ಇತ್ತೀಚೆಗೆ ಬಿಡುಗಡೆ ಯಾದ ಮಾರುತಿ ಸುಜುಕಿಯ ಎಪಿಕ್ ನ್ಯೂ ಸ್ವಿಫ್ಟ್‌ನ 500 ಕಾರುಗಳು ಬೆಂಗಳೂರಿನಲ್ಲಿರುವ ಮಾರುತಿ ಸುಜುಕಿ ಅರೆನಾ ವಿತರಕರಿಂದ ಮಾರಾಟವಾಗಿವೆ.
ಈ ಕಾರುಗಳನ್ನು ಗ್ರಾಹಕರಿಗೆ ಕಂಪನಿ ಏಕಕಾಲಕ್ಕೆ ವಿತರಿಸಿತು. ಈ ಮಾರಾಟದಲ್ಲಿ ಜೆಡ್ ಮಾದರಿ ವಾಹನಗಳ ಮಾರಾಟವು ಶೇ 36ರಷ್ಟಿದೆ. ಇದು ಭಾರತೀಯ ಗ್ರಾಹಕರಲ್ಲಿ ಎಪಿಕ್ ನ್ಯೂ ಸ್ವಿಫ್ಟ್‌ನ ಬೇಡಿಕೆ ಮತ್ತು ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಕಂಪನಿ ಹೇಳಿದೆ.
ಹೊಸ ಅವತಾರದಲ್ಲಿನ ಸ್ವಿಫ್ಟ್‌ನ ವಿನ್ಯಾಸವು ಗ್ರಾಹಕರನ್ನು ಆಕರ್ಷಿಸಲಿದ್ದು, ಉತ್ತಮ ಚಾಲನಾ ಅನುಭವ ನೀಡಲಿದೆ. ಇದರಲ್ಲಿನ ಹೊಸ ಮತ್ತು ಸುಧಾರಿತ ಜೆಡ್ ಸರಣಿಯ ಎಂಜಿನ್ ಪ್ರತಿ ಲೀಟರಿಗೆ 25.75 ಕಿ.ಮೀ. ಮೈಲೇಜ್ ನೀಡಲಿದೆ. 6 ಏರ್‌ಬ್ಯಾಗ್ ಗಳನ್ನು ಹೊಂದಿದ್ದು, ಹೆಚ್ಚು ಸುರಕ್ಷತೆ ನೀಡಲಿದೆ. ಇದರ ಎಕ್ಸ್ ಷೋರೂಂ ಬೆಲೆ ₹6.49 ಲಕ್ಷದಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.