e-Vitara: ಸಂಪೂರ್ಣ ಎಲೆಕ್ಟ್ರಿಕ್ ಕಾರು ಹೊರತಂದ ಮಾರುತಿ

Maruti e Vitara

ಮಾರುತಿ ಸುಜುಕಿ ತನ್ನ ಮೊದಲ ಆಲ್‌ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುತ್ತಿದ್ದು, ಇದಕ್ಕಾಗಿ ವಿಟಾರಾವನ್ನು ಆಯ್ಕೆ ಮಾಡಿಕೊಂಡಿದೆ. ಇದನ್ನು 2025ರ ಆಟೊ ಎಕ್ಸ್‌ಪೋನಲ್ಲಿ ಬಹಿರಂಗಗೊಳಿಸಲಾಗಿತ್ತು. ಅದು ಈಗ ಮಾರುಕಟ್ಟೆಗೆ ಕಾಲಿಟ್ಟಿದೆ.

ಟಾಟಾ ಕರ್ವ್‌ ಇವಿ, ಹ್ಯುಂಡೇ ಕ್ರೇಟಾ ಎಲೆಕ್ಟ್ರಿಕ್‌, ಎಂಜಿ ಝಡ್‌ಎಸ್‌ ಇವಿ ಮತ್ತು ಮಹೀಂದ್ರಾ ಬಿಇ 6 ಕಾರುಗಳ ರೇಸ್‌ಗೆ ಇ–ವಿಟಾರಾ ಸೇರಿದೆ. ಇವಿಎಕ್ಸ್‌ ಪರಿಕಲ್ಪನೆಗೆ ಸೇರಿದ ಇ–ವಿಟಾರಾ ಎರಡು ಮಾದರಿಯ ಬ್ಯಾಟರಿಯಲ್ಲಿ ಲಭ್ಯ. ಅದೂ ಅಲ್ಲದೆ, ಟೊಯೊಟಾದೊಂದಿಗೆ ತನ್ನ ಕಾರುಗಳನ್ನು ಹಂಚಿಕೊಳ್ಳುತ್ತಿರುವುದರಿಂದ, ತನ್ನ ಕಾರುಗಳಲ್ಲಿ ಆಲ್‌ ವೀಲ್‌ ಡ್ರೈವ್‌ ಹೊಂದಿರುವ ಏಕೈಕ ಮಾದರಿ ಇದು ಎಂದೆನಿಸಿಕೊಂಡಿದೆ. ಇದೇ ವರ್ಷದ ಕೊನೆಯಲ್ಲಿ ಅರ್ಬನ್ ಕ್ರೂಸರ್ ಕೂಡಾ ಇವಿ ರೂಪದಲ್ಲಿ ಬರುವ ಸಾಧ್ಯತೆ ಇದೆ.

ಇ–ವಿಟಾರಾದಲ್ಲಿ ಎಲೆಕ್ಟ್ರಾನಿಕ್‌ ಪಾರ್ಕಿಂಗ್‌ ಬ್ರೇಕ್‌ ಮತ್ತು ಆಟೊ ಹೋಲ್ಡ್‌ ಇದೆ. ಇಕೊ, ಸಾಮಾನ್ಯ ಮತ್ತು ಸ್ಪೋರ್ಟ್‌ ಮೋಡ್‌ ಹೊಂದಿದೆ. ಆಟೊ ಕ್ಲೈಮೆಟ್‌ ಕಂಟ್ರೋಲ್‌, ವೈರ್‌ಲೆಸ್‌ ಫೋನ್‌ ಚಾರ್ಜರ್‌, ವೈರ್‌ಲೆಸ್‌ ಆ್ಯಪಲ್‌ ಕಾರ್‌ಪ್ಲೇ, ಆ್ಯಂಡ್ರಾಯ್ಡ್‌ ಆಟೊ, ವೆಂಟಿಲೇಟರ್‌ ಸೀಟ್‌ಗಳು, ಪವರ್ಡ್‌ ಡ್ರೈವರ್‌ ಸೀಟ್‌, ಹಿಂದಕ್ಕೆ ಬಾಗುವ ರಿಕ್ಲೇನಿಂಗ್‌ ಹಿಂಬದಿಯ ಆಸನಗಳು ಜತಗೆ 60:40 ಸ್ಪ್ಲಿಟ್‌ ಸೀಟ್‌, 7 ಏರ್‌ಬ್ಯಾಗ್‌ ಮತ್ತು ಲವೆಲ್ 2 ಎಡ್ಯಾಸ್‌ ಸೂಟ್‌ ಇದೆ.

ಮಾರುತಿ ಇ–ವಿಟಾರಾ ಬೆಲೆ

ಮಹೀಂದ್ರಾ ಬಿಇ6 ಕಾರು ₹18.90 ಲಕ್ಷದಿಂದ 26.90 ಲಕ್ಷದವರೆಗೆ ಲಭ್ಯ. ಟಾಟಾ ಕರ್ವ್‌ ಇವಿ ಕಾರು ₹17.49 ಲಕ್ಷದಿಂದ ₹21.99 ಲಕ್ಷದವರೆಗೆ ಲಭ್ಯ. ಎಂಜಿ ಝಡ್‌ಎಸ್‌ ಇವಿ ಕಾರು ₹18.98 ಲಕ್ಷದಿಂದ ₹25.75 ಲಕ್ಷವರೆಗೆ ಲಭ್ಯ.

ಮಾರುತಿ ಸುಜುಕಿ ಇ ವಿಟಾರಾ ಕಾರು ಗುಜರಾತ್‌ನ ಪ್ಲಾಂಟ್‌ನಲ್ಲಿ ತಯಾರಾಗುತ್ತಿದ್ದು, ಜಪಾನ್ ಮತ್ತು ಯುರೋಪ್‌ಗೂ ರಫ್ತಾಗಲಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ