‘ಜಿಯೊ ಇ–ಬೈಸಿಕಲ್ಗಳನ್ನು ಪರಿಚಯಿಸುತ್ತಿದೆ. ಇದರ ಬೆಲೆ ಎಷ್ಟು’ ಎಂಬುದು ಇತ್ತೀಚಿನ ಅತಿ ಹೆಚ್ಚು ಹುಡುಕಾಟ ನಡಸಿದ ಪ್ರಶ್ನೆ.
ಸೂಜಿಯಿಂದ ಏರ್ಪ್ಲೇನ್ವರೆಗೂ ಉತ್ಪಾದಿಸುವ ಕಂಪನಿ ಎಂಬ ಮಾತುಗಳು ಟಾಟಾ ಕಂಪನಿ ಕುರಿತು ಕೇಳಿಬರುತ್ತಿತ್ತು. ಇದೀಗ ಜಿಯೊ ಕೂಡಾ ಅದೇ ಹಾದಿಯಲ್ಲಿ ಸಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯ ಹೊಂದಿರುವ, ಎಲ್ಲರ ಕೈಗೆಟಕುವ ಬೈಸಿಕಲ್ ಅನ್ನು ಜಿಯೊ ಪರಿಚಯಿಸಲಿದೆ ಎಂಬ ಸುದ್ದಿ ದಟ್ಟವಾಗಿದೆ. ಇದನ್ನು ಜಿಯೊ ಸೂಪರ್ ಮಾರುಕಟ್ಟೆಯಲ್ಲಿ ಮಾರಲಿದೆ ಎಂಬ ಸುದ್ದಿಯೂ ಇದೆ.
ಜಿಯೊ ಇ–ಬೈಸಿಕಲ್ನ ಮೂಲ ಮಾದರಿಯು ಪೆಡಲ್ನೊಂದಿಗೆ ಮತ್ತು ಸಾಮಾನ್ಯ ರೇಂಜ್ನೊಂದಿಗೆ ₹29,999ಕ್ಕೆ ಲಭ್ಯ
ಮಧ್ಯಮ ಶ್ರೇಣಿಯ ಇ–ಬೈಸಿಕಲ್ನಲ್ಲಿ ಎಕ್ಸ್ಟೆಂಡೆಡ್ ಬ್ಯಾಟರಿ, ಬ್ಯಾಟರಿ ಮರುಪೂರಣಗೊಳ್ಳುವ ರಿಜನರೇಟಿವ್ ಬ್ರೇಕಿಂಗ್ ಸೌಲಭ್ಯವಿದ್ದು, ಇದು ₹32,999ಕ್ಕೆ ಲಭ್ಯ.
ಉನ್ನತ ಶ್ರೇಣಿಯಲ್ಲಿ ಸ್ಮಾರ್ಟ್ ಡಿಸ್ಪ್ಲೇ, ಜಿಪಿಎಸ್, IoT ತಂತ್ರಜ್ಞಾನವನ್ನೂ ಅಳವಡಿಸಲಾಗಿದ್ದು, ಇದು ₹35 ಸಾವಿರಕ್ಕೆ ಲಭ್ಯ ಎಂದು ವರದಿಯಾಗಿದೆ.
ಜಿಯೊ ಸೈಕಲ್ನಲ್ಲಿ ಇದೆ ಎನ್ನಲಾದ ಸೌಲಭ್ಯಗಳು
80 ಕಿ.ಮೀ. ವರೆಗೂ ಬ್ಯಾಟರಿ ರೇಂಜ್, ಯಾವುದೇ ಹವಾಮಾನಕ್ಕೂ ಹಾನಿಗೊಳಗಾಗದ ಎಲ್ಇಡಿ ಪ್ಯಾನೆಲ್ ಹೊಂದಿದ್ದು, ವೇಗ, ಬ್ಯಾಟರಿ ಮತ್ತು ಜಿಪಿಎಸ್ ತೋರಿಸುವ ವ್ಯವಸ್ಥೆ ಇದರಲ್ಲಿದೆ.
ಬ್ರೇಕ್ ಹಾಕಿದಲ್ಲಿ ಅದರ ಘರ್ಷಣೆಯನ್ನು ವಿದ್ಯುತ್ ಆಗಿ ಪರಿವರ್ತಿಸುವ ರಿಜನರೇಟಿವ್ ಬ್ರೇಕಿಂಗ್ ವ್ಯವಸ್ಥೆ ಇದೆ. 5ಜಿ ಸಂಪರ್ಕದೊಂದಿಗೆ ಐಒಟಿ ಇಂಟಿಗ್ರೇಷನ್ ಇದರಲ್ಲಿದೆ. ಇದರಿಂದ ಈ ಸೈಕಲ್ನಲ್ಲೂ ಸ್ಮಾರ್ಟ್ ನೆಟ್ವರ್ಕ್ ಮತ್ತು ರಿಯಲ್ ಟೈಂ ಟ್ರ್ಯಾಕಿಂಗ್ ಇದೆ.
ಸುರಕ್ಷತೆಗೆ ಆಟೊ ಲಾಕಿಂಗ್ ಮತ್ತು ಜಿಪಿಎಸ್ ಭದ್ರತೆಯೂ ಇದರಲ್ಲಿದೆ. ಹೀಗಾಗಿ ಸೈಕಲ್ ಕಳುವಾಗುವ ಭಯ ಕಾಡದು.
ಮಾಹಿತಿ ಪ್ರಕಾರ 2025ರ ಅಂತ್ಯದಲ್ಲಿ ಜಿಯೊ ಇ–ಸೈಕಲ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಅಧಿಕೃತ ಮಾಹಿತಿಯಷ್ಟೇ ಹೊರಬೀಳಬೇಕಿದೆ.
ಜಿಯೊ ಇ–ಬೈಕ್ ಇತರ ಸೈಕಲ್ನೊಂದಿಗೆ ಹೋಲಿಸಿ ನೋಡಿದರೆ, ಸದ್ಯ ಹಿರೊ ಲೆಕ್ಟ್ರೊ ಸಿ3 ಮತ್ತು ಇಮೊಟೊರಾಡ್ ಎಕ್ಸ್2 ಇದೇ ಮಾದರಿಯ ಇ–ಸೈಕಲ್ಗಳಾದರೂ, ಸಾಕಷ್ಟು ಭಿನ್ನತೆ ಹೊಂದಿವೆ.
ಜಿಯೊ ಇ–ಸೈಕಲ್ ಬೆಲೆ ₹30 ಸಾವಿರದಿಂದ ₹35 ಸಾವಿರವರೆಗೂ ಲಭ್ಯ. ಹೀರೊ ಲೆಕ್ಟ್ರೊ ಸಿ3 ಬೆಲೆ ₹28 ಸಾವಿರ ಹಾಗೂ ಇಮೊಟೊರಾಡ್ ಎಕ್ಸ್2 ₹30,500ಗೆ ಲಭ್ಯ.
ಬ್ಯಾಟರಿ ರೇಂಜ್ ವಿಭಾಗಕ್ಕೆ ಬಮದಲ್ಲಿ ಜಿಯೊ ಇ–ಬೈಕ್ ಒಂದು ಸಂಪೂರ್ಣ ಚಾರ್ಜ್ಗೆ 80 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದೆನ್ನಲಾಗುತ್ತಿದೆ. ಹೀರೊ ಲೆಕ್ಟ್ರೊ ಸಿ3 40 ಕಿ.ಮೀ. ಹಾಗೂ ಇಮೊಟೊರಾಡ್ ಎಕ್ಸ್2 50 ಕಿ.ಮೀ. ರೇಂಜ್ ಹೊಂದಿದೆ.
ಸದ್ಯದ ಮಾಹಿತಿ ಪ್ರಕಾರ ಜಿಯೊ ಇ–ಬೈಕ್ ಹಲವು ಆಧುನಿಕ ತಂತ್ರಜ್ಞಾನದೊಂದಿಗೆ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಂಡಿರುವ ಮಾಹಿತಿ ಇದೆ. ಜತೆಗೆ ಇತರ ಪ್ರತಿಸ್ಪರ್ಧಿ ಕಂಪನಿಗಳ ಇ–ಸೈಕಲ್ಗಳ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂದಾಜಿದೆ. ಮೇಲ್ನೋಟಕ್ಕೆ ಜಿಯೊ ಇ–ಬೈಕ್ ಉತ್ತಮ ಎಂದೆನಿಸಿದರೂ, ಬಿಡುಗಡೆಯವರೆಗೂ ಕಾಯುವುದು ಸೂಕ್ತ.
ಜಿಯೊ ತನ್ನ ಮಾರಾಟ ಮಳಿಗೆಗಳಲ್ಲಿ, ತನ್ನದೇ ಇ–ಕಾಮರ್ಸ್ ಪೋರ್ಟಲ್ನಲ್ಲಿ ಹಾಗೂ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲೂ ಮಾರಾಟ ಮಾಡುವ ಸಾಧ್ಯತೆಗಳಿವೆ.
ಇದರೊಂದಿಗೆ ತೋರಿಸಿರುವ ಚಿತ್ರ ಕಾಲ್ಪನಿಕವಾದದ್ದು. ಇದನ್ನು ಮೈಕ್ರೊಸಾಫ್ಟ್ ಡಿಸೈನರ್ ಕೃತಕ ಬುದ್ಧಿಮತ್ತೆ ಬಳಸಿ ಸಿದ್ಧಪಡಿಸಲಾಗಿದೆ.