ಬ್ಯಾಟರಿ ಚಾಲಿತ ಕಾರುಗಳ ತಯಾರಿಕೆಯಲ್ಲಿ ಸದ್ಯಕ್ಕೆ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಚೀನಾದ BYD ಕಂಪನಿಯು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ನಗರಕ್ಕಿಂತ ವಿಶಾಲವಾದ ತಯಾರಿಕಾ ಘಟಕವನ್ನು ಝೆಂಗ್ಝುನಲ್ಲಿ ಸ್ಥಾಪಿಸಿದೆ ಎಂಬ ಸುದ್ದಿ ಸದ್ಯ ವಾಹನ ಪ್ರಪಂಚದಲ್ಲಿ ವಿಶಾಲವಾಗಿ ಹಬ್ಬಿದೆ.
ಡೆನ್ವರ್ ವಿಮಾನ ನಿಲ್ದಾಣಕ್ಕಿಂತ ಕೊಂಚ ಚಿಕ್ಕದಿರುವ ಬಿವೈಡಿ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಬ್ಯಾಟರಿ ಚಾಲಿತ ಕಾರುಗಳ ಸಂಖ್ಯೆಗಿಂತ ಬೇಡಿಕೆಯೇ ಹೆಚ್ಚಾಗಿದೆಯಂತೆ. ಹೀಗಾಗಿ ಪೂರೈಕೆ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
ಝೆಂಗ್ಝುನಲ್ಲಿ ಘಟಕ ಸ್ಥಾಪಿಸಿದಾಗ ಅದೊಂದು ಕಾರ್ಖಾನೆಯನ್ನು ಹೋಲುತ್ತಿತ್ತು. 32 ಎಕರೆ ಜಾಗದಲ್ಲಿ ಸ್ಥಾಪಿಸಲಾಗಿತ್ತು. ನೆವಾಡಾದಲ್ಲಿರುವ ಟೆಸ್ಲಾದ ಗಿಗಾ ಫ್ಯಾಕ್ಟರಿಗಿಂತ ಹತ್ತು ಪಟ್ಟು ದೊಡ್ಡದಿದೆ.
ಇಲ್ಲಿ 60 ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. 2025ರ ಮೊದಲ ತ್ರೈಮಾಸಿಕದೊಳಗೆ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೇಮಕಕ್ಕೆ ಕಂಪನಿ ಯೋಜನೆ ರೂಪಿಸಿದೆ.
ಇದರ ನಡುವೆಯೇ ಅತ್ಯಾಧುನಿಕ ಹೊಸ ಮಾದರಿಯ ಬ್ಯಾಟರಿಯನ್ನು ಬಿವೈಡಿ ಅಭಿವೃದ್ಧಿಪಡಿಸಿದೆ. ಇದು 5 ನಿಮಿಷಗಳಲ್ಲೇ ಚಾರ್ಜ್ ಮಾಡಬಹುದಾಗಿದೆ. ಅಂದರೆ 400 ಕಿ.ಮೀ. ದೂರ ಸಾಗಲು ಬೇಕಿರುವ ಇಂಧನ ಭರಿಸಲು ತೆಗೆದುಕೊಳ್ಳುವ ಸಮಯದಲ್ಲೇ ಬ್ಯಾಟರಿ ಚಾರ್ಜ್ ಆಗುವಂಥ ತಂತ್ರಜ್ಞಾನ ಇದಾಗಿದೆ. ಇದು ಇವಿ ಕ್ಷೇತ್ರದಲ್ಲೇ ಮಹತ್ವದ ಬೆಳವಣಿಗೆಯಾಗಿದೆ.
ಸನ್ ಪತ್ರಿಕೆ ವರದಿಯ ಪ್ರಕಾರ ಟೆಸ್ಲಾ ನೆವಾಡಾದ ಗಿಗಾಫ್ಯಾಕ್ಟರಿ ಘಟಕದ ಹೊರಗೆ ತನ್ನ ಘಟಕ ಸ್ಥಾಪಿಸಿರುವ ಬಿವೈಡಿ 4.5 ಚದರ ಮೈಲಿಯಷ್ಟು ದೊಡ್ಡದಿದೆ. 32 ಸಾವಿರ ಎಕರೆ ಪ್ರದೇಶದಲ್ಲಿದೆ. ಘಟಕ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಇದು 46.9 ಚದರ ಮೈಲಿಯಷ್ಟು ವಿಶಾಲವಾಗಿರಲಿದೆ.
ಈ ನಿಟ್ಟಿನಲ್ಲಿ ಬಿವೈಡಿ ಕಂಪನಿಯು ಚೀನಾದಲ್ಲಿ 4 ಸಾವಿರ ಮೆಗಾ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದೆ.
ಆ ಮೂಲಕ ಬಿವೈಡಿ ಕಾರುಗಳು ಇವಿ ಕ್ಷೇತ್ರದಲ್ಲೇ ಹೊಸ ದಿಸೆಯತ್ತ ಸಾಗುತ್ತಿವೆ. ಚಾರ್ಜಿಂಗ್‌ಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಈವರೆಗೂ ಇರುವ ಗ್ರಾಹಕರ ಕೊರಗು. ಆದರೆ ಅದನ್ನೇ ನೀಗಿಸಲು ಬಿವೈಡಿ ಮುಂದಾಗಿ, ಯಶಸ್ಸು ಕಂಡಿದೆ. ಹೀಗಾಗಿ ಇವಿ ಕ್ಷೇತ್ರದ ಬೆಳವಣಿಗೆಯ ಜತೆಗೆ, ಬಿವೈಡಿ ಕಾರುಗಳ ಮಾರಾಟವೂ ಪ್ರಗತಿ ಕಾಣಲಿದೆಯೇ ಎಂಬ ಯಕ್ಷ ಪ್ರಶ್ನೆ ಎಲ್ಲರ ಮುಂದಿದೆ.
BYD ಕಾರ್ಖಾನೆಯ EV ಚಾರ್ಜಿಂಗ್ ಕ್ರಾಂತಿಯನ್ನು ನೀವು ಹೇಗೆ ನೋಡುತ್ತೀರಿ? ಕಾಮೆಂಟ್‌ನಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!
🚀 ಇತರ EV ತಂತ್ರಜ್ಞಾನ ಅಪ್‌ಡೇಟ್‌ಗಳಿಗಾಗಿ ನಮ್ಮ ವೆಬ್‌ಸೈಟ್ ವೀಕ್ಷಿಸಿ!