ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಕಂಪನಿಯ 5 ಡೋರ್‌ಗಳಿರುವ ಥಾರ್ ರಾಕ್ಸ್‌ನ ಯಶಸ್ಸಿನ ನಂತರ, ಇದೀಗ ಹಿಂದಿನ 3 ಡೋರ್ ಥಾರ್ ಮೇಲೆ ಕಂಪನಿ ಭಾರೀ ರಿಯಾಯಿತಿ ಘೋಷಿಸಿದೆ.
2 ವೀಲ್ ಡ್ರೈವ್ ಹಾಗೂ 4 ವೀಲ್ ಡ್ರೈವ್‌ನ ವೇರಿಯಂಟ್‌ಗಳ ಮೇಲೆ ಸುಮಾರು ₹1.5ಲಕ್ಷಗಳವರೆಗೂ ಪ್ರಯೋಜನ ಸಿಗಲಿದೆ. ಥಾರ್ ಎಲ್ಎಕ್ಸ್ ಪೆಟ್ರೋಲ್ ಎಟಿ 2 ಡಬ್ಲ್ಯೂಡಿ, ಎಲ್ಎಕ್ಸ್ ಡೀಸೆಲ್ ಎಂಟಿ 2 ಡಬ್ಲ್ಯೂಡಿ, ಎಲ್ಎಕ್ಸ್ ಪೆಟ್ರೋಲ್ ಎಂಟಿ 4 ಡಬ್ಲ್ಯೂಡಿ, ಎಲ್ಎಕ್ಸ್ ಪೆಟ್ರೋಲ್ ಎಂಟಿ 4 ಡಬ್ಲ್ಯೂಡಿ, ಎಲ್ಎಕ್ಸ್ ಡೀಸೆಲ್ ಎಂಟಿ 4 ಡಬ್ಲ್ಯೂಡಿ ಮತ್ತು ಎಲ್ಎಕ್ಸ್ ಡೀಸೆಲ್ 4ಡಬ್ಲ್ಯುಡಿ 4ಡಬ್ಲ್ಯುಡಿಗಳ ಮೇಲೆ ₹1.50 ಲಕ್ಷವರೆಗೂ ರಿಯಾಯಿತಿಯೊಂದಿಗೆ ಲಭ್ಯವಿದೆ.
ಮಹೀಂದ್ರಾ ಥಾರ್ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 2.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿ ಹೆಚ್ ಪಿ ಪವರ್ ಹಾಗೂ 300 ಎನ್ ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರಿನ ಡೀಸೆಲ್ ಎಂಜಿನ್ 117 ಬಿ ಹೆಚ್ ಪಿ ಪವರ್ ಹಾಗೂ 300 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಥಾರ್ ಹೊರತುಪಡಿಸಿ, ಮಹೀಂದ್ರಾ ಎಕ್ಸ್ ಯುವಿ 400 ಎಲೆಕ್ಟ್ರಿಕ್ ಎಸ್ ಯುವಿಯ ಎಲ್ ಪ್ರೊ ವೇರಿಯಂಟ್ ಮೇಲೆ ₹3 ಲಕ್ಷ ರಿಯಾಯಿತಿಯನ್ನು ಕಂಪನಿ ನೀಡುತ್ತಿದೆ.