ಭಾರತದ ರಸ್ತೆಗಿಳಿದು ಗರ್ಜಿಸುತ್ತಿದೆ Ducati ಸ್ಟ್ರೀಟ್‌ಫೈಟರ್‌ V4 ಸುಪ್ರೀಂ ಬೈಕ್

ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಸುಪ್ರೀಂ

ಮೋಟಾರ್‌ ಬೈಕ್‌ ಹಾಗೂ ರೇಸ್‌ನ ಅಕ್ಸೆಸರೀಸ್‌ ವಿನ್ಯಾಸದ ಅಮೆರಿಕದ ಪ್ರಮುಖ ಬ್ರಾಂಡ್ ಡ್ರೂಡಿ ಪರ್ಫಾರ್ಮೆನ್ಸ್ ಕಂಪನಿಯೊಂದಿಗೆ ಜತೆಗೂಡಿ ಡುಕಾಟಿ ಮೋಟಾರ್‌ ಬೈಕ್ ಉತ್ಪಾದನಾ ಕಂಪನಿಯು ಸ್ಟ್ರೀಟ್‌ಫೈಟರ್‌ ವಿ4 ಸುಪ್ರೀಂ ಬೈಕ್ ಅನ್ನು ಭಾರತದಲ್ಲಿ ಪರಿಚಯಿಸಿದೆ.

ಆದರೆ ಈ ಬೈಕ್‌ನ ಬೆಲೆ ಎಷ್ಟು ಎಂಬುದನ್ನು ಈವರೆಗೂ ಡುಕಾಟಿ ಬಹಿರಂಗಪಡಿಸಿಲ್ಲ. ಆದರೆ ಭಾರತದಲ್ಲಿ ಬಹುಷಃ ಈ ಬಯಕ್‌ನ ಬೆಲೆ ₹25 ಲಕ್ಷದ ಆಸುಪಾಸಿನಲ್ಲಿರಲಿದೆ. ಅಂದರೆ ಸ್ಟಾಂಡರ್ಡ್‌ ಸ್ಟ್ರೀಟ್‌ಫೈಟರ್‌ ಬೆಲೆಗಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಡುಕಾಟಿ ಸ್ಟ್ರೀಟ್‌ಫೈಟರ್‌ ವಿ4 ಸುಪ್ರೀಂ ಬೈಕ್ ಕೆಂಪು ಹಾಗೂ ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಬಿಳಿ ಬಣ್ಣದ ಅಲಾಯ್ ವೀಲ್‌ ಹಾಗು ಅದರಲ್ಲಿ ಸುಪ್ರಿಂ ಲೊಗೊ ಇದೆ. ಕೆಂಪು ಬಣ್ಣದ ಬ್ರೇಕ್‌ ಕ್ಯಾಲಿಪರ್ಸ್‌ ಮತ್ತು ಹೊಸತು ಎನ್ನಿಸುವ ಗ್ರಾಫಿಕ್ಸ್ ವಿನ್ಯಾಸ ಮೊದಲ ನೋಟದಲ್ಲೇ ಈ ಬೈಕ್‌ಗೆ ಮನಸೋಲುತ್ತದೆ. ಈ ವಿನ್ಯಾಸವನ್ನು ಆಲ್ಡೊ ಡ್ರೂಡಿ ಮಾಡಿದೆ.

ಈ ಸುಪ್ರೀಂ ಆವೃತ್ತಿಯ ಬೈಕ್‌ 1,103 ಸಿಸಿ ಎಂಜಿನ್ ಹೊಂದಿದೆ. Desmosedici Stradale V4 ಎಂಜಿನ್‌ ಹೊಂದಿದೆ. 208 ಅಶ್ವಶಕ್ತಿ ಹಾಗೂ 123 ಎನ್‌ಎಂ ಟಾರ್ಕ್‌ ಅನ್ನು ಇದು ಉತ್ಪಾದಿಸಬಲ್ಲದು ಎಂದರೆ ಇದರ ಶಕ್ತಿಯನ್ನು ಊಹಿಸಬಹುದು. ಆರು ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಬೈಕ್‌ಗೆ 43 ಮಿ.ಮೀ. ಓಲಿನ್ಸ್‌ ಯುಎಸ್‌ಡಿ ಫೋರ್ಕ್‌, ಹಿಂಬದಿಯಲ್ಲಿ ಮೊನೊಶಾಕ್‌ ಇದ್ದು, ಬ್ರೆಂಬೊ ಬ್ರೇಕ್ಸ್‌ ಅಳವಡಿಸಲಾಗಿದೆ.

ಈ ಬೈಕ್ ಬುಕ್‌ ಮಾಡಿದವರ ಮನೆಬಾಗಿಲಿಗೆ ಮರದ ಪೆಟ್ಟಿಗೆಯಲ್ಲಿ ರವಾನಿಸಲು ಕಂಪನಿ ಸಜ್ಜಾಗಿದೆ. ಬೈಕ್‌ನೊಂದಿಗೆ ಅದರ ಹೊದಿಕೆ, ಆಕ್ಸಸರಿ ಕಿಟ್‌ ಹಾಗೂ ಖಾತ್ರಿಯೆ ಪ್ರಮಾಣಪತ್ರವನ್ನೂ ಕಂಪನಿ ಕಳುಹಿಸಲಿದೆ ಎಂದು ಬೈಕ್‌ವಾಲೆ ವರದಿ ಮಾಡಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ