ಭಾರತದ ಮುಂಚೂಣಿ ಕಾರು ತಯಾರಿಕಾ ಕಂಪನಿ ಮಾರುತು ಸುಜುಕಿಯು ತನ್ನ ಗ್ರಾಹಕರ ಬೆಡಿಕೆಗಳನ್ನು ತ್ವರಿತವಾಗಿ ಪೂರೈಸಲು ಹೆಚ್ಚುವರಿ ವಾಹನಗಳ ತಯಾರಿಕೆಗೆ ಮುಂದಾಗಿದೆ.
ಇದಕ್ಕಾಗಿ ತನ್ನ ಮನೆಸಾರ್ ತಯಾರಿಕಾ ಘಟಕದಲ್ಲಿ ಹೆಚ್ಚುವರಿ ವಾಹನ ಜೋಡಣೆ ವಿಭಾಗವನ್ನು ಸ್ಥಾಪಿಸಿದೆ. ಮನೆಸಾರ್‌ನಲ್ಲಿ ಒಟ್ಟು ಮೂರು ತಯಾರಿಕಾ ಘಕಟಕಗಳಿದ್ದು, ಈ ಹೆಚ್ಚುವರಿ ವಿಭಾಗವು ಪ್ಲಾಂಟ್–ಎ ನಲ್ಲಿ ಸ್ಥಾಪಿಸಲಾಗಿದೆ. ಈ ನೂತನ ಜೋಡಣಾ ಘಕವು ವರ್ಷಕ್ಕೆ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಮನೆಸಾರ್ ಘಟಕದಿಂದ ವರ್ಷಕ್ಕೆ 9 ಲಕ್ಷ ಕಾರುಗಳು ತಯಾರುಗುತ್ತಿವೆ.
2007ರಲ್ಲಿ ಈ ಘಟಕ ಕಾರ್ಯಾರಂಭ ಮಾಡಿತು. ಆಗ ವರ್ಷಕ್ಕೆ ಒಂದು ಲಕ್ಷ ಕಾರು ಇಲ್ಲಿ ತಯಾರಾಗುತ್ತಿತ್ತು. ಹಂತ ಹಂತವಾಗಿ ಕಂಪನಿ ತನ್ನ ತಯಾರಿಕಾ ಸಾಮರ್ಥ್ಯ ಹೆಚ್ಚಿಸಿತು. ಕಳೆದ ಫೆಬ್ರವರಿವರೆಗೂ ಈ ಘಕದಿಂದ ಒಟ್ಟು 95 ಲಕ್ಷ ಕಾರುಗಳು ತಯಾರಾಗಿವೆ.
ಇದೀಗ ಈ ನೂತನ ಜೋಡಣಾ ಘಟಕದಿಂದ ಮೊದಲು ತಯಾರಾದ ಕಾರು ಎರ್ಟಿಗಾ. ಈ ಘಟಕದಲ್ಲಿ ವ್ಯಾಗನ್–ಆರ್, ಎಸ್–ಪ್ರೆಸ್ಸೊ, ಸೆಲೆರಿಯೊ, ಡಿಝೈರ್, ಸಿಯಾಜ್, ಬ್ರೀಝಾ, ಎರ್ಟಿಗಾ ಹಾಗೂ ಎಕ್ಸ್‌ಎಲ್6. ಈ ನೂತನ ಘಟಕ ಸ್ಥಾಪನೆಯಿಂದ ಕಾಯ್ದಿರಿಸಿದ ಕಾರುಗಳನ್ನು ಕಾಯುವ ಅವಧಿಯು ಕಡಿಮೆಯಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತನ್ನ ತಯಾರಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡಿರುವ ಮಾರುತಿ ಸುಜುಕಿ, ವರ್ಷಕ್ಕೆ 40 ಲಕ್ಷ ಕಾರುಗಳ ತಯಾರಿಕೆಗೆ ಅಣಿಯಾಗಿದೆ.
2024 ಮಾರ್ಚ್ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿಗೆ ₹3,877 ಕೋಟಿ ಲಾಭ
ಭಾರತೀಯರ ನೆಚ್ಚಿನ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಂಪನಿಯೂ ಪ್ರಸಕ್ತ 2023–24ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹3,877 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ವರದಿಯಾಗಿದೆ.
2022–23ರ ಇದೇ ಅವಧಿಯಲ್ಲಿ ₹2,623 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಈಗ ಶೇ 47.8ರಷ್ಟು ಏರಿಕೆಯಾಗಿದೆ. ಹೆಚ್ಚಿದ ವಾಹನಗಳ ಮಾರಾಟದಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಷೇರುಪೇಟೆಗೆ ಕಳೆದ ಶುಕ್ರವಾರ ತಿಳಿಸಿದೆ.
ಮೊದಲ ಬಾರಿಗೆ 2023–24ರ ಆರ್ಥಿಕ ವರ್ಷದಲ್ಲಿ ಕಂಪನಿಯ ವಾಹನಗಳ ಒಟ್ಟು ಮಾರಾಟವು 20 ಲಕ್ಷ ದಾಟಿದೆ. ಸತತ ಮೂರನೇ ವರ್ಷವೂ ಕಂಪನಿ ಅಗ್ರ ರಫ್ತುಗಾರನಾಗಿ ಮುಂದುವರಿದಿದೆ. ದೇಶದ ಒಟ್ಟು ಪ್ರಯಾಣಿಕ ವಾಹನದ ರಫ್ತಿನಲ್ಲಿ ಕಂಪನಿ ಶೇ 41.8ರಷ್ಟು ಪಾಲು ಹೊಂದಿದೆ ಎಂದು ತಿಳಿಸಿದೆ.
ಬಿಎಸ್‌ಇಯಲ್ಲಿ ಮಾರುತಿ ಸುಜುಕಿಯ ಪ್ರತಿ ಷೇರಿನ ಬೆಲೆ ₹12,687ಕ್ಕೆ ಮುಟ್ಟಿದೆ.