Ferrari ಕಾರುಗಳ ಮಳಿಗೆ ಬೆಂಗಳೂರಿನಲ್ಲಿ; ಶೋರೂಂನಲ್ಲಿ ಏನೇನಿದೆ ಇಲ್ಲಿದೆ ಮಾಹಿತಿ

Ferrari Showroon in Bengaluru

ಕೊನೆಗೂ ಬೆಂಗಳೂರಿಗೆ ಫೆರಾರಿ ಕಾರು ಪ್ರಪಂಚ ಬಂದಿಳಿದಿದೆ. ದೆಹಲಿಯ ಸೆಲೆಕ್ಟ್‌ ಕಾರ್ಸ್‌ ಎಂಬ ಡೀಲರ್‌ ಬೆಂಗಳೂರಿನಲ್ಲಿ ತಮ್ಮ ಮಳಿಗೆ ಆರಂಭಿಸಿದ್ದಾರೆ. ಈ ಫೆರಾರಿ ಮಳಿಗೆಯ ಒಂದು ಸುತ್ತು ಹಾಕಿ ಬಂದರೆ ಅದರ ಅನುಭವವೇ ಬೇರೆಯಾಗಿರುತ್ತದೆ.

ಗಾಢ ಕೆಂಪು ಬಣ್ಣದ ಕಾರ್ಪೆಟ್‌, ಬೃಹತ್ ಗಾಜಿನ ಗೋಡೆಯುಳ್ಳ ಬಹುಮಹಡಿ ಕಟ್ಟಡವಿದೆ. ಕಿತ್ತಳೆ ಬಣ್ಣದ ಫೆರಾರಿ ಅಟೆಲೀರ್‌ ಎಸ್‌ಎಫ್‌90 ಮತ್ತು ಬ್ಲು ಎಲೆಕ್ಟ್ರಿಕೊ 296 ಜಿಟಿಬಿ ಎಂಬ ಇಬ್ಬರು ಸುಂದರಿಯರು ನಿಮ್ಮನ್ನು ಸ್ವಾಗತಿಸುತ್ತಾರೆ. ಹಾಗೇ ಮುಂದೆ ಸಾಗುತ್ತಾ ಹೋದಲ್ಲಿ 296ಜಿಟಿಬಿ ಮತ್ತು ಹೊಚ್ಚಹೊಸ ರೊಮಾ ಸ್ಪೈಡರ್‌ ಎರಡೂ ಎದುರುಬದರಾಗಿ ದರ್ಶನ ನೀಡಲಿವೆ.

ಈ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಯಾದವ್ ಕಪೂರ್‌ ಮತ್ತು ಫೆರಾರಿ ಫಾರ್‌ ಈಸ್ಟ್‌ ಅಂಡ್‌ ಮಿಡ್ಲ್‌ ಈಸ್ಟ್‌ನ ಅಧ್ಯಕ್ಷ ಫ್ರಾನ್ಸೆಸ್ಕೊ ಬಿಯಾಂಚಿ ಈ ಮಳಿಗೆಯ ಉದ್ಘಾಟನೆಗೆ ಬಂದಿದ್ದರು. ಬೆಂಗಳೂರು ಮಳಿಗೆಯ ಕಾರ್ಯನಿರ್ವಹಣೆಯ ಮುಖ್ಯಸ್ಥ ತುಷಾರ್ ಆನಂದ್ ಕೂಡಾ ಜತೆಯಾದರು.

20 ಇಂಚಿನ ರೇಸಿಂಗ್‌ ವೀಲ್ ಕ್ಯಾಪ್‌ ಮಳಿಗೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು. ಕಾರಿಗಿಂತ ಮನೆಯ ಅಂದಕ್ಕೇ ಇವು ಹೆಚ್ಚು ಆಪ್ತವಾಗಿ ಕಂಡರೆ ಆಶ್ಚರ್ಯವಿಲ್ಲ.

ಮೊದಲ ಮಹಡಿಯಲ್ಲಿ ಫೆರಾರಿ 488ಜಿಟಿಬಿ, ಎಫ್‌8 ಟ್ರಿಬ್ಯು ಮತ್ತು ಜಿಟಿಸಿ4 ಲುಸೊ ಟಿ ನೋಡಸಿಗುತ್ತದೆ. 488 ಪಕ್ಕದಲ್ಲೇ ಹೊಚ್ಚಹೊಸ ಎಫ್‌8 ನೋಡಬಹುದು. ಇನ್ನೂ ಒಳಹೊಕ್ಕದರೆ ಟಿಡಿಎಫ್‌ ನೀಲಿ ಬಣ್ಣದ ಜಿಟಿಸಿ4 ಲುಸ್ಸೊ ಟಿ ಕಾಣಸಿಗಲಿದೆ. ಇದರಲ್ಲಿ ವಿ8 ಎಂಜಿನ್‌ ಇದೆ.

ಸರ್ವೀಸ್‌ ವಿಭಾಗವೂ ಶೊರೂಂನಂತೆಯೇ ಕಾಣಸಿಗಲಿದೆ. ಫೆರಾರಿಯ ಈ ಹೊಸ ಮಳಿಗೆ ನೋಡಬೇಕೆಂದರೆ ಹೊಸೂರು ರಸ್ತೆಯ ಮೀನಕುಂಟೆಯಲ್ಲಿರುವ ಐಟಿಸಿ ಫ್ಯಾಕ್ಟರಿ ಪ್ರದೇಶಕ್ಕೆ ಭೇಟಿ ನೀಡಬೇಕು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ