BMW 220i ಸ್ಪೋರ್ಟ್ ಶ್ಯಾಡೊ ಎಡಿಷನ್ ಕಾರಿನಲ್ಲಿ ಅಚ್ಚರಿಯ ಫೀಚರ್ಸ್‌

BMW ಸಾಂದರ್ಭಿಕ ಚಿತ್ರ

ಬಿಎಂಡಬ್ಲೂ ವಿಲಾಸಿ ಕಾರು ತಯಾರಿಕಾ ಕಂಪನಿಯು 220ಐ ಎಂ ಸ್ಪೋರ್ಟ್‌ ಶ್ಯಾಡೊ ಎಡಿಷನ್‌ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

2.0ಲೀ ಟರ್ಬೊ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಈ ಕಾರು 2 ಸಿರೀಸ್‌ನ ಗ್ರ್ಯಾನ್ ಕೂಪ್ ಮಾದರಿಯನ್ನು ಆಧರಿಸಿದೆ. ಹೀಗಾಗಿ ಈ ಕಾರಿಗೆ 220ಐ ಎಂ ಸ್ಪೋರ್ಟ್‌ ಶ್ಯಾಡೊ ಎಡಿಷನ್‌ ಎಂದು ಹೆಸರಿಡಲಾಗಿದೆ. ಇದರ ಎಕ್ಸ್ ಶೋರೂಂ ಬೆಲೆ ₹46.90 ಲಕ್ಷ.

ಬಿಎಂಡಬ್ಲೂ ಎಂದರೆ ವಿಲಾಸಿತನ ಅಲ್ಲಿ ಖಂಡಿತಾ. 220ಐ ಸ್ಪೋರ್ಟ್‌ ಶ್ಯಾಡೊ ಎಡಿಷನ್‌ನಲ್ಲಿ ಸಹಜವಾಗಿ ಕಿಡ್ನಿ ಗ್ರಿಲ್‌ ಇದ್ದು, ಇದು ಕಪ್ಪು ಬಣ್ಣದ್ದಾಗಿದೆ. ಜತೆಗೆ ಅಡಾಪ್ಟಿವ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ. ಹಿಂಬದಿಯಲ್ಲಿ ಕಪ್ಪು ಬಣ್ಣದ ಸ್ಪಾಯ್ಲರ್‌ ಮತ್ತು ಬಿಎಂಡಬ್ಲೂ ಫ್ಲೋಟಿಂಗ್ ಹಬ್‌ ಕ್ಯಾಪ್‌ಗಳನ್ನು ಈ ಕಾರಿಗೆ ನೀಡಲಾಗಿದೆ.

ಒಳಭಾಗದಲ್ಲಿ, ಸ್ಪೋರ್ಟ್‌ ಸೀಟ್‌ಗಳನ್ನು ಈ ಕಾರಿಗೆ ನೀಡಲಾಗಿದೆ. ಸೀಟುಗಳನ್ನು ಹೊಂದಿಸಲು ಮೆಮೊರಿ ಫಂಕ್ಷನ್‌ ಸೌಲಭ್ಯವೂ ಇದೆ. ಕಾರ್ಬನ್‌ ಗೇರ್‌ ಸೆಲೆಕ್ಟರ್‌, ಒಳಭಾಗದ ಬೆಳಕಿಗೆ ಹೊಂದಿಕೊಳ್ಳುವ ಲೈಟಿಂಗ್‌ ಹಾಗೂ ವಿಶೇಷವಾಗಿ ಹೊಳೆಯುವ ಬರ್ಲಿನ್ ಇಂಟೀರಿಯರ್‌ ಟ್ರಿಮ್‌ ಇದರಲ್ಲಿ ಅಳವಡಿಸಲಾಗಿದೆ.

12.3 ಇಂಚುಗಳ ದೊಡ್ಡದಾದ ಟಚ್‌ಸ್ಕ್ರೀನ್‌ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ 10.25 ಇಂಚಿನ ಟಚ್‌ಸ್ಕ್ರೀನ್‌ ಇನ್ಫೊಟೈನ್ಮೆಂಟ್‌ ಸಿಸ್ಟಂ ಅಳವಡಿಸಲಾಗಿದೆ. ಇವು ವೈರ್‌ಲೆಸ್‌ ಆ್ಯಪಲ್‌ ಕಾರ್‌ಪ್ಲೇ ಇದೆ. ಇದಕ್ಕೆ ಪಾರ್ಕಿಂಗ್ ನೆರವಾಗುವ ಹಿಂಬದಿಯ ಕ್ಯಾಮೆರಾ ಸಂಪರ್ಕವನ್ನೂ ನೀಡಲಾಗಿದೆ.

ಇನ್ನು ಕಾರಿನ ಸಾಮರ್ಥ್ಯದ ಬಂದಲ್ಲಿ ಬಿಎಂಡಬ್ಲೂ 220ಐ ಎಂ ಸ್ಪೋರ್ಟ್ ಶ್ಯಾಡೊ ಎಡಿಷನ್‌ 2.0 ಲೀಟರ್‌ನ 4 ಸಿಲಿಂಡರ್ ಹೊಂದಿರುವ ಟರ್ಬೊ–ಪೆಟ್ರೋಲ್ ಎಂಜಿನ್ ಹೊಂದಿದೆ. 5,100 ಆರ್‌ಪಿಎಂನಲ್ಲಿ 177 ಬಿಎಚ್‌ಪಿ (ಅಶ್ವಶಕ್ತಿ) ಉತ್ಪಾದಿಸಬಲ್ಲದು ಹಾಗೂ 1,350–4,600 ಆರ್‌ಪಿಎಂನಲ್ಲಿ 280 ಎನ್‌ಎಂ ಟಾರ್ಕ್ ಉತ್ಪಾದಿಸುವಷ್ಟು ಶಕ್ತಿಶಾಲಿಯದ್ದಾಗಿದೆ. ಈ ಎಂಜಿನ್‌ಗೆ 7 ಸ್ಪೀಡ್‌ ಡ್ಯುಯಲ್ ಕ್ಲಚ್‌ ಆ್ಯಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಸೌಕರ್ಯವಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ