ಮಹೀಂದ್ರಾ & ಮಹೀಂದ್ರಾ (M&M) ಮತ್ತು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಭಾರತದಲ್ಲಿ ಜಂಟಿ ಉದ್ಯಮವನ್ನು (JV) ಸ್ಥಾಪಿಸಲು ಮಾತುಕತೆ ನಡೆಸುತ್ತಿರುವುದು ತಿಳಿದಿರುವ ವಿಷಯವಾದರೂ, ಇದು ಈಗ ಅಂತಿಮ ಹಂತಕ್ಕೆ ತಲುಪಿದೆ.
ಉಭಯ ವಾಹನ ತಯಾರಕರ ನಡುವೆ ಸಂಭಾವ್ಯ ಒಪ್ಪಂದ ಅಥವಾ ತಿಳಿವಳಿಕೆ ಒಪ್ಪಂದದ (MoU) ವರದಿಗಳು ಕೆಲ ದಿನಗಳಿಂದ ವ್ಯಾಪಕ ಚರ್ಚೆಯಲ್ಲಿತ್ತು. ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಎರಡೂ ಕಂಪನಿಗಳ ಹಿರಿಯ ಅಧಿಕಾರಿಗಳು ಮುಂಬೈನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಸಹಯೋಗವನ್ನು ಮುಂದುವರಿಸಲು ಮತ್ತು ಅದರ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆಯಾಗಿ, ಮಹೀಂದ್ರಾ & ಮಹೀಂದ್ರಾ ಫೋಕ್ಸ್‌ವ್ಯಾಗನ್ ಗ್ರೂಪ್‌ನೊಂದಿಗೆ ನಡೆಯುತ್ತಿರುವ ಸಹಯೋಗವನ್ನು ಅಂಗೀಕರಿಸುವ ಹೇಳಿಕೆಯನ್ನು ನೀಡಿತು. ಯಾವುದೇ ಔಪಚಾರಿಕ ತೀರ್ಮಾನಕ್ಕೆ ಇನ್ನೂ ತಲುಪಿಲ್ಲವಾದರೂ, ಚರ್ಚೆಗಳು ನಡೆಯುತ್ತಿವೆ ಎಂದು ಕಂಪನಿ ದೃಢಪಡಿಸಿದೆ.
M&M ಮತ್ತು Skoda ನಡುವಿನ ಒಡಂಬಡಿಕೆಯಲ್ಲಿ ಏನೇನು ಒಳಗೊಂಡಿರುತ್ತದೆ?
ಈ ಒಡಂಬಡಿಕೆಯ ಭಾಗವಾಗಿ, ಭವಿಷ್ಯದ ಕಾರುಗಳ ಅಭಿವೃದ್ಧಿಯನ್ನು ಸುಗಮಗೊಳಿಸಲು ಎರಡು ಕಂಪನಿಗಳು ವೆಚ್ಚ ತಗ್ಗಿಸುವುದು, ತಂತ್ರಜ್ಞಾನ ಮತ್ತು ವಾಹನಗಳ ಪ್ಲಾಟ್‌ಫಾರ್ಮ್ ಹಂಚಿಕೊಳ್ಳುವ ಗುರಿಯನ್ನು ಹೊಂದಿವೆ. ಸ್ಕೋಡಾ ಭಾರತದಲ್ಲಿ VW ಗ್ರೂಪ್‌ನ ಕಾರ್ಯತಂತ್ರವನ್ನು ಮುನ್ನಡೆಸುತ್ತದೆ ಎಂದೆನ್ನಲಾಗಿದೆ.
ಆದಾಗ್ಯೂ, ಪ್ರಸ್ತುತ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಮಾರಾಟ ಮಾಡುತ್ತಿರುವ ಸೆಡಾನ್‌ಗಳು ಮತ್ತು SUV ಗಳನ್ನು JV ಒಳಗೊಂಡಿರುವುದಿಲ್ಲ ಅಥವಾ VW ಗ್ರೂಪ್‌ನ ಭಾಗವಾಗಿರುವ ಔಡಿ, ಪೋರ್ಷೆ ಮತ್ತು ಲಂಬೋರ್ಘಿನಿಯಂತಹ ಐಷಾರಾಮಿ ಬ್ರಾಂಡ್‌ಗಳನ್ನು ಒಳಗೊಂಡಿರುವುದಿಲ್ಲ. ಪ್ರೀಮಿಯಂ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ತಮ್ಮ ವಿಶಿಷ್ಟ ಗುರುತನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಕೆಟಿಂಗ್ ಮತ್ತು ಮಾರಾಟ ಕಾರ್ಯಗಳು ಪ್ರತ್ಯೇಕ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಸ್ಕೋಡಾ 50 ರಷ್ಟು ಪಾಲನ್ನು M&M ಗೆ ಬಿಟ್ಟುಕೊಡಲಿದೆ
ಈ ವಾರದ ಆರಂಭದಲ್ಲಿ, ಆಟೋಕಾರ್ ಪ್ರೊಫೆಷನಲ್‌ನ ಮತ್ತೊಂದು ವರದಿಯು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಶೇಕಡ 50 ರಷ್ಟು ಪಾಲನ್ನು M&M ಗೆ ನೀಡಲು ಚಿಂತಿಸುತ್ತಿದೆ ಎಂದು ಹೇಳಿತ್ತು, ಒಪ್ಪಂದದ ಮೌಲ್ಯಮಾಪನವು 800 ಶತಕೋಟಿ ಡಾಲರ್‌ನಿಂದ 1 ಬಿಲಿಯನ್ ಡಲರ್ ನಡುವೆ ಇರಲಿದೆ ಅಂದಾಜಿಸಲಾಗಿದೆ. ಒಪ್ಪಂದದ ಮಾತುಕತೆಗಾಗಿ ಸ್ಕೋಡಾದ ಉನ್ನತ ಆಡಳಿತವು ಪ್ರಸ್ತುತ ಭಾರತದಲ್ಲಿದೆ ಮತ್ತು ಎರಡೂ ಪಕ್ಷಗಳು ಪ್ರಾಥಮಿಕ ತಿಳಿವಳಿಕೆಯನ್ನು ತಲುಪಿವೆ ಎಂದು ವರದಿಯು ಸೂಚಿಸಿದೆ.
ಈ JV ಕಾರ್ಯರೂಪಕ್ಕೆ ಬಂದರೆ, ಯುರೋಪಿಯನ್ ಬ್ರ್ಯಾಂಡ್‌ನ ತಾಂತ್ರಿಕ ಸಾಮರ್ಥ್ಯ ಮತ್ತು ಜಾಗತಿಕ ವ್ಯವಸ್ಥೆಗಳೊಂದಿಗೆ ವಾರ್ಷಿಕವಾಗಿ 3 ಲಕ್ಷ ಯುನಿಟ್‌ಗಳ ಸ್ಕೋಡಾ ಫೋಕ್ಸ್‌ವ್ಯಾಗನ್‌ನ ಉತ್ಪಾದನಾ ಸಾಮರ್ಥ್ಯಕ್ಕೆ M&M ಪ್ರವೇಶವನ್ನು ಪಡೆಯುತ್ತದೆ. ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಸಾಕಷ್ಟು ಆಸ್ತಿಗಳನ್ನು ಹೊಂದಿದೆ, ಇದನ್ನು ಭಾರತದಲ್ಲಿ ಹೆಚ್ಚುವರಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಬಳಸಿಕೊಳ್ಳಬಹುದು.
ಪ್ರತಿಯಾಗಿ, ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಆಂತರಿಕ ದಹನಕಾರಿ ಎಂಜಿನ್ (ICE) ಮಾದರಿಗಳು ಮತ್ತು ಎಲೆಕ್ಟ್ರಿಕ್ ವಾಹನಗಳು (EV ಗಳು) ಎರಡಕ್ಕೂ ಮಹೀಂದ್ರದ ಕಡಿಮೆ ವೆಚ್ಚದ ವಾಹನಗಳ ಪ್ಲಾಟ್‌ಫಾರ್ಮ್‌ನಿಂದ ಪ್ರಯೋಜನ ಸಿಗಲಿದೆ.
ಪ್ರಸ್ತುತ 8,40,000 ಯೂನಿಟ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ M&M, ಸ್ಕೋಡಾ VW ಸಾಮರ್ಥ್ಯದೊಂದಿಗೆ ಸಂಯೋಜಿಸಿದಾಗ ವಾರ್ಷಿಕವಾಗಿ 10 ಲಕ್ಷ ಕಾರುಗಳ ತಯಾರಿಕೆಯ ಗುರಿಯನ್ನು ಮೀರಿಸಬಹುದು. ಇದು ಭಾರತದ ಸ್ಪರ್ಧಾತ್ಮಕ ವಾಹನ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಸ್ಕೋಡಾ ಆಟೋ VW ನಲ್ಲಿ 50 ಪ್ರತಿಶತ ಪಾಲನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್‌ನಂತಹ ಮುಂದಿನ ಪೀಳಿಗೆಯ ಕಾಂಪ್ಯಾಕ್ಟ್ SUV ಗಳಿಗೆ ಫೋಕ್ಸ್‌ವ್ಯಾಗನ್‌ನ MQB A0 37 ಪ್ಲಾಟ್‌ಫಾರ್ಮ್ ಅನ್ನು ಬದಲಾಯಿಸಬಹುದು.
ಮಹೀಂದ್ರಾದ ಹೆಚ್ಚಿನ ಹೂಡಿಕೆಯು ನೇರ ನಗದು ಒಳಗೊಂಡಿರುವುದಿಲ್ಲ ಆದರೆ ವಾಹನ ವೇದಿಕೆಗಳು ಮತ್ತು ತಂತ್ರಜ್ಞಾನಗಳಂತಹ ನಗದು-ರಹಿತ ಆಸ್ತಿಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ವರದಿಗಳು ಸೂಚಿಸುತ್ತವೆ. ಚಕನ್ ಸ್ಥಾವರದಲ್ಲಿ ಸಾಮರ್ಥ್ಯ ವಿಸ್ತರಣೆ ಸೇರಿದಂತೆ ಒಪ್ಪಂದಕ್ಕೆ 4,000 ಕೋಟಿ ಮತ್ತು 5,000 ಕೋಟಿ ರೂಪಾಯಿಗಳ ನಡುವೆ ಹೂಡಿಕೆ ಮಾಡಲು M&M ಯೋಜಿಸಿದೆ.
ಭಾರತದಲ್ಲಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ನ 1 ಬಿಲಿಯನ್ ಯುರೋ ಹೂಡಿಕೆ
ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ತನ್ನ “ಇಂಡಿಯಾ 2.0” ಕಾರ್ಯತಂತ್ರದ ಭಾಗವಾಗಿ ಭಾರತದಲ್ಲಿ 1 ಬಿಲಿಯನ್ ಯುರೋಗಳನ್ನು ಹೂಡಿಕೆ ಮಾಡಲು ಹಿಂದೆ ಬದ್ಧವಾಗಿತ್ತು. ಆದಾಗ್ಯೂ, ಈ ಹೂಡಿಕೆಯಿಂದ ಕಂಪನಿಯ ನಿರೀಕ್ಷೆಗಳು ಸಂಪೂರ್ಣವಾಗಿ ಸಾಕಾರಗೊಂಡಿಲ್ಲ, ಇದು ಮಹೀಂದ್ರಾ ಜೊತೆ ಪಾಲುದಾರಿಕೆಯಲ್ಲಿ ಆಸಕ್ತಿಯನ್ನು ವಿವರಿಸುತ್ತದೆ.
ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಮಹಾರಾಷ್ಟ್ರದ ರಾಜ್ಯ ಸರ್ಕಾರದೊಂದಿಗೆ 15,000 ಕೋಟಿ ರೂಪಾಯಿಗಳ ಹೂಡಿಕೆಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. 2028 ರ ವೇಳೆಗೆ ಭಾರತದ ಕಾರ್ಪೊರೇಟ್ ಸರಾಸರಿ ಇಂಧನ ದಕ್ಷತೆಯ (CAFE-3) ಮಾನದಂಡಗಳನ್ನು ಪೂರೈಸಲು ಕಂಪನಿಯು 2 ಶತಕೋಟಿಗೂ ಹೆಚ್ಚು ಡಾಲರ್ ಹೂಡಿಕೆ ಮಾಡಬೇಕಾಗುತ್ತದೆ, ಭವಿಷ್ಯದ ಅಪಾಯಗಳು ಮತ್ತು ಲಾಭದಾಯಕತೆಯನ್ನು ನಿರ್ವಹಿಸಲು ಪಾಲುದಾರಿಕೆಗಳ ಅನ್ವೇಷಣೆಗೆ ಇದು ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.