ಭಾರತದ ಸ್ಕೂಟರ್ ಬಳಕೆದಾರರಿಗೆ ಹೊಂಡಾ ಕಂಪನಿಯು ಹೊಸತಾದ ಸ್ಟೈಲೊ 160 ಎಂಬ ಸ್ಕೂಟರ್ ಅನ್ನು ಪರಿಚಯಿಸಲು ಹೊರಟಿದೆ.
ಈ ಸ್ಕೂಟರ್ ರಸ್ತೆಗಿಳಿಯುವುದು ಖಚಿತವಾದಲ್ಲಿ ಯಮಹಾ ಆ್ಯರೊಕ್ಸ್ 155 ಮತ್ತು ಹೀರೊ ಝೂಮ್ 160ಗೆ ಪೈಪೋಟಿ ನೀಡಲಿದೆ ಎಂದೇ ವಾಹನ ಪ್ರಪಂಚದಲ್ಲಿ ಹೇಳಲಾಗುತ್ತಿದೆ. ಹೊಂಡಾ ಸ್ಟೈಲೊ 160 ಸದ್ಯ ಇಂಡೊನೇಷ್ಯಾದಲ್ಲಿ ಲಭ್ಯವಿದೆ. ಹಲವು ಹೊಸತುಗಳು ಹಾಗೂ ಗುಣಮಟ್ಟದಲ್ಲೂ ಒಂದು ಹಂತ ಮೇಲಿರುವ ಸ್ಟೈಲೊ, ಆ್ಯಕ್ಟಿವಾಗಿಂತಲೂ ಪ್ರೀಮಿಯಂ ಎಂದೆನ್ನಲಾಗಿದೆ.
ನಿಯೊ–ರೆಟ್ರೊ ಮಾದರಿಯಲ್ಲಿರುವ ಸ್ಟೈಲೊ ವೃತ್ತಾಕಾರದ ಹೆಡ್‌ಲ್ಯಾಂಪ್ ಹೊಂದಿದೆ. ದುಂಡಗಿನ ಮಿರರ್‌ಗಳು ಹಾಗೂ ಸಿಂಗಲ್ ಪೀಸ್ ಸೀಟ್ ಹೊಂದಿದೆ. ಅದರ ಇಕ್ಕೆಲಗಳಲ್ಲಿರುವ ವಾಹನದ ಕವಚವೂ ಅಷ್ಟೇ ಸುಂದರವಾಗಿ ಮೂಡಿಬಂದಿದೆ. ಇದರೊಂದಿಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಕೀಲೆಸ್ ಇಗ್ನೀಷನ್ ಸೌಕರ್ಯ ಇದಕ್ಕಿದೆ.
156.9 ಸಿಸಿ ಸಿಂಗಲ್ ಲಿಕ್ವಿಡ್ ಕೂಲ್ಡ್ ಎಂಜಿನ್ ಇದು. 8500 ಆರ್‌ಪಿಎಂನಲ್ಲಿ 15 ಅಶ್ವಶಕ್ತಿ ಉತ್ಪಾದಿಸಬಲ್ಲದು. 7000 ಆರ್‌ಪಿಎಂನಲ್ಲಿ 13.8 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು. ಸ್ಟೈಲೊ 160 ಸ್ಕೂಟರ್‌ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಇದೆ. ಹಿಂಭಾಗದಲ್ಲಿ ಒಂದು ಶಾಕ್ ಅಬ್ಸಾರ್ಬರ್ ಹೊಂದಿದೆ. 12 ಇಂಚಿನ ಅಲಾಯ್ ವೀಲ್ ಹಾಗೂ ಅದಕ್ಕೆ ಡಿಸ್ಕ್ ಬ್ರೇಕ್ ಮತ್ತು ಡುಯಲ್ ಚಾನಲ್ ಎಬಿಎಸ್ ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.