Hero ಸೆಂಟಿನ್ನಿಯಲ್ ಎಡಿಷನ್‌ ಬೈಕ್ ಹರಾಜು: 100 ಬೈಕ್‌ಗಳು ಮಾತ್ರ ಲಭ್ಯ

ಹೀರೊ ಸೆಂಟೆನಿಯಲ್ ಎಡಿಷನ್‌ ಬೈಕ್‌

ಹೀರೊ ಮೊಟೊಕಾರ್ಪ್ ಕಂಪನಿಯ ಹೀರೊ ವರ್ಲ್ಡ್‌ 2024 ಈ ವರ್ಷ ಸೆಂಟೆನ್ನಿಯಲ್ ಎಡಿಷನ್‌ ಬಿಡುಗಡೆ ಮಾಡಿದೆ. ಡಾ, ಬಿರ್ಜ್‌ಮೋಹನ್ ಲಾಲ್‌ ಮುಂಜಾಲ್ ಅವರ 101ನೇ ಜನ್ಮವರ್ಷಾಚರಣೆಯ ಭಾಗವಾಗಿ ಕರೀಝ್ಮಾ ಎಕ್ಸ್ಎಂಆರ್‌ 210ಸಿಸಿ ಬೈಕ್‌ನ ವಿಶೇಷ ಎಡಿಷನ್‌ ಅನ್ನು ಹಿರೊ ಬಿಡುಗಡೆ ಮಾಡಿದೆ. ಕೇವಲ 100 ವಿಶೇಷ ಬೈಕ್‌ಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಆದರೆ ಇದನ್ನು ಹರಾಜು ಮೂಲಕ ಪಡೆಯುವ ಹಕ್ಕನ್ನು ಕಂಪನಿಯ ನೌಕರರು, ಪಾಲುದಾರರು, ವ್ಯಾವಹಾರಿಕ ಪಾಲುದಾರರು ಮತ್ತು ಸ್ಟೇಕ್‌ ಹೋಲ್ಡರ್ಸ್‌ಗಳಿಗೆ ಮಾತ್ರ ಮೀಸಲಿಟ್ಟಿದೆ.

ಸ್ಪೋರ್ಟಿ, ದೊಡ್ಡ ಟ್ಯಾಂಕ್ ಹೊಂದಿರುವ ಸೆಮಿ ಫೈರ್ಡ್‌ ಡಿಸೈನ್‌ ಬೈಕ್ ಇದಾಗಿದೆ. ಗ್ರೇ ಮತ್ತು ಕಪ್ಪು ಬಣ್ಣದ ಡ್ಯುಯಲ್ ಟೋನ್‌ ಕಲರ್ ಸ್ಕೀಂ ಇದರದ್ದಾಗಿದೆ. ಕಾರ್ಬನ್‌ ಫೈಬರ್ ವಸ್ತುಗಳು ಇದರಲ್ಲಿವೆ. ಮೆಟ್ಯಾಲಿಕ್‌ ರೆಡ್‌ನ ಸ್ಟಿಕರ್‌ ಅಂಟಿಸಲಾಗಿದೆ. ಮುಂಭಾಗದ ಫೋರ್ಕ್‌ಗೂ ಉತ್ತಮ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

210ಸಿಸಿ ಬೈಕ್‌, ಸಿಂಗಲ್ ಸಿಲಿಂಡರ್‌, ಲಿಕ್ವಿಡ್ ಕೂಲ್ಡ್ ಎಂಜಿನ್‌ ಇದರದ್ದು. ಆರು ಸ್ಪೀಡ್‌ ಗೇರ್ ಬಾಕ್ಸ್‌ ಇದರದ್ದಾಗಿದ್ದು, ಸ್ಲಿಪ್ಪರ್ ಕ್ಲಚ್ ಹೊಂದಿದೆ. ಮುಂಭಾಗದಲ್ಲಿ ಅಪ್‌ಸೈಡ್ ಡೌನ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊಶಾರ್ಕ್‌ ಇದು ಹೊಂದಿದೆ. ಎರಡು ಚಕ್ರಗಳಿಗೂ ಡಿಸ್ಕ್ ಬ್ರೇಕ್‌ ಹೊಂದಿದೆ. ಅಕ್ರಾಪೊವಿಕ್ ಎಕ್ಸಾಸ್ಟ್‌ ಹೊಂದಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ