ಕಿಯಾದ ಹೊಸ ಕಾರು ಸೈರೊಸ್, ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಸುರಕ್ಷತೆಯ ಮಾನದಂಡದಲ್ಲಿ ಭಾರತ್ ಹೊಸ ಕಾರು ಅಸ್ಸೆಸ್ಮೆಂಟ್ ಪ್ರೋಗ್ರಾಮ್ (BNCAP)ನ ಪಂಚತಾರಾ ಮಾನ್ಯತೆ ಪಡೆದಿದೆ.
ಕಾರಿನೊಳಗಿನ ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯಲ್ಲೂ ಸೈರೊಸ್ ಉತ್ತಮ ಎಂದು ಸಾಬೀತುಪಡಿಸಿದೆ. 32ರಲ್ಲಿ 30.21 ಅಂಕಗಳನ್ನು ಹಾಗೂ ಮಕ್ಕಳ ಸುರಕ್ಷತೆಯಲ್ಲಿ 49 ಅಂಕಗಳಲ್ಲಿ 44.42 ಪಡೆದಿದೆ. ಒಟ್ಟಾರೆಯಾಗಿ ಸೈರೊಸ್‌ನ ಸುರಕ್ಷತೆಯನ್ನು ಹೋಲಿಸುವುದಾದರೆ ಮಹೀಂದ್ರಾದ ಇತ್ತೀಚಿನ ಬಿಇ 6 ನಷ್ಟೇ 5 ಸ್ಟಾರ್ ರೇಟಿಂಗ್ ಪಡೆದಿದೆ.
ಮುಂಭಾಗದ ಬ್ಯಾರಿಯರ್ ಟೆಸ್ಟ್‌ನಲ್ಲಿ ಸೈರಸ್ 16 ಅಂಕಗಳಲ್ಲಿ 14.21 ಪಡೆದಿದೆ. ಅದರಲ್ಲೂ ಪ್ರಯಾಣಿಕರ ತಲೆ, ಕುತ್ತಿಗೆ ಮತ್ತು ಎದೆ ಭಾಗವನ್ನು ಸುರಕ್ಷಿತವಾಗಿಡುವಲ್ಲೂ ಇದು ಉತ್ತಮ ಎಂದಿದೆ. ಪಕ್ಕದಿಂದ ಎದುರಾಗಬಹುದಾದ ಆಘಾತವನ್ನೂ ಸೈರೊಸ್ ಉತ್ತಮವಾಗಿ ನಿರ್ವಹಿಸಬಲ್ಲದು. 16 ಅಂಶಗಳಲ್ಲಿ 16 ಪಡೆದಿದೆ. ಬಲವಾದ ಪೋಲ್ ಆಘಾತ ಟೆಸ್ಟ್‌ನಲ್ಲೂ ಸೈರೊಸ್ ಪಾಸ್ ಆಗಿದೆ.
ಕಿಯಾ ಸೈರೊಸ್‌ನಲ್ಲಿ 16 ಸ್ವಯಂ ಚಾಲಿತ ಸುರಕ್ಷತಾ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಲ್ಲಿ 2ನೇ ಹಂತದ ಎಡ್ಯಾಸ್ ಇದ್ದು, ಇದರೊಂದಿಗೆ 20 ಬಗೆಯ ಆ್ಯಕ್ಟಿವ್ ಮತ್ತು ಪ್ಯಾಸಿವ್ ಸುರಕ್ಷತಾ ಸಾಧನಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಎಸ್‌ಯುವಿ 6 ಏರ್‌ಬ್ಯಾಗ್‌ಗಳೊಂದಿಗೆ ಲಭ್ಯ ಎಂದು ವರದಿಯಾಗಿದೆ.