ ಮಾದರಿಯ ವಿನ್ಯಾಸ ಹಾಗೂ ಆಧುನಿಕ ಎಂಜಿನಿಯರಿಂಗ್ ಹೊಂದಿರುವ ಈ ಬೈಕ್‌, ನನ್ನ ವ್ಯಕ್ತಿತ್ವದ ಮುಂದುವರಿದ ಭಾಗವಾಗಿದೆ. ನನ್ನ ಪುತ್ರ ವೇದಾಂತ್‌ನ ಹೆಸರು ವಿಶೇಷ ಪೇಂಟ್‌ನಲ್ಲಿ ಇದರ ಮೇಲೆ ಮೂಡಿಸಿರುವುದು ನನಗೆ ಮತ್ತೊಂದು ವಿಶೇಷವಾಗಿದೆ. ಹೀಗಾಗಿ ಇದು ನನಗೆ ತೀರಾ ಆಪ್ತವಾಗಿದೆ’ ಎಂದು ಮಾದವನ್ ಹೇಳಿದ್ದಾರೆ.

ಬ್ರಿಕ್ಸ್‌ಟನ್ ಕ್ರೋಮ್‌ವೆಲ್‌ 1200 ಬೈಕ್‌ 83ಪಿಎಸ್‌ ಎಂಜಿನ್‌ ಹೊಂದಿದ್ದು 108 ನ್ಯೂಟನ್‌ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು. ಇದರಲ್ಲಿ ನಿಸ್ಸಾನ್ ಬ್ರೇಕ್ಸ್, ಬಾಷ್‌ ಎಬಿಎಸ್‌, ಕೆವೈಬಿ ಹೊಂದಿಸಬಹುದಾದ ಸಸ್ಪೆನ್ಶನ್‌ ಇದೆ. ಟ್ರ್ಯಾಕ್ಷನ್‌ ಕಂಟ್ರೋಲ್‌, ಕ್ರೂಸ್ ಕಂಟ್ರೋಲ್, ಆ್ಯಂಟಿ ಥೆಫ್ಟ್‌ ಕೀ, ಟಿಎಫ್‌ಟಿ ಡಿಸ್ಪ್ಲೇ, ಪಿರೆಲ್ಲಿ ಫ್ಯಾಂಟಮ್ ಟ್ಯೂಬ್‌ಲೆಸ್‌ ಟೈರ್‌ಗಳನ್ನು ನೀಡಲಾಗಿದೆ.

ಬ್ರಿಕ್ಸ್‌ಟನ್‌ ಬೈಕ್‌ 500 ಸಿಸಿಯಿಂದ 1200 ಸಿಸಿವರೆಗೂ ಲಭ್ಯ. ಬೈಕ್‌ನ ಎಕ್ಸ್‌ ಶೊರೂಂ ಬೆಲೆ ₹7.84 ಲಕ್ಷ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ