2026ಕ್ಕೆ ಹೈಬ್ರಿಡ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲಿರುವ ಹ್ಯುಂಡೈ

ಹ್ಯುಂಡೈ

ಸಿಯೋಲ್‌: ಬ್ಯಾಟರಿ ಚಾಲಿತ ಕಾರುಗಳನ್ನು ಹೊರತುಪಡಿಸಿ, ಹೈಬ್ರಿಡ್ ಕಾರುಗಳತ್ತ ತನ್ನ ಚಿತ್ತ ನೆಟ್ಟಿರುವ ಹ್ಯುಂಡೈ ಮೋಟಾರ್ ಸಮೂಹವು, 2026ರ ಹೊತ್ತಿಗೆ ತನ್ನ ಪ್ರಮುಖ ಮಾರುಕಟ್ಟೆಯಾದ ಭಾರತದಲ್ಲಿ ಹೈಬ್ರಿಡ್ ಕಾರುಗಳನ್ನು ಪರಿಚಯಿಸುವ ಯೋಜನೆ ರೂಪಿಸಿದೆ.

ಹ್ಯುಂಡೈ ಮೋಟಾರ್ ಮತ್ತು ಕಿಯಾ ಕಾರ್ಪೊರೇಷನ್‌ ಸಮೂಹವು ತಮ್ಮ ಕ್ರೇಟಾ ಮಾದರಿಯ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಹೈಬ್ರಿಡ್ ಕಾರುಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎರಡೂ ಕಂಪನಿಗಳು ಚಿಂತನೆ ನಡೆಸಿವೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಇದು ಸಾಧ್ಯವಾಗಿದ್ದೇ ಆದಲ್ಲಿ, 2026 ಅಥವಾ 2027ಕ್ಕೆ ಹೈಬ್ರಿಡ್ ಕಾರುಗಳನ್ನು ಈ ಎರಡು ಕಾರು ತಯಾರಿಕಾ ಕಂಪನಿಗಳು ಅಭಿವೃದ್ಧಿಪಡಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸಲಿವೆ. ಎರಡೂ ಕಂಪನಿಗಳು ತಮ್ಮದೇ ಆದ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುವುದರ ಜತೆಗೆ, ಆ ನಿಟ್ಟಿನಲ್ಲಿ ನಮ್ಮ ಯೋಜನೆ ರೂಪಿಸುವ ಕಡೆ ಗಮನ ಹರಿಸುತ್ತಿದ್ದೇವೆ ಎಂದಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಆರಂಭದಲ್ಲಿ ಕೇವಲ ವಿದ್ಯುತ್ ಚಾಲಿತ ಕಾರುಗಳತ್ತ ಗಮನ ಹರಿಸಿದ್ದ ಹ್ಯುಂಡೈ, ಇದೀಗ ಪೆಟ್ರೋಲ್ ಅನ್ನು ಪವರ್‌ ಟ್ರೈನ್ ಆಗಿ ಬಳಸುವುದು ಹಾಗೂ ಅದಕ್ಕೆ ಪೂರಕವಾಗಿ ವಿದ್ಯುತ್ ಮೋಟಾರ್ ಬಳಸುವ ಯೋಜನೆ ರೂಪಿಸಿದೆ. ಸದ್ಯಕ್ಕೆ ಇದು ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ತಂತ್ರಜ್ಞಾನ. ಹೀಗಾಗಿ ಈ ನಿಟ್ಟಿನಲ್ಲಿ ಅದೇ ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಹ್ಯುಂಡೈ ನಿರ್ಧರಿಸಿದೆ.

ಹ್ಯುಂಡೈ ಮತ್ತು ಕಿಯಾ ಬಳಿ ಸದ್ಯ ಪೆಟ್ರೋಲ್, ಡೀಸೆಲ್ ಮಾದರಿಯ ಕಾರುಗಳ ಜತೆಗೆ, ಆಮದು ಮಾಡಿಕೊಂಡ ಇವಿ IONIQ 5 ಮತ್ತು EV6 ಕಾರುಗಳಿವೆ. 2025ರ ಹೊತ್ತಿಗೆ ವಿಶ್ವದ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾದ ಇವಿ ಕ್ಷೇತ್ರದಲ್ಲಿ ಭಾರತದಲ್ಲಿ ತಯಾರಾದ ಮೊದಲ ಇವಿಯನ್ನು ಇವು ಪರಿಚಯಿಸಲಿವೆ.

ಹ್ಯುಂಡೈ ಕಂಪನಿಯು ಇತರ ಮಾರುಕಟ್ಟೆಯಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಈಗಾಗಲೇ ಹೊಂದಿದೆ. ತನ್ನ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಭಾರತದಲ್ಲಿ ಪರಿಚಯಿಸುವ ಯೋಜನೆಯನ್ನು ಈ ಎರಡೂ ಕಂಪನಿಗಳು ಹೊಂದಿವೆ. ಇದಕ್ಕೆ ಹೈಬ್ರಿಡ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಯೋಜನೆ ಹೊಂದಿದೆ.

ಆದರೆ ಹೆಚ್ಚಿನ ಬೆಲೆಗಳು ಮತ್ತು ಅಸಮರ್ಪಕ ಚಾರ್ಜಿಂಗ್ ಮೂಲಸೌಕರ್ಯಗಳಿಂದಾಗಿ EV ಮಾರಾಟವು ನಿಧಾನವಾಗಿದೆ, ಕಂಪನಿಯು “ಮಧ್ಯಂತರ ತಂತ್ರ” ವಾಗಿ ಹೈಬ್ರಿಡ್‌ಗಳತ್ತ ತಿರುಗಲು ಉತ್ತೇಜಿಸುತ್ತದೆ ಎಂದು ಮೂಲವೊಂದು ತಿಳಿಸಿದೆ.

“Hyundai ಇತರ ಮಾರುಕಟ್ಟೆಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ. ಇದು ಈಗ ಭಾರತದಲ್ಲಿನ ಕಾರುಗಳನ್ನು ಮುಖ್ಯವಾಹಿನಿಗೆ ತರಲು ಆ ತಂತ್ರಜ್ಞಾನವನ್ನು ಟೈಲರಿಂಗ್ ಮಾಡಲು ಪ್ರಾರಂಭಿಸಿದೆ,” ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ ಮತ್ತು ಮಿಶ್ರತಳಿಗಳ ಸ್ವೀಕಾರವು ಬದಲಾವಣೆಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

2023 ರಲ್ಲಿ ಭಾರತದಲ್ಲಿ ಒಟ್ಟು ಕಾರು ಮಾರಾಟವು 40 ಲಕ್ಷ ತಲುಪಿದೆ. ಇದರಲ್ಲಿ ಇವಿಗಳ ಪ್ರಮಾಣ ಶೇ 2ಕ್ಕಿಂತ ಹೆಚ್ಚು. ಇದರಲ್ಲಿ ಟೊಯೊಟಾ ಮೋಟಾರ್ ನೇತೃತ್ವದ ಹೈಬ್ರಿಡ್‌ಗಳು ಶೇ 2ರಷ್ಟು ಪಾಲನ್ನು ಹೊಂದಿದೆ. ಭಾರತದಲ್ಲಿ ತನ್ನ ವಹಿವಾಟನ್ನು ದ್ವಿಗುಣಗೊಳಿಸಲು ಹ್ಯುಂಡೈ ಯೋಜನೆ ಹೊಂದಿದೆ. ಐಪಿಒ ಮೂಲಕ 3 ಶತಕೋಟಿ ಅಮೆರಿಕನ್ ಡಾಲರ್‌ ಯೋಜನೆ ಹೊಂದಿದೆ. ಚೀನಾದಲ್ಲಿನ ನಷ್ಟದಿಂದಾಗಿ ಅಲ್ಲಿ ನಷ್ಟ ಅನುಭವಿಸಿದೆ. ಜತೆಗೆ ರಷ್ಯಾದಲ್ಲಿನ ಎರಡು ಘಟಕಗಳನ್ನೂ ಮಾರಾಟ ಮಾಡಿದೆ.

ದಕ್ಷಿಣ ಕೊರಿಯಾ ಮತ್ತು ಅಮೆರಿಕ ನಂತರ ಹ್ಯುಂಡೈನ ಮೂರನೇ ಅತಿ ದೊಡ್ಡ ಮಾರುಕಟ್ಟೆ ಅದು ಭಾರತ. ಹೀಗಾಗಿ ಸದ್ಯ ಭಾರತದ ಬೇಡಿಕೆಗಳಿಗೆ ಅನುಗುಣವಾಗಿ ಕಾರುಗಳ ಉತ್ಪಾದನೆಯತ್ತ ಕಂಪನಿ ತನ್ನ ಚಿತ್ತ ನೆಟ್ಟಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ