ಭಾರತದ ಬ್ರಿಟಷರಿಂದ ಸ್ವಾತಂತ್ರ್ಯ ಪಡೆದ ಕಾಲವದು. ನವಭಾರತ ಕಟ್ಟುವ ಸಂಕಲ್ಪ ತೊಟ್ಟಿದ್ದ ಅಂದ ನಾಯಕರು, ತಂತ್ರಜ್ಞಾನವೇ ಭಾರತದ ಭವಿಷ್ಯ ಎಂದು ಅರಿತಿದ್ದರು. ಅದರ ಪರಿಣಾಮವಾಗಿ ಹಲವು ಕೈಗಾರಿಕೆಗಳು ತಲೆ ಎತ್ತಿದವು.
ಆಗ ಯುರೋಪ್ ಮಾತ್ರವಲ್ಲ, ಭಾರತದಲ್ಲೂ ಕಾರು ತಯಾರಿಕೆ ಸಾಧ್ಯ ಎಂಬುದನ್ನು ಸವಾಲಿನಂತೆ ಹಲವು ಉದ್ಯಮಿಗಳು ಕೈಗೆತ್ತಿಕೊಂಡರು. ಅದರ ಫಲವಾಗಿಯೇ ಕೆಲ ಕಾರು ತಯಾರಿಕಾ ಕಂಪನಿಗಳು ಆರಂಭಗೊಂಡವು. ಯುರೋಪ್‌ನ ಕೈಗಾರಿಕಾ ಕ್ರಾಂತಿಯಂತೆಯೇ ಭಾರತದಲ್ಲೂ ಕೈಗಾರಿಕೆಗಳ ಆರಂಭಗೊಂಡವು.
ಅಂತವುಗಳಲ್ಲಿ ಹಿಂದುಸ್ಥಾನ್ ಮೋಟಾರ್ಸ್‌ನ ಅಂಬಾಸೆಡರ್ ಕೂಡಾ ಒಂದು. ಪ್ರತಿಷ್ಠೆಯ ವಾಹನವಾದ ಅಂಬಾಸೆಡರ್ ಹಲವು ವರ್ಷಗಳ ಕಾಲ ದೇಶವನ್ನು ಆಳಿದ್ದು ಸುಳ್ಳಲ್ಲ. ಇಂದಿಗೂ ಇದು ಅದೇ ಖದರ್ ಹೊಂದಿದೆ.
ಆ ಸಂದರ್ಭದಲ್ಲಿ ಕಾರು ತಯಾರಿಕೆ ಭಾರತದಲ್ಲಿ ಹೇಗೆ ನಡೆಯುತ್ತಿತ್ತು ಎಂಬುದನ್ನು ಅರಿಯುವ ಕುತೂಹಲ ನಮ್ಮೆಲ್ಲರಿಗೂ ಇರುವುದು ಸಹಜ. ಅದಕ್ಕೊಂದು ವಿಡಿಯೊ ಇಲ್ಲಿ ಹಂಚಿಕೊಳ್ಳುತ್ತಿದೆ ಕ್ರಾಸ್‌ರೋಡ್ಸ್