ಭಾರತದ 77ನೇ ಸ್ವಾತಂತ್ರ್ಯೋತ್ಸವದ (ಆ. 15) ದಿನದಂದು ಮಹೀಂದ್ರ ತನ್ನ ಬಹು ನಿರೀಕ್ಷಿತ 5 ಬಾಗಿಲುಗಳ ಥಾರ್ ರಾಕ್ಸ್ ಅನ್ನು ಪರಿಚಯಿಸುತ್ತಿದೆ. ಇದರಲ್ಲಿನ ವಿಶೇಷತೆಗಳು ಈಗಾಗಲೇ ಬಹಿರಂಗಗೊಂಡಿದೆ. ಹಿಂಬದಿಯಲ್ಲಿ ತ್ರಿಕೋನಾಕಾರದ ಕ್ವಾರ್ಟರ್ ಗಾಜು, ಆ್ಯಂಗುಲಾರ್ ವೀಲ್ ಆರ್ಕ್, ಬಾಗಿದ ಮೇಲ್ಛಾವಣಿ ಕಾಣಬಹುದಾಗಿದೆ. 2.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 ಟರ್ಬೊ ಪೆಟ್ರೋಲ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ. ಇವುಗಳು ಬಹು ಆಯ್ಕೆಯ ಪವರ್ ಔಟ್ಪುಟ್ ಹಾಗೂ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಲಭ್ಯ.
ಹಿಂದಿನ 3 ಬಾಗಿಲುಗಳ ಥಾರ್ಗಿಂತ ಭಿನ್ನವಾಗಿರುವ 5 ಡೋರ್ಗಳ ಥಾರ್ ರಾಕ್ಸ್, ಬಿ–ಪಿಲ್ಲರ್ ತುಸು ದೊಡ್ಡದಾಗಿದೆ. ಇದು ಏಕೆ ಎಂದು ಕೆಲವರು ಪ್ರಶ್ನೆ ಮಾಡಿರುವುದೂ ಇದೆ. ಆದರೆ ರೂಫ್ ಇಲ್ಲದಿದ್ದರೂ, ಕಾರಿನ ಅಂದ ಹಾಗೂ ಸುರಕ್ಷತೆ ಕಡಿಮೆಯಾಗದಿರಲಿ ಎಂಬ ಕಾರಣ ಇದರ ಹಿಂದಿದೆ. ಬಾಗಿರುವ ಮೇಲ್ಛಾವಣಿ ಕುರಿತೂ ಹಲವರು ಭಿನ್ನ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಹಿಂಬದಿಯ ಚಕ್ರಗಳ ಮೇಲೆ ವೃತ್ತಾಕಾರದ ಆರ್ಕ್ ನೀಡಲಾಗಿದೆ. ಹಿಂದಿನ ಆವೃತ್ತಿಯಲ್ಲಿ ಚೌಕಾಕಾರದ ಆರ್ಕ್ ನೀಡಲಾಗಿತ್ತು. ಅಲಾಯ್ ವೀಲ್ ಕೂಡಾ ಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.
ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು
ರಾಕ್ಸ್ನಲ್ಲಿ ಎರಡು ಬಗೆಯ ಎಂಜಿನ್ ಆಯ್ಕೆಗಳಿವೆ. 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಇದು, ಇದು ಎರಡು ಮಾದರಿಗಳಲ್ಲಿ ಲಭ್ಯ. 160 ಅಶ್ವಶಕ್ತಿ ಅಥವಾ 170 ಅಶ್ವಶಕ್ತಿಯ ಆಯ್ಕೆ ಗ್ರಾಹಕರದ್ದು. ಡೀಸೆಲ್ನಲ್ಲಿ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಇದ್ದು, 132 ಅಶ್ವಶಕ್ತಿ ಹಾಗೂ 171 ಅಶ್ವಶಕ್ತಿಯ ಆಯ್ಕೆಯಲ್ಲಿ ಲಭ್ಯ. ಈ ಎರೂ ಎಂಜಿನ್ಗಳು 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ಮಿಷನ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ನಲ್ಲಿ ಲಭ್ಯ.
ಆಫ್ ರೋಡ್ ಚಾಲನಾ ಸಾಮರ್ಥ್ಯ
3 ಡೋರ್ ಮಾದರಿಗೆ ಹೋಲಿಸಿದಲ್ಲಿ, ಹೊಸ 5 ಡೋರ್ನ ಥಾರ್ ರಾಕ್ಸ್ನಲ್ಲಿ ಸಸ್ಪೆನ್ಷನ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸ್ಕಾರ್ಪಿಯೊದ ಎನ್– ಡಿರೈವ್ಡ್ ಎಫ್ಎಸ್ಡಿ ಶಾಕ್ ಅಬ್ಸಾರ್ಬರ್ ಹಾಗೂ ಪೆಂಟಾ ಲಿಂಕ್ ರೇರ್ ಸಸ್ಪೆನ್ಶನ್ ಅಳವಡಿಸಲಾಗಿದೆ. ಇದರೊಂದಿಗೆ ಮುಂಭಾಗದ ಗಾಲಿಗಳಿಗೆ ಎಲೆಕ್ಟ್ರಾನಿಕ್ ಬ್ರೇಕ್ ಲಾಕಿಂಗ್ ಡಿಫರೆನ್ಶಿಯಲ್ ಹಾಗೂ ಹಿಂಬದಿಯ ಗಾಲಿಗಳಿಗೆ ಮೆಕ್ಯಾನಿಕಲ್ ಲಾಕಿಂಗ್ ಡಿಫರೆನ್ಶಿಯಲ್ ನೀಡಲಾಗಿದೆ.
ಆಫ್ರೋಡ್ನಲ್ಲಿ 5 ಡೋರ್ ಥಾರ್ ರಾಕ್ಸ್ 23.6 ಡಿಗ್ರಿ ಬ್ರೇಕ್ಓವರ್ ಆ್ಯಂಗಲ್ ನಿರ್ವಹಿಸಬಹಲ್ಲದು. ಇದು 41.3 ಡಿಗ್ರಿಯ ಅಪ್ರೋಚ್ವರೆಗೂ ವಿಸ್ತರಿಸುವ ಹಾಗೂ 36.1 ಡಿಗ್ರಿ ಡಿಪಾರ್ಚರ್ ಆ್ಯಂಗಲ್ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ನೀರಿನಲ್ಲಿ ಹೋಗುವ ಸಾಮರ್ಥ್ಯ 650 ಮಿ.ಮೀ. ವರೆಗೂ ನೀಡಲಾಗಿದೆ.
ಒಳಾಂಗಣದ ವಿನ್ಯಾಸ
ಥಾರ್ ರಾಕ್ಸ್ನಲ್ಲಿ ಈ ಬಾರಿ ಎರಡು ಥೀಮ್ಗಳಲ್ಲಿ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಆಸನಗಳು ವಿಶಾಲವಾಗಿ, ಆರಾಮವಾಗಿವೆ. ಹಿಂಬದಿ ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ. ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ, ಉತ್ತಮ ಸ್ಪೀಕರ್ಗಳು, 360 ಡಿಗ್ರಿ ಕ್ಯಾಮೆರಾ, ಎಡ್ಯಾಸ್, ಕೀಲೆಸ್ ಎಂಟ್ರಿ, ಡುಯಲ್ ಝೋನ್ ಆಟೊಮ್ಯಾಟಿಕ್ ಕ್ಲೈಮೆಟಿಕ್ ಕಂಟ್ರೋಲ್ ಹೊಂದಿದೆ.
ಕಾರಿನ ಉದ್ದ ಹಾಗೂ ಅಗಲ
3 ಡೋರ್ನ ಥಾರ್ಗೆ ಹೋಲಿಸಿದಲ್ಲಿ 5 ಡೋರ್ಗಳ ಥಾರ್ ರಾಕ್ಸ್ 300 ಮಿ.ಮೀ. ಹೆಚ್ಚು ಉದ್ದವಿದೆ. ತುಸು ಎತ್ತರ ಹಾಗೂ ಅಗಲವೂ ಇದೆ. ರಾಕ್ಸ್ 4X4 ಹಾಗೂ 4X2 ಮಾದರಿಗಳಲ್ಲಿ ಲಭ್ಯ. 4X4 ಮಾದರಿಯಲ್ಲಿ ಕಡಿಮೆ ಅನುಪಾತದ ಗೇರ್ಬಾಕ್ಸ್ ನೀಡಲಾಗಿದೆ. ಜತೆಗೆ ಮಲ್ಟಿ ಲಾಕಿಂಗ್ ಡಿಫರೆನ್ಶಿಯಲ್ ಮತ್ತು ಬ್ರೇಕ್ ಲಾಕಿಂಗ್ ಆ್ಯಕ್ಸೆಲ್ ನೀಡಲಾಗಿದೆ.