Mahindra XUV700 Ebony: ಕತ್ತಲೆಯಲ್ಲೂ ಹೊಳೆಯುವ ಡಾರ್ಕ್‌ ಎಡಿಷನ್‌

Mahindra XUV700 Ebony Edition

Mahindra ಡಾರ್ಕ್‌ ಎಡಿಷನ್‌ ಪಟ್ಟಿಗೆ ತನ್ನ ಹೊಚ್ಚ ಹೊಸ ಎಕ್ಸ್‌ಯುವಿ700 ಅನ್ನು ಸೇರಿಸಿದೆ. ‘ಎಬೋನಿ’ ಎಡಿಷನ್‌ ಎಂದು ಕರೆದಿರುವ ಈ ಕಾರು ₹19.64 ಲಕ್ಷದಿಂದ ₹24.14 ಲಕ್ಷ (ಎಕ್ಸ್ ಶೊರೂಂ ಬೆಲೆ) ಬೆಲೆಗೆ ಲಭ್ಯ. ಇದು ಸಂಪೂರ್ಣ ಕಪ್ಪು. ಒಳಗೂ ಕತ್ತಲೆ, ಹೊರಗೂ ಕತ್ತಲೆ ಎಂಬಂತೆ.

ಎಕ್ಸ್‌ಯುವಿಯ ಎಎಕ್ಸ್‌7 ಮತ್ತು ಎಎಕ್ಸ್‌7 ಎಲ್‌ ಟ್ರಿಮ್‌ ಆಧರಿಸಿರುವುದೇ ಎಬೊನಿ ಆವೃತ್ತಿ.

Mahindra XUV700 Ebony: ಒಳ, ಹೊರಭಾಗ

ಬಹುನಿರೀಕ್ಷಿತ ಎಕ್ಸ್‌ಯುವಿ700 ಎಬೋನಿ ಒಳಾಂಗಣದಲ್ಲಿ ಎಲ್ಲವೂ ಗಾಢ ಕಪ್ಪು ಬಣ್ಣದ್ದಾಗಿದೆ. ಕಪ್ಪು ವರ್ಣದ ಲೆದರ್ ಸೀಟ್‌ ಮತ್ತು ಟ್ರಿಮ್‌ಗಳೂ ಅದೇ ಬಣ್ಣದ್ದು. ಕಪ್ಪು ವರ್ಣದೊಂದಿಗೆ ಬೆಳ್ಳಿಯಂತೆ ಹೊಳೆಯುವ ಸೆಂಟರ್ ಕನ್ಸೋಲ್‌ ಮತ್ತು ಡೋರ್‌ ಪ್ಯಾನೆಲ್‌ಗಳನ್ನು ನೀಡಲಾಗಿದೆ. ಬೂದು ಬಣ್ಣದ ರೂಫ್‌ ಲೈನರ್‌ ಹೈಲೈಟ್‌. ಜತೆಗೆ ಡುಯಲ್‌ ಟೋನ್ನೊಂದಿಗೆ ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತದೆ. ಏರ್‌ ವೆಂಟ್‌ಗಳೂ ಕಪ್ಪು ವರ್ಣದ್ದಾಗಿದ್ದು ಇಡೀ ಕ್ಯಾಬಿನ್‌ನ ಕಳೆಯನ್ನು ಹೆಚ್ಚಿಸಿದೆ.

18 ಇಂಚಿನ ಬೃಹತ್‌ ಅಲಾಯ್‌ ವೀಲ್‌ನಿಂದಾಗಿ ಎಸ್‌ಯುವಿ ಇನ್ನಷ್ಟು ರಗಡ್‌ ಆಗಿ ಕಾಣಿಸಲಿದೆ. ಮುಂಭಾಗ ಹಾಗೂ ಟೈಲ್‌ಗೇಟ್‌ ಬಳಿ ಎಬೋನಿ ಬ್ಯಾಡ್ಜ್‌ ನೀಡಲಾಗಿದೆ. ಇದರೊಂದಿಗೆ ಎಕ್ಸ್‌ಯುವಿ700 ಎಂಟು ಮೊನೊಟೋನ್‌ ಮತ್ತು ಐದು ಡುಯಲ್‌ ಟೋನ್‌ ಎಕ್ಸ್‌ಟೀರಿಯರ್‌ ಆಯ್ಕೆಯಲ್ಲಿ ಸಿಗಲಿದೆ.

Mahindra XUV700 Ebony: Features

ಚಾಲಕನ ಆಸನ 6 ಹಂತಗಳಲ್ಲಿ ಎಲೆಕ್ಟ್ರಿಕಲ್‌ ಆಗಿ ಹೊಂದಿಸಬಹುದಾಗಿದೆ. ಕಾರನ್ನು ಓಡಿಸುವ ಮನೆಯವರ ಎತ್ತರಕ್ಕೆ ಹೊಂದಾಣಿಕೆ ಮಾಡಿಕೊಂಡು ಅದನ್ನು ನೆನಪಿನಲ್ಲೂ ಇಟ್ಟುಕೊಳ್ಳುತ್ತದೆ ಎಬೋನಿ. ಆಟೊ ಹೆಡ್‌ಲೈಟ್‌ ಮತ್ತು ಆಟೊ ವೈಪರ್‌ ನೀಡಲಾಗಿದೆ. ಡುಯಲ್ ಝೋನ್‌ ಕ್ಲೈಮೆಟ್ ಕಂಟ್ರೋಲ್‌ ನೀಡಲಾಗಿದೆ. 12 ಸ್ಪೀಕರ್‌ಗಳುಲ್ಳ ಸೌಂಡ್‌ ಸಿಸ್ಟಂ ಇದರಲ್ಲಿದೆ. ವೆಂಟಿಲೇಟೆಡ್ ಸೀಟ್‌ಗಳು, ರೇರ್‌ ಎಲ್‌ಇಡಿ ಸೀಕ್ವೆನ್ಶಿಯಲ್‌ ಟರ್ನ್ ಇಂಡಿಕೇಟರ್ಸ್‌, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ ಹಾಗೂ ಇನ್ನೂ ಹಲವು ನೀಡಲಾಗಿದೆ.

Mahindra XUV700 Ebony: ಎಂಜಿನ್‌ ಸಾಮರ್ಥ್ಯ ಹೇಗಿದೆ

ಮಹೀಂದ್ರಾ ಎಕ್ಸ್‌ಯುವಿ700 ಎಬೋನಿ ಆವೃತ್ತಿ ಎಸ್‌ಯುವಿ ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್‌ ಮಾದರಿಯಲ್ಲಿ ಲಭ್ಯ. 6 ಸ್ಪೀಡ್ ಮ್ಯಾನುಯಲ್‌ ಹಾಗೂ 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟೊಮ್ಯಾಟಿಕ್‌ ಗೇರ್‌ ಬಾಕ್ಸ್‌ ಇದರಲ್ಲಿದೆ. 2.0 ಲೀಟರ್ ಟರ್ಬೊಚಾರ್ಜ್ಡ್‌ ಎಂಸ್ಟಾಲಿಯನ್ ಪೆಟ್ರೋಲ್‌ ಎಂಜಿನ್‌ ಇದ್ದು ಇದು 200 ಬಿಎಚ್‌ಪಿ ಮತ್ತು 380 ನ್ಯೂಟನ್ ಮೀಟರ್‌ ಶಕ್ತಿ ಉತ್ಪಾದಿಸಬಲ್ಲದು. ಮತ್ತೊಂದು ಮಾದರಿಯಲ್ಲಿ 2.2 ಲೀಟರ್ ಎಂಹಾಕ್‌ ಡೀಸೆಲ್ ಎಂಜಿನ್‌ ಇದ್ದು, 185 ಅಶ್ವಶಕ್ತಿ ಮತ್ತು 450 ನ್ಯೂಟನ್ ಮೀಟರ್‌ ಟಾರ್ಕ್ ಉತ್ಪಾದಿಸುವ ಎಂಜಿನ್‌ ಇದಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ