ವರ್ಷದಿಂದ ವರ್ಷಕ್ಕೆ ಬಿಸಿಲ ಝಳ ಏರುತ್ತಲೇ ಸಾಗುತ್ತಿದೆ. ಇದರಿಂದ ತ್ವಚೆಯ ಜತೆಗೆ ಜೀವ ರಕ್ಷಣೆಯೂ ಅತ್ಯಗತ್ಯ. ಇದರೊಂದಿಗೆ ನಾವು ಹೆಚ್ಚಾಗಿ ಪ್ರೀತಿಸುವ ನಮ್ಮ ಬೈಕ್, ಸ್ಕೂಟರ್‌ಗಳನ್ನೂ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಬೇಕಿರುವುದೂ ಅನಿವಾರ್ಯ. ಅದಕ್ಕಾಗಿ ಒಂದಷ್ಟು ಸಲಹೆಗಳನ್ನು ಅನುಭವಗಳ ಆಧಾರದಲ್ಲಿ ತಜ್ಞರು ನೀಡಿದ್ದಾರೆ.
ಪೆಟ್ರೋಲ್ ಚಾಲಿತ ಬೈಕ್‌ಗಳಲ್ಲಿ ಇಂಧನವು ಸದಾಕಾಲ ಟ್ಯಾಂಕ್‌ನಲ್ಲಿ ಇರಲಿದೆ. ಜತೆಗೆ, ಎಂಜಿನ್ ಆಯಿಲ್, ಬ್ರೇಕ್ ಆಯಿಲ್ ಹೀಗೆ ಹಲವು ಬಗೆಯ ತೈಲಗಳು ನಿರ್ವಹಣೆಗೆ ಅಗತ್ಯ. ಬಿಸಿಲಿನ ತಾಪಕ್ಕೆ ಇವುಗಳು ಬಿಸಿಯಾಗುವುದೂ ಪ್ರಕೃತಿ ಸಹಜ. ಆದರೆ ಅದನ್ನು ತಣ್ಣಗಿಟ್ಟಷ್ಟೂ ಬೈಕ್‌ಗಳು ಬೆಂಕಿಗೆ ಆಹುತಿಯಾಗುವ ಸಾಧ್ಯತೆ ಕಡಿಮೆ.
ಇದಕ್ಕಾಗಿ ಬಹಳಷ್ಟು ಮಾರ್ಗೋಪಾಯಗಳಿವೆ. ಇರುವ ಕೆಲ ಅತ್ಯುತ್ತಮವಾದದ್ದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
- ಬೇಸಿಗೆ ಆರಂಭವಾಗುತ್ತಿದ್ದಂತೆ ಬೈಕ್‌ನಲ್ಲಿರುವ ಕೂಲೆಂಟ್ ಅನ್ನು ಬದಲಿಸುವುದು ಸೂಕ್ತ. ಇದಕ್ಕಾಗಿ ಮೊಟೊಲ್ (Motul) ಕೂಲೆಂಟ್ ಉತ್ತಮ ಪರಿಹಾರ. ₹428ಕ್ಕೆ ಸಿಗುವ ಈ ದ್ರವವು ಬೈಕ್‌ಗಳು ಹೆಚ್ಚು ಬಿಸಿಯಾಗುವುದನ್ನು ತಪ್ಪಿಸಲಿವೆ.
- ಲಿಕ್ವಿ ಮೊಲಿ ಕಂಪನಿಯು ಟ್ಯಾಂಕ್ ಶೂಟರ್ ಎಂಬ ಲಿಕ್ವಿಡ್ ಹೊರತಂದಿದೆ. ₹10 ಲೀಟರ್ ಪೆಟ್ರೋಲ್‌ಗೆ ಇದರ ಒಂದು ಪುಟ್ಟ ಡಬ್ಬಿಯನ್ನು ಸುರಿಯಬೇಕು. ಇದರಿಂದ ಎಂಜಿನ್, ಕಾರ್ಹೊರೇಟರ್, ಫ್ಯುಯಲ್ ಇಂಜೆಕ್ಟರ್ ಶುಚಿಯಾಗಲಿದೆ. ಮೈಲೆಜ್ ಕೂಡಾ ಹೆಚ್ಚಲಿದೆ. ಇದರ ಬೆಲೆ ₹384
- ಲಿಕ್ವಿ ಮಾಲಿ ಕಂಪನಿಯದ್ದೇ ಎಡಿಟಿವ್ ಶೂಟರ್ ಎಂಬ ಪುಟ್ಟ ಟ್ಯೂಬ್‌ನಲ್ಲಿರುವ ಅಂಶವನ್ನು ಎಂಜಿನ್ ಆಯಿಲ್ ಹಾಕಿದ ನಂತರ ಹಾಕಬೇಕು. ಇದರಿಂದ ಎಂಜಿನ್ ಮೃದುವಾಗಿ ಕಾರ್ಯನಿರ್ವಹಿಸಲಿದೆ. ಇಂಧನ ಕ್ಷಮತೆಯೂ ಹೆಚ್ಚಲಿದೆ. ಇದರ ಬೆಲೆ ₹345
- ಎಂಜಿನ್‌ಗೆ ಸೆಮಿ ಅಥವಾ ಪೂರ್ಣ ಪ್ರಮಾಣದ ಸಿಂಥೆಟಿಕ್ ಆಯಿಲ್ ಅನ್ನೇ ಬಳಸಿ. ಇದರಿಂದ ಎಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ, ಬೈಕ್‌ಗಳು ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ತಡೆಯಲೂ ಬಹುದು.
ಈ ಬೇಸಿಗೆಯಲ್ಲಿ ಲಾಂಗ್ ಡ್ರೈವ್ ಹೋಗಬೇಕೆಂದುಕೊಂಡವರು ತಮ್ಮ ರಕ್ಷಣೆಯ ಜತೆಗೆ ಬೈಕ್‌ಗಳನ್ನೂ ರಕ್ಷಿಸಿಕೊಳ್ಳುವುದು ಅತ್ಯಗತ್ಯ. ಹೀಗಾಗಿ ಇಂಥ ಮಾಹಿತಿಗಳನ್ನು ಬೈಕರ್‌ಗಳ ಜತೆಗೆ ಪರಸ್ಪರ ಹಂಚಿಕೊಳ್ಳುವುದರಿಂದ ಅವರೂ ಎಲ್ಲರಂತೆ ಬೈಕ್‌ಗಳ ಆರೋಗ್ಯ ಕಾಪಾಡಲು ಸಹಕಾರಿ.
ನಿಮಗೆ ಈ ಕುರಿತು ಇನ್ನಷ್ಟು ಮಾಹಿತಿ ಇದ್ದಲ್ಲಿ ಅಥವಾ ಇನ್ಯಾವುದೇ ಮಾರ್ಗೋಪಾಯಗಳಿದ್ದಲ್ಲಿ ಕಮೆಂಟ್ ಮಾಡಿ ತಿಳಿಸಿ. ನಿಮ್ಮದೇ ಹೆಸರಿನಲ್ಲಿ ಅವುಗಳನ್ನೂ ಪ್ರಕಟಿಸಲಾಗುವುದು.