ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಆಗಸ್ಟ್ 31ರವರೆಗೆ ತನ್ನ ಗ್ರಾಹಕರಿಗೆ ಮಳೆಗಾಲದ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಭಾರತದಲ್ಲಿರುವ ನಿಸ್ಸಾನ್ ನ ಎಲ್ಲಾ ಅಧಿಕೃತ ವರ್ಕ್ ಶಾಪ್ ಗಳಲ್ಲಿ ಈ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಮಳೆಗಾಲದಲ್ಲಿ ನಿಸ್ಸಾನ್ ಗ್ರಾಹಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಉದ್ದೇಶ ಕಂಪನಿಗಿದೆ. ಉಚಿತ ಬ್ಯಾಟರಿ ತಪಾಸಣೆ, ಸಂಪೂರ್ಣ ಬಾಹ್ಯ ಮತ್ತು ಆಂತರಿಕ ತಪಾಸಣೆ, ಕೆಳಭಾಗದ ತಪಾಸಣೆ ಮತ್ತು ರೋಡ್ ಟೆಸ್ಟ್ ಸೇರಿದಂತೆ 30-ಪಾಯಿಂಟ್ ಚೆಕ್ಅಪ್ ಅನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ. ಜೊತೆಗೆ ವಿಶೇಷವಾಗಿ ಉಚಿತ ಟಾಪ್ ವಾಶ್ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಭಾಗವಾಗಿ ಬ್ರೇಕ್ ಪ್ಯಾಡ್ ಬದಲಾವಣೆ ಸೇರಿದಂತೆ ಲೇಬರ್ ಶುಲ್ಕಗಳ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಂಡರ್ ಬಾಡಿ ಕೋಟಿಂಗ್, ರೊಡೆಂಟ್ ರಿಪೆಲ್ಲೆಂಟ್, ಎ.ಸಿ. ಡಿಸ್‌ಇನ್ಫೆಕ್ಷನ್ ಇತ್ಯಾದಿಗಳಂತಹ ವಿಎಎಸ್ ಸರ್ವೀಸ್‌ಗಳ ಮೇಲೆಯೂ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ನಿಸ್ಸಾನ್ ಒನ್ ಆಪ್ ಅಥವಾ ನಿಸ್ಸಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಗ್ರಾಹಕರು ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು. ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ, ‘ಗ್ರಾಹಕರು ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮಾಡುವುದೇ ಈ ನಮ್ಮ ಉಚಿತ ತಪಾಸಣಾ ಶಿಬಿರದ ಉದ್ದೇಶವಾಗಿದೆ. ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು‘ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ- www.nissan.in