ಬ್ಯಾಟರಿ ಚಾಲಿತ ಹಾರುವ ಕಾರು ಅಭಿವೃದ್ಧಿಪಡಿಸುವ ಯೋಜನೆಗೆ ಮದ್ರಾಸ್ ಐಐಟಿ ಕೈಹಾಕಿದೆ.
ಈ ಕಾರಿನ ಕಾಲ್ಪನಿಕ ಮಾದರಿಯನ್ನು ಉದ್ಯಮಿ ಆನಂದ ಮಹೀಂದ್ರಾ ಅವರು ತಮ್ಮ ಎಕ್ಸ್ ತಾಣದಲ್ಲಿ ಹಂಚಿಕೊಂಡು ಮದ್ರಾಸ್ ಐಐಟಿಯನ್ನು ಅಭಿನಂದಿಸಿದ್ದಾರೆ.
ಜಗತ್ತಿನ ಅತ್ಯಂತ ಕ್ರಿಯಾಶೀಲ ಹಾಗೂ ಅದ್ಭುತವೆನಿಸುವ ಇನ್ಕ್ಯುಬೇಟರ್ ಆಗಿ ಮದ್ರಾಸ್ ಐಐಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅವರಿಗೆ ಧನ್ಯವಾದಗಳು. ಏಕೆಂದರೆ, ಇವರು ದೇಶದ ಬೇರೆ ಬೇರೆ ಇನ್ಕ್ಯುಬೇಟರ್, ಸ್ಟಾರ್ಟ್‌ಅಪ್‌ಗಳಿಗೆ ಮಾದರಿಯಾಗುತ್ತಿದ್ದಾರೆ. ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.
ನಮಗೆ ದೊಡ್ಡದಾದ ಗುರಿಗಳೇ ಮುಖ್ಯ ಎಂದು ಆನಂದ್ ಅವರು, ಈ ಎಲೆಕ್ಟ್ರಿಕ್ ಕಾರಿನ ಗುಣಲಕ್ಷಣಗಳ ಮತ್ತೊಂದು ಫೋಟೊವನ್ನೂ ಹಂಚಿಕೊಂಡಿದ್ದಾರೆ.
ಅದರ ಪ್ರಕಾರ ಈ ಎಲೆಕ್ಟ್ರಿಕ್ ಕಾರು, 5.5 ಮೀಟರ್ ಸುತ್ತಳತೆ ಹೊಂದಿರುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 200 ಕಿ. ಮೀ. ದೂರ ಪ್ರಯಾಣಿಸಬಹುದು. ವರ್ಟಿಕಲ್ ಆಗಿಯೂ ಟೇಕ್ ಆಫ್ ಆಗುತ್ತ