2024ರ ಮಾರ್ಚ್‌ನಲ್ಲಿ ಪಲ್ಸರ್ ಹೊಸ ಅವತಾರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಹಿರೊ ಕಂಪನಿಯ ಮ್ಯಾಕ್ಸಿ ಸ್ಕೂಟರ್ ಜತೆಗೆ, ಹೊಂಡಾದ ಇವಿ ಸ್ಕೂಟರ್ ಕೂಡಾ ಪರಿಚಯಿಸುವ ಸಾಧ್ಯತೆ ಇದೆ.
ಹೀರೊ Xoom 160 ಮತ್ತು Xoom 125R
ಹೀರೊ ಮೊಟಾರ್‌ಕಾಪ್ ಹೀರೊ ಮಾರ್ವಿಕ್ 440 ಅನ್ನು ರಸ್ತೆಗಿಳಿಸಿದೆ. ಇದರೊಂದಿಗೆ ಝೂಮ್ 160 ಹಾಗೂ ಝೂಮ್ 125ಆರ್ ಸ್ಕೂಟರ್ ಕೂಡಾ ಪರಿಚಯಿಸುವ ಸಾಧ್ಯತೆ ಇದೆ. ಈ ಸ್ಕೂಟರ್‌ಗಳು ಈ ಮೊದಲು ಇಐಸಿಎಂಎ 2023ರಲ್ಲಿ ಪ್ರದರ್ಶನ ಕಂಡಿತ್ತು. ಜೂಮ್ 160 ಸ್ಕೂಟರ್ 160ಸಿಸಿ ಮ್ಯಾಕ್ಸಿ ಸ್ಕೂಟರ್ ಆಗಿದೆ. ಮತ್ತೊಂದೆಡೆ ಝೂಮ್ 125 ಆರ್ ಸ್ಕೂಟರ್ 125 ಸಿ.ಸಿ. ಸಾಮರ್ಥ್ಯದ ಸ್ಪೋರ್ಟಿ ಸ್ಕೂಟರ್ ಆಗಿದೆ.
ಬಜಾಜ್ ಪಲ್ಸರ್ ಎನ್‌ಎಸ್400
ಮಾರ್ಚ್‌ನಲ್ಲಿ ಬಜಾಜ್ ಪಲ್ಸರ್ ಎನ್‌ಎಸ್400 ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಬಜಾಜ್‌ನ ಡಾಮಿನಾರ್ 373ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, ಎನ್‌ಎಸ್200ನ ಚಾಸೀಸ್ ಹೊಂದಿದೆ.
ಹಸ್ಕವರ್ನಾ ಸ್ವಾರ್ಟಪಿಲೆನ್ 250– Husqvarna Svartpilen
ಭಾರತಕ್ಕೆ ಇತ್ತೀಚೆಗಷ್ಟೇ ಪ್ರವೇಶ ಪಡೆದ ಹಸ್ಕವರ್ನಾ ಸ್ವಾರ್ಟಪಿಲೆನ್ 401 ಹಾಗೂ ವಿಟ್‌ಪಿಲೆನ್ 250, ಹಸ್ಕ್‌ವರ್ನಾ ಈಗ ಹೊಸ ಮಾದರಿಯ ಸ್ವಾರ್ಟ್‌ಪಿಲೆನ್ 250 ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ಕೆಟಿಎಂ 250 ಡ್ಯೂಕ್ ಮಾದರಿ ಮೇಲೆ ಈ ಬೈಕ್ ಅಭಿವೃದ್ಧಿಗೊಂಡಿದೆ. 249 ಸಿ.ಸಿ. ಲಿಕ್ವಿಡ್ ಕೂಲ್ಡ್, ಏಕ ಸಿಲಿಂಡರ್ ಎಂಜಿನ್ ಅನ್ನು ಇದು ಹೊಂದಿದೆ.
ಹೊಂಡಾ ಆ್ಯಕ್ಟಿವಾ ಎಲೆಕ್ಟ್ರಿಕ್
ಹಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಬರಲಿದೆ ಎಂಬ ಗ್ರಾಹಕರ ನಿರೀಕ್ಷೆ ಈ ವರ್ಷ ಸತ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಆ್ಯಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬೆಲ್ಟ್ ಸಹಿತ ಸ್ವಿಂಗ್‌ಗ್ರಾಮ್ ಮೋಟಾರ್ ಹೊಂದಿದ ಸ್ಕೂಟರ್ ಬಿಡುಗಡೆ ಸಾಧ್ಯತೆ ಇದೆ.